ಶಿವಮೊಗ್ಗ:ತಾಲೂಕಿನ ಗಾಜನೂರು ಬಳಿಯ ತುಂಗಾ ಅಣೆಕಟ್ಟೆಯ ಹಿನ್ನೀರಿನಲ್ಲಿ ಮೂರು ಅಪರಿಚಿತ ಶವಗಳು ಪತ್ತೆಯಾಗಿವೆ. ಶಿವಮೊಗ್ಗ ತಾಲೂಕು ಸಕ್ರೆಬೈಲಿನಿಂದ ತೀರ್ಥಹಳ್ಳಿ ರಸ್ತೆಯ 10ನೇ ಮೈಲಿಗಲ್ಲಿನ ಬಳಿ ತುಂಗಾ ಹಿನ್ನೀರಿನಲ್ಲಿ ಶುಕ್ರವಾರ ಮಧ್ಯಾಹ್ನ ಮೂರು ಶವಗಳು ತೇಲುತ್ತಿರುವುದನ್ನು ಸ್ಥಳೀಯರು ಕಂಡು ತುಂಗಾನಗರ ಪೊಲೀಸರಿಗೆ ತಿಳಿಸಿದ್ದಾರೆ.
ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ: ಸ್ಥಳಕ್ಕೆ ತುಂಗಾನಗರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಗುರುರಾಜ್ ಕರ್ಕಿ ಹಾಗೂ ಸಿಬ್ಬಂದಿ ತೆರಳಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಮೃತದೇಹಗಳನ್ನು ಹಿನ್ನೀರಿನಿಂದ ಹೊರತೆಗೆದಾಗ ಓರ್ವ ಮಹಿಳೆ ಹಾಗೂ ಇಬ್ಬರು ಪುರುಷರ ಶವಗಳೆಂಬುದು ತಿಳಿದಿದೆ. ಮೂರೂ ಶವಗಳು ಭಾಗಶಃ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿವೆ.