ಕರ್ನಾಟಕ

karnataka

ETV Bharat / state

Karnataka News Today Live: ಒಂದೇ ಕ್ಲಿಕ್​ನಲ್ಲಿ ಕರ್ನಾಟಕದ ಇಂದಿನ ಪ್ರಮುಖ ಸುದ್ದಿಗಳ ಮಾಹಿತಿ - Live Update

Top news
ಇಂದಿನ ಪ್ರಮುಖ ಸುದ್ದಿಗಳು (ETV Bharat)

By ETV Bharat Karnataka Team

Published : Aug 28, 2024, 7:38 AM IST

Updated : Aug 28, 2024, 9:00 PM IST

ಬೆಂಗಳೂರು:ರಾಜ್ಯದ ಇಂದಿನ ಪ್ರಮುಖ ಸುದ್ದಿಗಳ ಮಾಹಿತಿ ಇಲ್ಲಿದೆ. ಬುಧವಾರದ ಅಗ್ರ ವಿದ್ಯಮಾನಗಳನ್ನು ಒಂದೇ ಕ್ಲಿಕ್​ನಲ್ಲಿ ತಿಳಿದುಕೊಳ್ಳಿ.

LIVE FEED

8:55 PM, 28 Aug 2024 (IST)

ಕಾರವಾರ ನೌಕಾನೆಲೆಯೊಳಗಿನ ಗೌಪ್ಯ ಮಾಹಿತಿ ಸೋರಿಕೆ ಆರೋಪ: ಮೂವರು ಎನ್‌ಐಎ ವಶಕ್ಕೆ

ಕಾರವಾರ: ನೌಕಾನೆಲೆಯೊಳಗಿನ ಫೋಟೋ ಸೇರಿದಂತೆ ಇತರೆ ಗೌಪ್ಯ ಮಾಹಿತಿಗಳನ್ನು ವಿದೇಶಿ ಅಧಿಕಾರಿಗಳಿಗೆ ನೀಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಇಬ್ಬರು ಹೊರ ಗುತ್ತಿಗೆ ನೌಕರರು ಸೇರಿದಂತೆ ಮೂವರನ್ನು ರಾಷ್ಟ್ರದ್ರೋಹದ ಆರೋಪದಡಿ ಎನ್​ಐಎ ಅಧಿಕಾರಿಗಳು ಬುಧವಾರ ವಶಕ್ಕೆ ಪಡೆದಿದ್ದಾರೆ.

ಸಂಪೂರ್ಣ ಸುದ್ದಿಗಾಗಿ ಕ್ಲಿಕ್​ ಮಾಡಿ:ಕಾರವಾರ ನೌಕಾನೆಲೆಯೊಳಗಿನ ಗೌಪ್ಯ ಮಾಹಿತಿ ಸೋರಿಕೆ ಆರೋಪ: ಮೂವರು ಎನ್‌ಐಎ ವಶಕ್ಕೆ - Naval base info leak

ಸಂಗ್ರಹ ಚಿತ್ರ (ETV Bharat)

8:53 PM, 28 Aug 2024 (IST)

ಸಿಎಂ ಪತ್ನಿ ವಿರುದ್ಧ ದೂರು ನೀಡಿದ ಸ್ನೇಹಮಯಿ ಕೃಷ್ಣ: ಆತ ಒಬ್ಬ ಬ್ಲಾಕ್ ಮೇಲರ್ ಎಂದ ಲಕ್ಷ್ಮಣ್​

ಮೈಸೂರು:ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ನಡೆದಿದೆ ಎನ್ನಲಾದ ಅಕ್ರಮ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ವಿರುದ್ಧ ದೂರು ದಾಖಲಾಗಿದೆ.

ಸಂಪೂರ್ಣ ಸುದ್ದಿಗಾಗಿ ಕ್ಲಿಕ್​ ಮಾಡಿ:ಸಿಎಂ ಪತ್ನಿ ವಿರುದ್ಧ ದೂರು ನೀಡಿದ ಸ್ನೇಹಮಯಿ ಕೃಷ್ಣ: ಆತ ಒಬ್ಬ ಬ್ಲಾಕ್ ಮೇಲರ್ ಎಂದ ಲಕ್ಷ್ಮಣ್​ - complaint against CM wife

ಸ್ನೇಹಮಯಿ ಕೃಷ್ಣ, ಎಂ. ಲಕ್ಷ್ಮಣ್ (ETV Bharat)

7:20 PM, 28 Aug 2024 (IST)

ರೇಣುಕಾಸ್ವಾಮಿ ಕೊಲೆ ಪ್ರಕರಣ: ಪವಿತ್ರಾ ಗೌಡ ಸೇರಿ ನಾಲ್ವರ ಜಾಮೀನು ಅರ್ಜಿ ತೀರ್ಪು ಕಾಯ್ದಿರಿಸಿದ ನ್ಯಾಯಾಲಯ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣ ಮೊದಲ ಆರೋಪಿಯಾಗಿರುವ ಪವಿತ್ರಾ ಗೌಡ ಸೇರಿ ನಾಲ್ವರು ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ 57ನೇ ಸಿಟಿ ಸಿವಿಲ್ ಹಾಗೂ ಸೆಷನ್ಸ್ ನ್ಯಾಯಾಲಯವು ತೀರ್ಪು ಕಾಯ್ದಿರಿಸಿದೆ. ಆರೋಪಿಗಳಾದ ಪವಿತ್ರಾ ಗೌಡ ಹಾಗೂ ಅನುಕುಮಾರ್ ಜಾಮೀನು ಅರ್ಜಿ ತೀರ್ಪು ಆ.31ಕ್ಕೆ ಹಾಗೂ ಸೆ.2ರಂದು ವಿನಯ್ ಹಾಗೂ ಕೇಶವಮೂರ್ತಿ ಬೇಲ್ ಭವಿಷ್ಯ ನಿರ್ಧಾರವಾಗಲಿದೆ.

ಸಂಪೂರ್ಣ ಸುದ್ದಿಗಾಗಿ ಕ್ಲಿಕ್​ ಮಾಡಿ:ರೇಣುಕಾಸ್ವಾಮಿ ಕೊಲೆ ಪ್ರಕರಣ: ಪವಿತ್ರಾ ಗೌಡ ಸೇರಿ ನಾಲ್ವರ ಜಾಮೀನು ಅರ್ಜಿ ತೀರ್ಪು ಕಾಯ್ದಿರಿಸಿದ ನ್ಯಾಯಾಲಯ - Renukaswamy murder Case

ಪವಿತ್ರಾ ಗೌಡ (ETV Bharat)

6:54 PM, 28 Aug 2024 (IST)

ಸಚಿವ ಬೈರತಿ ಸುರೇಶ್​ ಪುತ್ರನ ನಿಶ್ಚಿತಾರ್ಥ; ಒಟ್ಟಿಗೆ ಕುಳಿತು ಊಟ ಮಾಡಿದ ರಾಜ್ಯಪಾಲ ಗೆಹ್ಲೋಟ್​- ಡಿ ಕೆ ಶಿವಕುಮಾರ್

ಬೆಂಗಳೂರು :ಮುಡಾ ಹಗರಣ ಸಂಬಂಧ ರಾಜಭವನ ಹಾಗೂ ರಾಜ್ಯ ಸರ್ಕಾರದ ನಡುವೆ ಕೆಲ ದಿನಗಳಿಂದ ತಿಕ್ಕಾಟ ನಡೆಯುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇದರ ನಡುವೆ ಇಂದು ಖಾಸಗಿ ಹೋಟೆಲ್​​ನಲ್ಲಿ ರಾಜ್ಯಪಾಲರು ಹಾಗೂ ಡಿಸಿಎಂ ಡಿ. ಕೆ ಶಿವಕುಮಾರ್ ಅವರು ಮುಖಾಮುಖಿಯಾಗಿದ್ದು, ಒಂದೇ ಕಡೆ ಕುಳಿತು ಊಟ ಮಾಡಿದ್ದಾರೆ.

