ದಾವಣಗೆರೆ:ಇಲ್ಲಿನ ಕೆ. ಆರ್ ಮಾರುಕಟ್ಟೆಯ ಅಕ್ಕಿ ಅಂಗಡಿಯ ವರ್ತಕರು ಕಾಮಣ್ಣನ ದಹನ ಮಾಡಿದ್ರು. ಈ ಮೂಲಕ ನಾಳೆ ಹೋಳಿಗೆ ಅಧಿಕೃತವಾಗಿ ಚಾಲನೆ ದೊರೆದಂತಾಗಿದೆ. ಒಂದು ಗೋಲಾಕಾರದ ಸಿಮೆಂಟ್ ಇಟ್ಟಿಗೆಗಳನ್ನು ಇರಿಸಿ ಅದರಲ್ಲಿ ಮೊದಲು ಕಟ್ಟಿಗೆ ಜೋಡಿಸಿ, ಅದರ ಮಧ್ಯ ಕಾಮಣ್ಣನ ಫೋಟೊವನ್ನು ಇರಿಸಿ ಜೈ ಶ್ರೀರಾಮ್ ಎಂದು ಘೋಷಣೆ ಕೂಗ್ತಾ ಅಗ್ನಿ ಸ್ಪರ್ಶ ಮಾಡಲಾಯಿತು.
ಇನ್ನು ಅಗ್ನಿಸ್ಪರ್ಶ ಮಾಡುವ ಮೊದಲು ಇಡೀ ಅಕ್ಕಿ ಅಂಗಡಿ ವರ್ತಕರು ಆ ಕಾಮಣ್ಣನ ಸುತ್ತ ಸುತ್ತು ಹಾಕಿದ್ರು. ಅಲ್ಲದೆ ಬಾಯಿ ಬಡಿದುಕೊಂಡು ಕಾಮಣ್ಣನ ಮಕ್ಕಳೇ ಎಂದು ಕೂಗುವ ಮೂಲಕ ಕಾಮಣ್ಣನ ದಹನ ಮಾಡಲಾಯಿತು. ಈ ಮೊದಲು ಕಾಮಣ್ಣನ ದಹನ ಮಾಡಲು ಒಬ್ಬರು ದಹನ ಮಾಡಿದ ಅಗ್ನಿಯನ್ನು ಕದ್ದು ತಂದು ಅಗ್ನಿ ಸ್ಪರ್ಶ ಮಾಡ್ತಿದ್ದರು. ಆದರೆ ಆ ಪ್ರತೀತಿ ಇದೀಗ ಬಹುತೇಕ ಕಾಣೆಯಾಗಿದೆ. ಈ ಮೊದಲು ಕದ್ದು ತಂದ ಬೆಂಕಿಯಿಂದಲೇ ತಮ್ಮ ತಮ್ಮ ಕಾಮಣ್ಣನನ್ನು ಸುಡುತ್ತಿದ್ದನ್ನು ಕೈ ಬಿಡಲಾಗಿದೆ.