ಕರ್ನಾಟಕ

karnataka

ETV Bharat / state

ಮಂಗಳೂರು ನೂತನ ಮೇಯರ್​​ಗೆ ಕಾರು ಬಳಸಲು ಅವಕಾಶ ಸಿಕ್ಕಿದ್ದು ಕೇವಲ ಅರ್ಧ ಗಂಟೆ! - Mangaluru Mayor - MANGALURU MAYOR

ಅವಿರೋಧವಾಗಿ ಆಯ್ಕೆಯಾದ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್​, ಉಪಮೇಯರ್​ಗೆ ನೀಡಿದ್ದ ಕಾರನ್ನು ಅದೇ ದಿನ ಕೆಲವೇ ಗಂಟೆಗಳಲ್ಲಿ ಹಿಂಪಡೆಯಲಾಗಿದೆ.

ಮೇಯರ್ ಮನೋಜ್ ಕೋಡಿಕಲ್ ಹಾಗೂ ಉಪಮೇಯರ್ ಭಾನುಮತಿ
ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಮನೋಜ್ ಕೋಡಿಕಲ್ ಹಾಗೂ ಉಪಮೇಯರ್ ಭಾನುಮತಿ (ETV Bharat)

By ETV Bharat Karnataka Team

Published : Sep 20, 2024, 10:40 AM IST

ಮಂಗಳೂರು:ಮಂಗಳೂರು ಮಹಾನಗರ ಪಾಲಿಕೆಯ ಮೇಯರ್​ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದ ಮೇಯರ್​, ಉಪಮೇಯರ್​ಗೆ ನೀಡಲಾದ ಕಾರುಗಳನ್ನು ಕೆಲವೇ ಗಂಟೆಗಳಲ್ಲಿ ವಾಪಸ್ ನೀಡಬೇಕಾಯಿತು.

ಗುರುವಾರ‌ ಮೇಯರ್, ಉಪಮೇಯರ್ ಚುನಾವಣೆ ನಡೆದು ಮೇಯರ್ ಆಗಿ ಮನೋಜ್ ಕೋಡಿಕಲ್​ ಮತ್ತು ಉಪಮೇಯರ್ ಭಾನುಮತಿ ಮಧ್ಯಾಹ್ನ 1.45ಕ್ಕೆ ಅಧಿಕಾರ ಸ್ವೀಕರಿಸಿದರು. ಆದರೆ ವಿಧಾನ ಪರಿಷತ್ ಚುನಾವಣೆಗೆ 3.45ಕ್ಕೆ ನೀತಿ ಸಂಹಿತೆ ಆದೇಶ ಬಂದಿದೆ. ಆದ ಕಾರಣ ಮೇಯರ್, ಉಪಮೇಯರ್​ ಅವರಿಗೆ ನೀಡಲಾದ ಕಾರನ್ನು ಕೂಡಲೇ ವಾಪಸ್ ನೀಡಬೇಕಾಯಿತು.

ನೂತನ ಮೇಯರ್​, ಉಪಮೇಯರ್ ಅಧಿಕಾರ ಸ್ವೀಕರಿಸಿದ ಬಳಿಕ ಪಾಲಿಕೆ ಸಭಾಂಗಣದಲ್ಲಿ ಅಭಿನಂದನಾ ಸಭೆ ಮುಗಿಸಿ ಕಾರಿನಲ್ಲಿ ಮನೆಗೆ ತೆರಳಿದ್ದಾರೆ. ಆದರೆ ಅದಾದ ಕೆಲ ಹೊತ್ತಿನಲ್ಲಿ ಕಾರು ಹಿಂಪಡೆಯಲಾಗಿದೆ. ಹೀಗಾಗಿ, ಮೇಯರ್​ ಕೇವಲ ಅರ್ಧ ಗಂಟೆ ಮಾತ್ರ ಕಾರು ಉಪಯೋಗಿಸಲು ಅವಕಾಶ ಸಿಕ್ಕಿತು.

ಪಾಲಿಕೆಯ ಐದು ವರ್ಷದಲ್ಲಿ ಕೊನೆಯ ಅವಧಿಯ ಮೇಯರ್ ಚುನಾವಣೆ ಇದಾಗಿದೆ. ಆರಂಭದಲ್ಲಿ ಮೇಯರ್ ಆಯ್ಕೆ ವೇಳೆ ಮೀಸಲಾತಿಯ ಸಮಸ್ಯೆ ಇದ್ದ ಕಾರಣ ಆರು ತಿಂಗಳು ತಡವಾಗಿ ಚುನಾವಣೆ ನಡೆದಿತ್ತು. ಆ ಬಳಿಕ ಎಲ್ಲ ಮೇಯರ್, ಉಪಮೇಯರ್ ಒಂದು ವರ್ಷ ಅಧಿಕಾರ ನಡೆಸಿದರು. ಆದರೆ ಕೊನೆಯ ಅವಧಿಯ ಮೇಯರ್​ಗೆ ಕೇವಲ 193 ದಿನ ಸಿಕ್ಕಿತು. ಇದೀಗ ನೀತಿ ಸಂಹಿತೆ ಬಂದಿರುವುದರಿಂದ ಕೇವಲ 154 ದಿನಗಳು‌ ಮಾತ್ರ ಅಧಿಕಾರ ನಡೆಸಲು ಅವಕಾಶವಿದೆ.

'ಈಟಿವಿ ಭಾರತ'ದ ಜೊತೆಗೆ ಮಾತನಾಡಿದ ಮೇಯರ್ ಮನೋಜ್ ಕೋಡಿಕಲ್, "ಪಾಲಿಕೆಯಲ್ಲಿ ಚುನಾವಣೆ ನಡೆದು, ಆ ಬಳಿಕ ಕಾರ್ಯಕ್ರಮ ಮುಗಿಸಿ ಊಟಕ್ಕೆ ಮನೆಗೆ ತೆರಳಲು ಕಾರನ್ನು ಬಳಸಿದ್ದೆ. ಆ ಸಂದರ್ಭದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ. ಆ ಕಾರಣದಿಂದ ಕಾರು ವಾಪಸ್ ನೀಡಿದ್ದೇನೆ" ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ರಾಜಕೀಯಕ್ಕೆ ಸೇವೆಗಾಗಿ ಬನ್ನಿ, ನಿಮ್ಮ ಲಾಭಕ್ಕಾಗಿ ಅಲ್ಲ: ಸಂತೋಷ್​ ಹೆಗ್ಡೆ - Santosh Hegde

ABOUT THE AUTHOR

...view details