ಸಂಪೂರ್ಣ ಸುದ್ದಿಗಾಗಿ ಕ್ಲಿಕ್​ ಮಾಡಿ:ಸಚಿವ ಬೈರತಿ ಸುರೇಶ್​ ಪುತ್ರನ ನಿಶ್ಚಿತಾರ್ಥ; ಒಟ್ಟಿಗೆ ಕುಳಿತು ಊಟ ಮಾಡಿದ ರಾಜ್ಯಪಾಲ ಗೆಹ್ಲೋಟ್​- ಡಿ ಕೆ ಶಿವಕುಮಾರ್ - Governor and DCM ate lunch

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್​, ಡಿಸಿಎಂ ಡಿ ಕೆ ಶಿವಕುಮಾರ್ ಊಟ ಸವಿದರು (ETV Bharat)

5:56 PM, 28 Aug 2024 (IST)

ಯತ್ನಾಳ್ ಬೆಂಬಲಕ್ಕೆ ಧಾವಿಸಿದ ಬಿಜೆಪಿ ಹಿರಿಯ ನಾಯಕರು; ಸರ್ಕಾರಕ್ಕೆ ಹೋರಾಟದ ಎಚ್ಚರಿಕೆ

ಬೆಂಗಳೂರು : ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಸಕ್ಕರೆ ಕಾರ್ಖಾನೆ ಆರಂಭಕ್ಕೆ ಹೈಕೋರ್ಟ್ ಆದೇಶ ನೀಡಿದೆ. ಹೀಗಿದ್ದರೂ ಎನ್ಒಸಿ ನೀಡದೆ ಮಾಲಿನ್ಯ ನಿಯಂತ್ರಣ ಮಂಡಳಿ ಮೂಲಕ ಸರ್ಕಾರ ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ರಾಜ್ಯ ಬಿಜೆಪಿ ನಾಯಕರು ಆರೋಪಿಸಿದ್ದು, ಯತ್ನಾಳ್ ಬೆಂಬಲಕ್ಕೆ ಧಾವಿಸಿದ್ದಾರೆ. ಪಿಸಿಬಿ, ಸರ್ಕಾರದ ವಿರುದ್ಧ ಹೋರಾಟದ ಎಚ್ಚರಿಕೆ ರವಾನಿಸಿದ್ದಾರೆ.

ಸಂಪೂರ್ಣ ಸುದ್ದಿಗಾಗಿ ಕ್ಲಿಕ್​ ಮಾಡಿ: ಯತ್ನಾಳ್ ಬೆಂಬಲಕ್ಕೆ ಧಾವಿಸಿದ ಬಿಜೆಪಿ ಹಿರಿಯ ನಾಯಕರು; ಸರ್ಕಾರಕ್ಕೆ ಹೋರಾಟದ ಎಚ್ಚರಿಕೆ - Basangouda Yatnal

ಯತ್ನಾಳ್ ಬೆಂಬಲಕ್ಕೆ ಧಾವಿಸಿದ ಬಿಜೆಪಿ ಹಿರಿಯ ನಾಯಕರು (ETV Bharat)

5:54 PM, 28 Aug 2024 (IST)

ಅತ್ಯಾಚಾರ ಸಂತ್ರಸ್ತ ಎನ್ನಲಾದ ಮಹಿಳೆ ಅಪಹರಣ ಆರೋಪ; ರೇವಣ್ಣ ಜಾಮೀನು ಆದೇಶ ಎತ್ತಿಹಿಡಿದ ಹೈಕೋರ್ಟ್

ಬೆಂಗಳೂರು: ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಂದ ಅತ್ಯಾಚಾರಕ್ಕೆ ಒಳಗಾಗಿದ್ದಾರೆ ಎನ್ನಲಾದ ಮಹಿಳೆಯನ್ನು ಅಪಹರಿಸಿದ ಆರೋಪದಲ್ಲಿ ಜೆಡಿಎಸ್ ಶಾಸಕ ಹೆಚ್​.ಡಿ. ರೇವಣ್ಣ ಅವರಿಗೆ ವಿಚಾರಣಾ ನ್ಯಾಯಾಲಯ ಮಂಜೂರು ಮಾಡಿದ್ದ ಜಾಮೀನನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಅಲ್ಲದೆ, ರೇವಣ್ಣ ಅವರಿಗೆ ಮಂಜೂರು ಮಾಡಿದ್ದ ಜಾಮೀನು ರದ್ದು ಕೋರಿ ವಿಶೇಷ ತನಿಖಾ ತಂಡ (ಎಸ್‌ಐಟಿ) ಸಲ್ಲಿಸಿರುವ ಅರ್ಜಿಯನ್ನು ವಜಾಗೊಳಿಸಿದೆ. ಜತೆಗೆ, ಮಹಿಳೆಯ ಅಪಹರಣಕ್ಕೆ ಕಾರಣರಾಗಿದ್ದ ಇತರ ಆರೋಪಿಗಳಾದ ಹಾಸನದ ಸತೀಶ್ ಬಾಬಣ್ಣ ಮತ್ತಿತರರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಮಾನ್ಯ ಮಾಡಿರುವ ಹೈಕೋರ್ಟ್, ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ಸಹ ಮಂಜೂರು ಮಾಡಿದೆ.

