ದಾವಣಗೆರೆ:ಜಿಲ್ಲೆಯ ಹಳ್ಳಿ ಟ್ರ್ಯಾಕ್ಟರ್ ಚಾಲಕರ ಪ್ರತಿಭೆ ಅನಾವರಣಗೊಳಿಸಲು ಶನಿವಾರ ಟ್ರ್ಯಾಕ್ಟರ್ ಸ್ಪರ್ಧೆ ಏರ್ಪಡಿಸಲಾಗಿತ್ತು. ನೂರಾರು ಟ್ರ್ಯಾಕ್ಟರ್ ಚಾಲಕರು ಟ್ರ್ಯಾಕ್ಟರ್‌ಸಮೇತ ಭಾಗಿಯಾಗಿ ಬಹುಮಾನಕ್ಕಾಗಿ ಸೆಣಸಿದರು.
ಹರಿಹರ ತಾಲೂಕಿನ ಕೊಕ್ಕನೂರು ಗ್ರಾಮದಲ್ಲಿ ಗಣೇಶ ಹಬ್ಬದ ಪ್ರಯುಕ್ತ ಟ್ರ್ಯಾಕ್ಟರ್ ಪಂದ್ಯಾವಳಿಯನ್ನು ಗ್ರಾಮಸ್ಥರು ಆಯೋಜಿಸಿದ್ದರು. ಭತ್ತದ ಗದ್ದೆಯಲ್ಲಿ ಹೇಗೆ ರೊಳ್ಳೆ ಹೊಡೆಯುತ್ತಾರೋ ಅದೇ ರೀತಿ ಸ್ಪರ್ಧೆಯಲ್ಲೂ ಪ್ರತಿಭೆ ತೋರಿಸಲು ಇದೊಂದು ವೇದಿಕೆಯಾಗಿತ್ತು. ಚಾಲಕರು ಬೇರೆ ಬೇರೆ ಭಂಗಿಯಲ್ಲಿ ಟ್ರ್ಯಾಕ್ಟರ್ ಚಲಾಯಿಸಿ ನೆರೆದಿದ್ದ ಜನರ ಮನರಂಜಿಸಿದರು. ಹಾವೇರಿ, ದಾವಣಗೆರೆ, ಶಿವಮೊಗ್ಗದಿಂದ ಸ್ಪರ್ಧಾಳುಗಳು ಆಗಮಿಸಿದ್ದರು. ನಿಯಮದಂತೆ ಟೈಯರ್ಗಳ ಮಧ್ಯೆ ಟ್ಯಾಕ್ಟರ್ ಅನ್ನು ವೇಗವಾಗಿ ಚಲಾಯಿಸಬೇಕಿತ್ತು.
ಟ್ರ್ಯಾಕ್ಟರ್ ಓಡಿಸುವ ಟೂರ್ನಿ ನಡೆದದ್ದು ಹೀಗೆ. (ETV Bharat) ಆಯೋಜಕ ಕರಿಯಪ್ಪ ಕಡೂರು ಪ್ರತಿಕ್ರಿಯಿಸಿ, "ಟ್ರ್ಯಾಕ್ಟರ್ ಚಾಲಕರು ಅತ್ಯುತ್ತಮವಾಗಿ ಚಾಲನೆ ಮಾಡುತ್ತಾರೆ. ಅವರ ಈ ವಿಶೇಷ ಪ್ರತಿಭೆಯನ್ನು ಹೊರತರಲು ನಾವು ಈ ಸ್ಪರ್ಧೆ ಆಯೋಜಿಸಿದ್ದೆವು. ಕಡಿಮೆ ಅವಧಿಯಲ್ಲಿ ಟ್ರ್ಯಾಕ್ಟರ್ ಚಲಾಯಿಸಿದವರಿಗೆ ಬಹುಮಾನ ನೀಡಲಾಗಿದೆ. ಮೊದಲನೇ ಬಹುಮಾನ 8 ಸಾವಿರ ರೂ, ಎರಡನೇ ಬಹುಮಾನ 5 ಸಾವಿರ ರೂ, ಮೂರನೇ ಬಹುಮಾನ 3 ಸಾವಿರ ರೂ ಮತ್ತು ನಾಲ್ಕನೇ ಬಹುಮಾನ, 1,500 ಸಾವಿರ ರೂ ಇಡಲಾಗಿತ್ತು" ಎಂದು ಮಾಹಿತಿ ನೀಡಿದರು.
"ಒಂದು ನಿಮಿಷದ ಅವಧಿಯಲ್ಲಿ ಟ್ರ್ಯಾಕ್ಟರ್ನಲ್ಲಿ ತಿರುವುಗಳನ್ನು ಸುತ್ತಿ ಬರುವುದು ಸವಾಲಿನ ಕೆಲಸ" ಎಂದು ಗ್ರಾಮಸ್ಥರಾದ ಲಕ್ಷ್ಮಪ್ಪ ಹೇಳಿದರು.
ಇದನ್ನೂ ಓದಿ:ಕಿವುಡರ ರಾಜ್ಯ ಮಟ್ಟದ ಕ್ರೀಡಾಕೂಟ: 25 ಜಿಲ್ಲೆಗಳಿಂದ 500ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗಿ - Deaf State Level Games