ಬೆಂಗಳೂರು: ರಾಜಧಾನಿ ಬೆಂಗಳೂರಿನ ಬಾಳೆಕುಂದ್ರಿ ವೃತ್ತದಲ್ಲಿರುವ ಪಾರ್ಸಿ ಪ್ರಾರ್ಥನಾಲಯದ ಬಳಿ ಬಿಬಿಎಂಪಿ ಸಾರ್ವಜನಿಕ ಶೌಚಾಲಯ ನಿರ್ಮಿಸಿರುವುದನ್ನು ಆಕ್ಷೇಪಿಸಿ ಸಲ್ಲಿಕೆಯಾದ ಅರ್ಜಿ ಸಂಬಂಧ ಬಿಬಿಎಂಪಿಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಬೆಂಗಳೂರು ಪಾರ್ಸಿ ಜೊರಾಸ್ಟ್ರೀಯನ್ ಅಂಜುಮಾನ್ ಸಂಸ್ಥೆ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಸ್. ಅಶೋಕ ಕಿಣಗಿ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು. ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ನ್ಯಾಯಪೀಠ ಪ್ರಕರಣ ಸಂಬಂಧ ಬಿಬಿಎಂಪಿಗೆ ನೋಟಿಸ್ ಜಾರಿಗೊಳಿಸಿದೆ. ಅಲ್ಲದೇ ಶೌಚಾಲಯ ಉದ್ಘಾಟಿಸದಂತೆ ಮಧ್ಯಂತರ ತಡೆಯಾಜ್ಞೆ ನೀಡಿ ವಿಚಾರಣೆಯನ್ನು ಮುಂದೂಡಿದೆ.
ಇದನ್ನು ಓದಿ:ದರ್ಶನ್ ಭೇಟಿಗಾಗಿ ಬಳ್ಳಾರಿ ಜೈಲಿಗೆ ಬಂದ ವಿಜಯಲಕ್ಷ್ಮಿ, ನಟ ಧನ್ವೀರ್ - Actor Dhanveer Meets Darshan
ಅರ್ಜಿಯಲ್ಲಿರುವ ಅಂಶಗಳೇನು:ನಗರದ ಬಾಳೆಕುಂದ್ರಿ ವೃತ್ತದಲ್ಲಿರುವ ‘ಫಾರ್ಸಿರ್ ದೇವಾಲಯದ ’ಎದುರುಗಡೆ ಅನಧೀಕೃತವಾಗಿ ಬಿಬಿಎಂಪಿ ಸಾರ್ವಜನಿಕ ಶೌಚಾಲಯ ನಿರ್ಮಾಣ ಕಾರ್ಯ ತೊಡಗಿಕೊಂಡಿದೆ. ಇದು ಭಕ್ತಾಧಿಗಳ ಧಾರ್ಮಿಕ ಭಾವನೆಗೆ ಧಕ್ಕೆ ತರಲಿದ್ದು, ಸನ್ನಿಧಾನದ ಪಾವಿತ್ರ್ಯತೆಗೆ ಪರಿಣಾಮ ಬಿರಲಿದೆ. ಮಾತ್ರವಲ್ಲದೇ ಪೂರ್ವಯೋಜನೆಯಿಲ್ಲದೆ ಈ ಯೋಜನೆ ಪ್ರಾರಂಭವಾಗಿದ್ದು ಇದರಿಂದಾಗಿ ವಾಯು, ಶಬ್ದ, ಪರಿಸರ ಮಾಲಿನ್ಯ ಹೆಚ್ಚಾಗುವ ಸಾಧ್ಯತೆ ಇದೆ. ಪಾರ್ಸಿ ಧರ್ಮದಲ್ಲಿ ಶುದ್ಧತೆಗೆ ಹೆಚ್ಚಿನ ಆದ್ಯತೆ ಇರುವುದರಿಂದ ಈ ರೀತಿಯಲ್ಲಿ ದೇವಾಲಯದ ಸಮೀಪದಲ್ಲಿ ಶೌಚಾಲಯ ನಿರ್ಮಿಸುತ್ತಿರುವುದು ನಮ್ಮ ಸಾಂಸ್ಕೃತಿಕ ಮತ್ತು ಧಾರ್ಮಿಕ ಆಚರಣೆಗಳಿಗೆ ಅಗೌರವ ಸೂಚಿಸಿದಂತೆ. ಭಕ್ತಾಧಿಗಳ ಧಾರ್ಮಿಕ ಹಕ್ಕುಗಳನ್ನು ರಕ್ಷಿಸಲು ಮತ್ತು ಪೂಜಾ ಸ್ಥಳದ ಪಾವಿತ್ರ್ಯತೆಯನ್ನು ಕಾಪಿಟ್ಟುಕೊಳ್ಳುವ ನಿಟ್ಟಿನಲ್ಲಿ ನಿರ್ಮಾಣ ಕಾರ್ವನ್ನು ಸ್ಥಗಿತಗೊಳಿಸುವಂತೆ ಹಾಗೂ ನಿರ್ಮಾಣವಾಗಿರುವುದನ್ನು ಕಡೆವಲು ಪ್ರತಿವಾದಿಗಳಿಗೆ ನಿರ್ದೇಶಿಸುವಂತೆ ಅರ್ಜಿಯಲ್ಲಿ ಕೋರಲಾಗಿದೆ.
ಇದನ್ನು ಓದಿ:ಗುಂಡ್ಲುಪೇಟೆಯಲ್ಲಿ ಭೀಕರ ಅಪಘಾತ: ಕೇರಳ ಮೂಲದ ಮೂವರ ದುರ್ಮರಣ - Bike Lorry Accident