ಕರ್ನಾಟಕ

karnataka

ETV Bharat / state

ಚಾಮರಾಜನಗರ: ನೀರು ಕಾಯಿಸಲು ಹಚ್ಚಿದ್ದ ಬೆಂಕಿಗೆ ಧಗಧಗಿಸಿದ ಮನೆ - HOUSE CAUGHT FIRE

ಸ್ನಾನಕ್ಕೆ ನೀರು ಕಾಯಿಸಲು ಹಚ್ಚಿದ್ದ ಬೆಂಕಿಯಿಂದ ಇಡೀ ಮನೆ ಹೊತ್ತಿ ಉರಿದ ಘಟನೆ ಗುಂಡ್ಲುಪೇಟೆ ತಾಲೂಕಿನಲ್ಲಿ ನಡೆದಿದೆ.

CHAMARAJANAGAR  FIRE INCIDENT  A HOUSE CAUGHT FIRE IN GUNDLUPET  ಮನೆಗೆ ಬೆಂಕಿ
ಚಾಮರಾಜನಗರದಲ್ಲಿ ನೀರು ಕಾಯಿಸಲು ಹಚ್ಚಿದ್ದ ಬೆಂಕಿಗೆ ಧಗಧಗಿಸಿದ ಮನೆ (ETV Bharat)

By ETV Bharat Karnataka Team

Published : Jan 24, 2025, 9:11 AM IST

ಚಾಮರಾಜನಗರ: ಸ್ನಾನಕ್ಕೆಂದು ನೀರು ಕಾಯಿಸಲು ಹಚ್ಚಿದ್ದ ಬೆಂಕಿಯು ತೆಂಗಿನ ಮಟ್ಟೆ ರಾಶಿಗೆ ವ್ಯಾಪಿಸಿ ಮನೆಯೇ ಹೊತ್ತಿ ಉರಿದ ಘಟನೆ ಗುಂಡ್ಲುಪೇಟೆ ತಾಲೂಕಿನ ಕೊಡಗಾಪುರದಲ್ಲಿ ಗುರುವಾರ ರಾತ್ರಿ ನಡೆದಿದೆ.

ಗುಂಡ್ಲುಪೇಟೆ ತಾಲೂಕಿನ ಕೊಡಗಾಪುರ ಗ್ರಾಮದ ವಿನೋದ್ ಎಂಬುವವರ ಮನೆಯಲ್ಲಿ ಘಟನೆ ಸಂಭವಿಸಿದೆ. ನೀರು ಕಾಯಿಸಲು ಬೆಂಕಿ ಹಂಚಿದ್ದ ವೇಳೆ ಹತ್ತಿರದಲ್ಲೇ ಇದ್ದ ತೆಂಗಿನಕಾಯಿ ಮಟ್ಟೆ ರಾಶಿಗೂ ಬೆಂಕಿ ಹೊತ್ತಿಕೊಂಡು ಬಳಿಕ ಮನೆಯೇ ಹೊತ್ತಿ ಉರಿದಿದೆ. ಅಗ್ನಿ ಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರು ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಮನೆಯಲ್ಲಿದ್ದ ಸರಕುಗಳು ಬೆಂಕಿಗೆ ಆಹುತಿಯಾಗಿದೆ. ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಚಾಮರಾಜನಗರದಲ್ಲಿ ನೀರು ಕಾಯಿಸಲು ಹಚ್ಚಿದ್ದ ಬೆಂಕಿಗೆ ಧಗಧಗಿಸಿದ ಮನೆ (ETV Bharat)

ABOUT THE AUTHOR

...view details