ಕರ್ನಾಟಕ

karnataka

ETV Bharat / state

ರಾಯಚೂರು: ಲಾರಿ-ಕಾರು ಅಪಘಾತ, ಮೂವರು ಸಾವು - LORRY AND CAR ACCIDENT

ಲಾರಿ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿ ಮೂವರು ಸಾವನ್ನಪ್ಪಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.

lorry-and-car-accident
ರಾಯಚೂರಿನಲ್ಲಿ ಲಾರಿ, ಕಾರು ಅಪಘಾತ (ETV Bharat)

By ETV Bharat Karnataka Team

Published : Oct 14, 2024, 5:53 PM IST

Updated : Oct 14, 2024, 6:19 PM IST

ರಾಯಚೂರು: ಜಿಲ್ಲೆಯ ಮಾನವಿ ತಾಲೂಕಿನ ಕಲ್ಲೂರು ಗ್ರಾಮದ ಬಳಿ ಇಂದು ಲಾರಿ ಮತ್ತು ಕಾರು ಅಪಘಾತಕ್ಕೀಡಾಗಿದ್ದು, ಕಾರಿನಲ್ಲಿದ್ದ ಮೂವರು ಸಾವನ್ನಪ್ಪಿದ್ದಾರೆ.

ಮಾನವಿ ಕಡೆಯಿಂದ ರಾಯಚೂರು ಕಡೆಗೆ ಬರುತ್ತಿದ್ದ ಕಾರು ಹಾಗೂ ರಾಯಚೂರಿನಿಂದ ಮಾನವಿ ಕಡೆ ಹೊರಟಿದ್ದ ಲಾರಿಯ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಕಾರಿನಲ್ಲಿದ್ದ ಮಾನವಿಯ ಮೂವರು ದುರ್ಮರಣ ಹೊಂದಿದ್ದಾರೆ. ಮೃತರನ್ನು ಮಾನವಿ ನಿವಾಸಿಗಳಾದ ಮಕ್ಬುಲ್, ಯಾಸಿನ್(35) ಮತ್ತು ಅಫ್ರೋಜ್(34) ಎಂದು ಗುರುತಿಸಲಾಗಿದೆ. ಮೂವರೂ ಮೆಕ್ಯಾನಿಕ್​ ವೃತ್ತಿ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಲಾರಿ-ಕಾರು ಅಪಘಾತ (ETV Bharat)

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಕಾರಿನಲ್ಲಿ ಸಿಲುಕಿದ್ದ ಮೃತದೇಹಗಳನ್ನು ಹೊರತೆಗೆದು, ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ರಸ್ತೆ ಅಪಘಾತದಿಂದಾಗಿ ಕೆಲ ಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು. ಸಿರವಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ:ರಾಯಚೂರು: ಎರಡು ಪ್ರತ್ಯೇಕ ಅಪಘಾತಗಳಲ್ಲಿ ಮೂವರು ಸಾವು

Last Updated : Oct 14, 2024, 6:19 PM IST

ABOUT THE AUTHOR

...view details