ಸಂಪೂರ್ಣ ಸುದ್ದಿಗಾಗಿ ಕ್ಲಿಕ್​ ಮಾಡಿ: ಅತ್ಯಾಚಾರ ಸಂತ್ರಸ್ತ ಎನ್ನಲಾದ ಮಹಿಳೆ ಅಪಹರಣ ಆರೋಪ; ರೇವಣ್ಣ ಜಾಮೀನು ಆದೇಶ ಎತ್ತಿಹಿಡಿದ ಹೈಕೋರ್ಟ್ - Kidnap Case

ರೇವಣ್ಣ ಜಾಮೀನು ಆದೇಶ ಎತ್ತಿಹಿಡಿದ ಹೈಕೋರ್ಟ್ (ETV Bharat)

3:19 PM, 28 Aug 2024 (IST)

ದರ್ಶನ್ ನ್ಯಾಯಾಂಗ ಬಂಧನ ವಿಸ್ತರಣೆ: ಬಳ್ಳಾರಿ ಜೈಲಿಗೆ ಸ್ಥಳಾಂತರ ಹಿನ್ನೆಲೆ ಬಿಗಿ ಬಂದೋಬಸ್ತ್

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿಗಳಾದ ದರ್ಶನ್ ಮತ್ತು ಅವರ ಸಹಚರರ ಸೆರೆವಾಸ ಮುಂದುವರೆದಿದೆ. ಆರೋಪಿಗಳ ನ್ಯಾಯಾಂಗ ಬಂಧನವನ್ನು ಸೆ. 9ರ ವರೆಗೆ ವಿಸ್ತರಿಸಿ 24ನೇ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿದೆ. ಆರೋಪಿಗಳ ನ್ಯಾಯಾಂಗ ಬಂಧನದ ಅವಧಿ ಅಂತ್ಯ ಹಿನ್ನೆಲೆ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು.

ಸಂಪೂರ್ಣ ಸುದ್ದಿಗಾಗಿ ಕ್ಲಿಕ್​ ಮಾಡಿ: ದರ್ಶನ್ ನ್ಯಾಯಾಂಗ ಬಂಧನ ವಿಸ್ತರಣೆ: ಬಳ್ಳಾರಿ ಜೈಲಿಗೆ ಸ್ಥಳಾಂತರ ಹಿನ್ನೆಲೆ ಬಿಗಿ ಬಂದೋಬಸ್ತ್ - DARSHAN JUDICIAL CUSTODY

ದರ್ಶ (ETV Bharat)

3:12 PM, 28 Aug 2024 (IST)

ಚಿಕ್ಕಬಳ್ಳಾಪುರ: ಗುಂಡಿ ಅಗೆದಷ್ಟು ರಾಶಿ ರಾಶಿ ಪುರಾತನ ನಾಗರಕಲ್ಲು ಪತ್ತೆ!

ಚಿಕ್ಕಬಳ್ಳಾಪುರ:ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಾಲಯ ಮತ್ತು ಶ್ರೀ ಆಂಜನೇಯಸ್ವಾಮಿ ದೇವಾಲಯಗಳು ಚಿಂತಾಮಣಿ ತಾಲೂಕಿನಲ್ಲಿರುವ ಪುರಾತನ ದೇವಾಲಯಗಳು. ಇದೀಗ ದೇವಾಲಯದ ಸಮೀಪದಲ್ಲಿರುವ ಆಲಂಬಗಿರಿ ಕೆರೆ ಅಚ್ಚುಕಟ್ಟು ಪ್ರದೇಶದ ರಸ್ತೆ ಹೊಂದಿಕೊಂಡಿರುವ ಜಾಗದಲ್ಲಿ ರಾಶಿ ರಾಶಿ ನಾಗರಕಲ್ಲುಗಳು ಪತ್ತೆಯಾಗಿವೆ.

