ಕರ್ನಾಟಕ

karnataka

ETV Bharat / state

ಮಂಗಳೂರಿನಲ್ಲಿ ಅ.4ರಿಂದ ಮೂರು ದಿನ ಅಂತಾರಾಷ್ಟ್ರೀಯ ವಿದೂಷಕ ಉತ್ಸವ - International Clown Festival - INTERNATIONAL CLOWN FESTIVAL

ಮಂಗಳೂರಿನಲ್ಲಿ ಅಕ್ಟೋಬರ್ 4, 5, ಮತ್ತು 6ರಂದು ಅಂತಾರಾಷ್ಟ್ರೀಯ ವಿದೂಷಕ ಉತ್ಸವ ನಡೆಯಲಿದ್ದು, ಸುಮಾರು 10 ದೇಶಗಳು ಭಾಗಿಯಾಗಲಿವೆ.

CLOWN FESTIVAL IN MANGALURU  10 COUNTRIES PARTICIPATE  CLOWN FESTIVAL CELEBRATION  MANGALURU
ಅಂತಾರಾಷ್ಟ್ರೀಯ ವಿದೂಷಕ ಉತ್ಸವ (ETV Bharat)

By ETV Bharat Karnataka Team

Published : Oct 2, 2024, 10:43 AM IST

ಮಂಗಳೂರು:ಮಂಗಳೂರಿನಲ್ಲಿ ಅಕ್ಟೋಬರ್ 4, 5, ಮತ್ತು 6ರಂದು ಅಂತಾರಾಷ್ಟ್ರೀಯ ವಿದೂಷಕ (CLOWN ) ಉತ್ಸವವನ್ನು ಆಯೋಜಿಸಲಾಗಿದೆ. 10 ದೇಶಗಳ 25 ವಿದೂಷಕರೊಂದಿಗೆ 120 ನಿಮಿಷಗಳ ನಿರಂತರ ಹಾಸ್ಯ, ಕಾಮಿಡಿ, ಜಗ್ಲಿಂಗ್ ಮತ್ತು ಸಂಗೀತದೊಂದಿಗೆ ನಡೆಯುವ ಕಾರ್ಯಕ್ರಮವು 2024ರ ಅಕ್ಟೋಬರ್ 4ರಿಂದ 6ರವರೆಗೆ, ಬೆಳಗ್ಗೆ 11, ಮಧ್ಯಾಹ್ನ 3 ಮತ್ತು ಸಾಯಂಕಾಲ 7 ಗಂಟೆಗೆ ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರ್ ನಡೆಯಲಿದೆ.

ಈ ಸಲ ಅಂತಾರಾಷ್ಟ್ರೀಯ ವಿದೂಷಕರ ಉತ್ಸವದ 10ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಈ ಹಬ್ಬವನ್ನು ಪ್ರಶಸ್ತಿ ವಿಜೇತ ಅಂತಾರಾಷ್ಟ್ರೀಯ ವಿದೂಷಕ ಕಲಾವಿದ, ವರ್ಲ್ಡ್ ಕ್ಲೌನ್ ಎಸೋಸಿಯೇಶನ್ ಮಾಜಿ ಉಪಾಧ್ಯಕ್ಷ ಮತ್ತು ಅಂತಾರಾಷ್ಟ್ರೀಯ ಕ್ಲೌನ್ ಆಫ್ ದಿ ಇಯರ್ ಪ್ರಶಸ್ತಿಯ ವಿಜೇತರಾದ ಮಾರ್ಟಿನ್ ಫ್ಲಬ್ಬರ್ ಡಿಸೋಜಾ ಇವರು ನಿರ್ವಹಿಸಲಿದ್ದಾರೆ. ಫ್ಲಬ್ಬರ್ ಅವರು 7 ದೇಶಗಳಲ್ಲಿನ ದೊಡ್ಡ ಹಾಸ್ಯ ಸ್ಟೇಜ್‌ಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಈಗ ಅವರು ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಮನರಂಜನೆ ನೀಡಲಿದ್ದಾರೆ.

ಈ ವರ್ಷದ ಕಾರ್ಯಕ್ರಮದಲ್ಲಿ 10 ಪ್ರತಿಭಾವಂತ ಮಹಿಳಾ ವಿದೂಷಕ ಕಲಾವಿದರು ಭಾಗಿಯಾಗಲಿದ್ದಾರೆ. ಇದು ಅಮೆರಿಕ, ಕೆನಡಾ, ಬ್ರೆಜಿಲ್, ಪೆರು, ಅರ್ಜೆಂಟೀನಾ, ಇಟಲಿ, ಫ್ರಾನ್ಸ್, ಜರ್ಮನಿ, ರಷ್ಯಾ, ಸ್ಪೇನ್ ಮತ್ತು ಭಾರತ ಮುಂತಾದ ರಾಷ್ಟ್ರಗಳ ವಿಶ್ವದಾದ್ಯಂತ ಅಂತಾರಾಷ್ಟ್ರೀಯ ವಿದೂಷಕ ಕಲಾವಿದರ ಸಮಾವೇಶವಾಗಿದೆ. ಇದುವರೆಗೆ 100ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದೆ.

ಓದಿ:ಹಾವೇರಿಯಲ್ಲಿದೆ ರಾಜ್ಯದ ಏಕೈಕ 'ಗಾಂಧಿ ಗುರುಕುಲ': ತಾವೇ ಬಟ್ಟೆ ನೇಯ್ದು, ಆಹಾರವನ್ನೂ ತಯಾರಿಸುವ ಮಕ್ಕಳು - Gandhi Gurukula

ABOUT THE AUTHOR

...view details