ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ಸದ್ದು ಮಾಡ್ತಿರುವ ಬಾಣಂತಿಯರ ಸಾವು ಪ್ರಕರಣ; ಬೆಚ್ಚಿಬೀಳಿಸುತ್ತೆ ಕಳೆದ ಐದು ವರ್ಷಗಳಲ್ಲಿನ ಅಂಕಿ-ಅಂಶ! - MATERNAL DEATHS IN KARNATAKA

ಅಧಿವೇಶನದಲ್ಲಿ ಬಾಣಂತಿಯರ ಸಾವಿನ ಬಗ್ಗೆ ಪ್ರಸ್ತಾಪಿಸಲು ವಿಪಕ್ಷಗಳು ಮುಂದಾಗಿದ್ದು, ಈ ಹೊತ್ತಲೇ ಸಿಎಂ ಕಚೇರಿ ಬಿಜೆಪಿ ಅವಧಿಯಲ್ಲೂ ಆಗಿರುವ ಬಾಣಂತಿಯರ ಸಾವಿನ ಸಂಖ್ಯೆಯ ಮಾಹಿತಿಯನ್ನು ಬಿಡುಗಡೆ ಮಾಡಿದೆ.

Vidhan Soudha
ವಿಧಾನ ಸೌಧ (ETV Bharat)

By ETV Bharat Karnataka Team

Published : Dec 10, 2024, 6:35 AM IST

Updated : Dec 10, 2024, 9:42 AM IST

ಬೆಳಗಾವಿ: ಕಳೆದ ಐದು ವರ್ಷಗಳಲ್ಲಿ ಕರ್ನಾಟಕದಲ್ಲಿ 3,364 ಬಾಣಂತಿಯರು ಸಾವಿಗೀಡಾಗಿರುವುದಾಗಿ ಸಿಎಂ ಕಚೇರಿ ಮಾಹಿತಿ ನೀಡಿದೆ. ಈ ಸಂಬಂಧ ಅಂಕಿಅಂಶ ನೀಡಿರುವ ಮುಖ್ಯಮಂತ್ರಿಗಳ ಕಚೇರಿ 2019-20ರಿಂದ 2024-25 ನವೆಂಬರ್​ವರೆಗೆ ರಾಜ್ಯದಲ್ಲಿ ಒಟ್ಟು 3,364 ಬಾಣಂತಿಯರು ಮೃತಪಟ್ಟಿರುವುದು ವರದಿಯಾಗಿದೆ ಎಂದು ತಿಳಿಸಿದೆ.

ಬಳ್ಳಾರಿಯಲ್ಲಿನ ಬಾಣಂತಿಯರ ಸಾವು ಇದೀಗ ದೊಡ್ಡ ಸದ್ದು ಮಾಡಿದೆ. ಇತ್ತ ವಿಪಕ್ಷಗಳು ಸರ್ಕಾರದ ನಿರ್ಲಕ್ಷ್ಯ ಆರೋಪಿಸಿ ಸದನದ ಒಳಗೆ ಹೊರಗೆ ಹೋರಾಟ ನಡೆಸುತ್ತಿವೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ರಾಜೀನಾಮೆಗೂ ಆಗ್ರಹಿಸುತ್ತಿದ್ದಾರೆ. ಇದರ ಜೊತೆಗೆ ಬೆಳಗಾವಿ ಜಿಲ್ಲೆಯಲ್ಲಿ ಸುಮಾರು 300ಕ್ಕೂ ಹೆಚ್ಚು ಬಾಣಂತಿಯರು ಸಾವಿಗೀಡಾಗಿರುವುದಾಗಿ ಆರೋಪಿಸಿದ್ದಾರೆ. ಈ ಸಂಬಂಧ ಪ್ರತಿಪಕ್ಷ ನಾಯಕ ಆರ್. ಅಶೋಕ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಬಿಮ್ಸ್​ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಹೀಗಾಗಿ ಬಾಣಂತಿಯರ ಸಾವು ಪ್ರಕರಣ ರಾಜಕೀಯ ಸ್ವರೂಪ ಪಡೆದಿದೆ.

ಸದನದಲ್ಲಿ ಈ ಬಗ್ಗೆ ವಿಷಯ ಪ್ರಸ್ತಾಪಿಸಲು ಪ್ರತಿಪಕ್ಷಗಳು ಮುಂದಾಗಿವೆ. ಈ ಮಧ್ಯೆ ಮುಖ್ಯಮಂತ್ರಿ ಕಚೇರಿ ಕಳೆದ ಐದು ವರ್ಷಗಳಲ್ಲಿ ರಾಜ್ಯದಲ್ಲಿನ ಬಾಣಂತಿಯರ ಸಾವುಗಳ ಅಂಕಿಅಂಶ ನೀಡಿದೆ. ಆ ಮೂಲಕ ಬಿಜೆಪಿ ಅವಧಿಯಲ್ಲೂ ಬಾಣಂತಿಯರ ಸಾವು ಹೆಚ್ಚಿರುವ ಬಗ್ಗೆ ಅಂಕಿಅಂಶ ಬಹಿರಂಗ ಪಡಿಸಿದೆ.

ಅದರಂತೆ 2019-20ರಲ್ಲಿ ರಾಜ್ಯದಲ್ಲಿ ಒಟ್ಟು 662 ಬಾಣಂತಿಯರು ಸಾವಿಗೀಡಾಗಿದ್ದರು. 2020-21ರಲ್ಲಿ ಒಟ್ಟು 714 ಬಾಣಂತಿಯರು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. 2021-22ರಲ್ಲಿ 595 ಬಾಣಂತಿಯರು, 2022-23ರಲ್ಲಿ 527, 2023-24ರಲ್ಲಿ 518 ಹಾಗೂ 2024-25 ಸಾಲಿನ ನವೆಂವರ್ ವರೆಗೆ 348 ಬಾಣಂತಿಯರು ಸಾವಿಗೀಡಾಗಿರುವ ವರದಿಯಾಗಿದೆ ಎಂಬ ಅಂಕಿಅಂಶ ತಿಳಿಸಿದೆ.

ಇದನ್ನೂ ಓದಿ:ಬೆಳಗಾವಿಯ ಈ ಗ್ರಾಮದಲ್ಲಿ 7ನೇ ತರಗತಿವರೆಗೆ ಮಾತ್ರ ಶಾಲೆ: ಸುವರ್ಣಸೌಧಕ್ಕೆ ಭೂಮಿ ಕೊಟ್ಟ ಊರಿಗಿಲ್ಲ ಹೈಸ್ಕೂಲ್

Last Updated : Dec 10, 2024, 9:42 AM IST

ABOUT THE AUTHOR

...view details