ಪತ್ತೆಯಾದ ಪುರಾತನ ನಾಗರಕಲ್ಲುಗಳು (ETV Bharat)

2:42 PM, 28 Aug 2024 (IST)

ಒಳಮೀಸಲಾತಿ ಜಾರಿಗೆ ಬದ್ಧ, ಹೈಕಮಾಂಡ್ ಜೊತೆ ಚರ್ಚಿಸಿ ಅಂತಿಮ ತೀರ್ಮಾನ ಎಂದ ಸಿಎಂ ಸಿದ್ದರಾಮಯ್ಯ

ಬೆಂಗಳೂರು:ಒಳಮೀಸಲಾತಿ ಜಾರಿ ವಿಚಾರದಲ್ಲಿ ನಾನು ಬದ್ಧನಾಗಿದ್ದೇನೆ. ಈ ಕುರಿತು ಹೈಕಮಾಂಡ್ ಮಟ್ಟದಲ್ಲಿ ಚರ್ಚೆ ನಡೆಸಿ, ನಂತರ ಸಂಪುಟ ಸಭೆಯಲ್ಲಿ ಚರ್ಚಿಸುವ ಮೂಲಕ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಸಂಪೂರ್ಣ ಸುದ್ದಿಗಾಗಿ ಕ್ಲಿಕ್​ ಮಾಡಿ: ಒಳಮೀಸಲಾತಿ ಜಾರಿಗೆ ಬದ್ಧ, ಹೈಕಮಾಂಡ್ ಜೊತೆ ಚರ್ಚಿಸಿ ಅಂತಿಮ ತೀರ್ಮಾನ ಎಂದ ಸಿಎಂ ಸಿದ್ದರಾಮಯ್ಯ - Internal Reservation Implementation

ಸಚಿವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (ETV Bharat)

12:58 PM, 28 Aug 2024 (IST)

ರಾಷ್ಟ್ರಮಟ್ಟದ ಹೋರಾಟಕ್ಕೆ ನಾವೂ ಸಿದ್ಧ - ಪರಮೇಶ್ವರ್​

ಬೆಂಗಳೂರು:ಮುಡಾ ಪ್ರಕರಣವನ್ನು ಬಿಜೆಪಿಯವರು ರಾಷ್ಟ್ರಮಟ್ಟಕ್ಕೆ ಕೊಂಡೊಯ್ದರೆ, ನಾವೂ ಕೂಡ ರಾಷ್ಟ್ರಮಟ್ಟದಲ್ಲಿಯೇ ಹೋರಾಟ ಮಾಡುತ್ತೇವೆ. ಹೋರಾಟದ ಬಗ್ಗೆ ಪಕ್ಷದ ಹೈಕಮಾಂಡ್ ನಿರ್ಧಾರ ಮಾಡಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್​ ಹೇಳಿದ್ದಾರೆ. ಬೆಂಗಳೂರಿನ ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

ಸಂಪೂರ್ಣ ಓದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:ಸಿಎಂ ವಿರುದ್ಧದ ಆರೋಪಕ್ಕೆ ಪುರಾವೆಗಳಿಲ್ಲ, ಕೋರ್ಟ್​ ಪ್ರಕರಣವನ್ನ ಪರಿಗಣಿಸುವುದಿಲ್ಲ ಎಂಬ ನಂಬಿಕೆಯಿದೆ: ಗೃಹ ಸಚಿವ ಜಿ.ಪರಮೇಶ್ವರ

ಡಾ.ಜಿ.ಪರಮೇಶ್ವರ್ (ETV Bharat)

12:33 PM, 28 Aug 2024 (IST)

ಮತ್ತೆ ಇಡಿ ರೇಡ್​

ಬಳ್ಳಾರಿ:ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಮತ್ತೆ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬಳ್ಳಾರಿ, ಕೊಪ್ಪಳ ಹಾಗೂ ರಾಯಚೂರಿನಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿ, ಶೋಧ ಕೈಗೊಂಡಿದ್ದಾರೆ.

ಸಂಪೂರ್ಣ ಓದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:ವಾಲ್ಮೀಕಿ ನಿಗಮದ ಅಕ್ರಮ ಪ್ರಕರಣ: ಬಳ್ಳಾರಿ, ಕೊಪ್ಪಳ, ರಾಯಚೂರಿನಲ್ಲಿ ಮತ್ತೆ ಇಡಿ ದಾಳಿ - Valmiki Corporation Scam

ಇಡಿ ದಾಳಿ (ETV Bharat)

12:33 PM, 28 Aug 2024 (IST)

ದರ್ಶನ್ ನ್ಯಾಯಾಂಗ ಬಂಧನ ಅಂತ್ಯ

ಬೆಂಗಳೂರು:ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ ಎಲ್ಲ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿ ಇಂದು ಅಂತ್ಯಗೊಳ್ಳಲಿದೆ. ದರ್ಶನ್ ಮತ್ತು ಇತರರನ್ನು ಇಂದು ಪೊಲೀಸರು 24ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಿದ್ದಾರೆ. ತದನಂತರ ನ್ಯಾಯಾಲಯದ ಆದೇಶದಂತೆ ಆರೋಪಿಗಳನ್ನು ರಾಜ್ಯದ ವಿವಿಧ ಕಾರಾಗೃಹಗಳಿಗೆ ಸ್ಥಳಾಂತರಿಸಲು ಜೈಲಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.

ಸಂಪೂರ್ಣ ಓದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:ದರ್ಶನ್, ಸಹಚರರ ನ್ಯಾಯಾಂಗ ಬಂಧನ ಇಂದು ಅಂತ್ಯ - Darshan Judicial Custody

ದರ್ಶನ್​ (ETV Bharat)

10:18 AM, 28 Aug 2024 (IST)

ಆರೆಂಜ್ ಅಲರ್ಟ್ ಘೋಷಣೆ

ಬೆಂಗಳೂರು:ರಾಜ್ಯದ ಕರಾವಳಿ ಹಾಗೂ ಮಲೆನಾಡು ಭಾಗದ ಕೆಲ ಜಿಲ್ಲೆಗಳಲ್ಲಿ ಈ ವಾರಪೂರ್ತಿ ಭಾರಿ ಮಳೆಯಾಗಲಿದೆ. ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯು 6 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಕಲಬುರಗಿ, ಬೀದರ್, ಬೆಳಗಾವಿ, ಬಾಗಲಕೋಟೆ, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಎಚ್ಚರಿಕೆ ನೀಡಲಾಗಿದೆ.

ಸಂಪೂರ್ಣ ಓದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ವಾರಪೂರ್ತಿ ಮಳೆ: ಆರೆಂಜ್ ಅಲರ್ಟ್ ಘೋಷಣೆ - Karnataka Rain Forecast

ಮಳೆ (ETV Bharat)

8:07 AM, 28 Aug 2024 (IST)

ಕಲುಷಿತ ನೀರು ಸೇವಿಸಿ ಇಬ್ಬರು ಸಾವು

ಮಂಡ್ಯ:ಕಲುಷಿತ ನೀರು ಸೇವಿಸಿ ಇಬ್ಬರು ವಯೋವೃದ್ಧರು ಮೃತಪಟ್ಟು, ಇತರ ನಾಲ್ವರು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆ.ಆರ್.ಪೇಟೆ ತಾಲೂಕಿನ ಭಾರತಿಪುರ ಕ್ರಾಸ್ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಮಾರೇನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.

ಸಂಪೂರ್ಣ ಓದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:ಮಂಡ್ಯ: ಕಲುಷಿತ ನೀರು ಸೇವಿಸಿ ಇಬ್ಬರು ಸಾವು, ನಾಲ್ವರ ಸ್ಥಿತಿ ಗಂಭೀರ

ಚಿಕಿತ್ಸೆ ಪಡೆಯುತ್ತಿರುವ ಮಹಿಳೆ (ETV Bharat)

7:28 AM, 28 Aug 2024 (IST)

ಕೃಷ್ಣನಿಗೆ 116 ಬಗೆಯ ಭಕ್ಷ್ಯಗಳ ನೈವೇದ್ಯ

ಮಂಗಳೂರು:ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ಕೃಷ್ಣನಿಗೆ ಮಂಗಳೂರಿನ ಭಕ್ತೆಯೊಬ್ಬರು 116 ಬಗೆಯ ಭಕ್ಷ್ಯಗಳನ್ನು ನೈವೇದ್ಯವಾಗಿ ಬಡಿಸಿದ್ದಾರೆ. ಚಂದ್ರಮತಿ ಎಸ್​. ರಾವ್‌ ಎಂಬುವರೆ ಇಷ್ಟೊಂದು ಬಗೆಯ ನೈವೇದ್ಯ ಬಡಿಸಿದವರು. ಇವರು ಪ್ರತಿವರ್ಷವೂ ನೂರಾರು ಬಗೆಯ ನೈವೇದ್ಯಗಳನ್ನು ಕೃಷ್ಣನಿಗೆ ಅರ್ಪಿಸುತ್ತಾರೆ. ಈ ಸಲವೂ ಕೂಡ ವೈವಿಧ್ಯಮಯ ಉಂಡೆ, ಚಕ್ಕುಲಿ, ಕರ್ಜಿಕಾಯಿ, ಚಿರೋಟಿ, ಪೂರಿ, ಜಾಮೂನ್, ಹಲ್ವಾ, ಬಾದುಷಾ, ಬರ್ಫಿ, ಕಜ್ಜಾಯ, ಪಂಚಕಜ್ಜಾಯ, ಚೂಡಾ, ಸೇರಿದಂತೆ 116 ಬಗೆಯ ನೈವೇದ್ಯಗಳನ್ನು ಸಮರ್ಪಿಸಿದ್ದಾರೆ.

ಸಂಪೂರ್ಣ ಓದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:ಶ್ರೀಕೃಷ್ಣಾಷ್ಟಮಿ ಸಂಭ್ರಮ: ಬಾಲಕೃಷ್ಣನಿಗೆ 116 ಬಗೆಯ ನೈವೇದ್ಯ ಬಡಿಸಿದ ಕೃಷ್ಣ ಭಕ್ತೆ

ಕೃಷ್ಣನಿಗೆ 116 ಬಗೆಯ ಭಕ್ಷ್ಯ ನೈವೇದ್ಯ (ETV Bharat)

7:22 AM, 28 Aug 2024 (IST)

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ ಧರಣಿ

ಬೆಂಗಳೂರು: ಸಕ್ಕರೆ ಕಾರ್ಖಾನೆ ಆರಂಭಕ್ಕೆ ನ್ಯಾಯಾಲಯದ ಆದೇಶವಿದ್ದರೂ ಅನುಮತಿ ನೀಡಲು ಮಾಲಿನ್ಯ ನಿಯಂತ್ರಣ ಮಂಡಳಿ ಕ್ರಮ ವಹಿಸಿಲ್ಲವೆಂದು ಆರೋಪಿಸಿ ಸಕ್ಕರೆ ಕಾರ್ಖಾನೆ ಮಾಲೀಕರೂ ಆದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಧರಣಿ ನಡೆಸಿದರು. ಮಂಗಳವಾರ ರಾತ್ರಿಯಾದರೂ ಯತ್ನಾಳ್ ಕಚೇರಿ ಬಿಟ್ಟು ತೆರಳದ್ದರಿಂದ ಪಿಸಿಬಿಯಲ್ಲಿ ಹೈಡ್ರಾಮಾ ನಡೆಯಿತು. ಯತ್ನಾಳ್​ಗೆ ಪ್ರತಿಪಕ್ಷ ನಾಯಕ ಆರ್​. ಅಶೋಕ್ ಸಾಥ್​ ನೀಡಿದರು.

ಸಂಪೂರ್ಣ ಓದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:ಸಕ್ಕರೆ ಕಾರ್ಖಾನೆಗೆ ಸಿಗದ ಅನುಮತಿ: ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಯತ್ನಾಳ್ ಧರಣಿ

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಧರಣಿ (ETV Bharat)
Last Updated : Aug 28, 2024, 9:00 PM IST

ABOUT THE AUTHOR

...view details