ಕರ್ನಾಟಕ

karnataka

ETV Bharat / state

ಬೆಂಗಳೂರಿನಲ್ಲಿ ಎಳನೀರಿಗೂ ಬರ: ಕ್ಷೀಣಿಸಿದ ಪೂರೈಕೆ, ದರ ಏರಿಕೆ - Tender Coconut - TENDER COCONUT

ಮಂಡ್ಯ, ಹಾಸನ ತುಮಕೂರು ಸೇರಿದಂತೆ ವಿವಿಧ ಪ್ರದೇಶದಿಂದ ಬೆಂಗಳೂರಿಗೆ ಪೂರೈಕೆ ಆಗುತ್ತಿದ್ದ ಎಳನೀರಿನ ಪ್ರಮಾಣ ಕಡಿಮೆಯಾಗಿದೆ.

tender coconut
ಎಳನೀರು

By ETV Bharat Karnataka Team

Published : Apr 5, 2024, 10:59 PM IST

ಬೆಂಗಳೂರು:ರಾಜಧಾನಿ ಬೆಂಗಳೂರಿನಲ್ಲಿ ಒಂದೆಡೆ ಕುಡಿಯುವ ನೀರಿನ ಸಮಸ್ಯೆ ಭಾರಿ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿದ್ದರೆ, ಇನ್ನೊಂದೆಡೆ ಬಿಸಿಲಿನ ಝಳದಿಂದ ತಪ್ಪಿಸಿಕೊಳ್ಳಲು ಜನರಿಗೆ ಅಗತ್ಯವಿದ್ದ ಎಳನೀರು ಬರ ಎದುರಾಗಿದೆ.

ಬಿಸಿಲ ತಾಪ ದಿನದಿಂದ ದಿನಕ್ಕೆ ಏರುತ್ತಿರುವ ಹಿನ್ನೆಲೆಯಲ್ಲಿ ಜನರು ದಾಹ ತೀರಿಸಿಕೊಳ್ಳಲು ಎಳನೀರಿನ ಮೊರೆ ಹೋಗುತ್ತಿದ್ದಾರೆ. ಆದರೆ ಎಳನೀರು ಕೊರತೆ ರಾಜಧಾನಿಯಲ್ಲಿ ಕಂಡುಬಂದಿದೆ. ನಗರದಲ್ಲಿ ಈ ಹಿಂದೆ ಎಲ್ಲೆಡೆ ಕಾಣುತ್ತಿದ್ದ ಎಳನೀರು ಗಾಡಿಗಳು ಏಕಾಏಕಿ ಮಾಯವಾಗಿವೆ.

ಮಂಡ್ಯ, ಹಾಸನ ಕಡೆಗಳಿಂದ ನಗರಕ್ಕೆ ಹೆಚ್ಚಾಗಿ ಆಗಮಿಸುತ್ತಿದ್ದ ಎಳನೀರಿನ ಪ್ರಮಾಣ ತಗ್ಗಿದೆ. ಇದರ ಜತೆಗೆ ಈ ಹಿಂದೆ ನಗರಕ್ಕೆ ಎಳನೀರು ಸರಬರಾಜು ಆಗುತ್ತಿದ್ದ ಪ್ರದೇಶಗಳಿಂದಲೂ ಈ ಬಾರಿ ಪೂರೈಕೆ ಕುಸಿತ ಕಂಡಿರುವುದರಿಂದ ಕಾಯಿ ಗಾಡಿಗಳ ಸಂಖ್ಯೆ ಕ್ಷೀಣಿಸಿದೆ.

ಈ ಹಿಂದೆ ನಿತ್ಯವೂ ನಗರಕ್ಕೆ ಎಳನೀರು ಹೇರಿಕೊಂಡು ಬರುತ್ತಿದ್ದ ಟೆಂಪೋಗಳು ಮಾಯವಾಗಿದ್ದು, ಈಗ ನಗರದ ಕೆಲವೊಂದು ಭಾಗಗಳಿಗೆ ವಾರಕ್ಕೆರಡು ಬಾರಿ ಅಥವಾ ವಾರಕ್ಕೆ ಒಂದು ಬಾರಿ ಸರಬರಾಜು ಮಾಡುತ್ತಿರುವುದು ಕಂಡುಬರುತ್ತಿದೆ. ಮಳೆ ಕೊರತೆಯಿಂದಾಗಿ ಇಳುವರಿ ಕೂಡ ಕುಸಿತವಾಗಿದೆ. ಬೇಡಿಕೆಯಷ್ಟು ಪೂರೈಕೆ ಸಾದ್ಯವಾಗುತ್ತಿಲ್ಲ ಎಂದು ಹೇಳಲಾಗುತ್ತಿದೆ.

ಈ ಹಿಂದೆ 30 ರೂಪಾಯಿ ಇದ್ದ ಎಳನೀರಿಗೆ ಈಗ 45 ರೂಪಾಯಿವರೆಗೂ ಏರಿಕೆಯಾಗಿದೆ. ಕೆಲವು ಕಡೆ 50 ರೂಪಾಯಿ ಇದೆ. ಈ ಹಿಂದೆ ಪ್ರತಿ ಎಳನೀರಿನ ಕಾಯಿಗೆ 25 ರಿಂದ 30 ರೂಪಾಯಿ ವರೆಗೆ ಇರುತ್ತಿತ್ತು. ಆದರೆ ದಿನದಿಂದ ದಿನಕ್ಕೆ ಬೇಡಿಕೆ ಹಚ್ಚಾಗುತ್ತಿರುವುದರಿಂದ ಎಳನೀರಿನ ದರದಲ್ಲಿ ಗಣನೀಯ ಏರಿಕೆ ಕಂಡಿದೆ.

ದರ ಏರಿಕೆ:ಬಿಸಿಲ ಧಗೆಯಿಂದ ತಪ್ಪಿಸಿಕೊಳ್ಳಲು ಹಾಗೂ ದಾಹ ತಣಿಸಲು ಎಳನೀರನ್ನು ಕುಡಿಯುತ್ತೇವೆ. ಆದರೀಗ, ಹಲವು ಅಂಗಡಿಗಳನ್ನು ಮುಚ್ಚಲಾಗಿದೆ. ಎಳನೀರು ಸಿಕ್ಕರೂ ಸುಮಾರು 20 ರೂಪಾಯಿ ಹೆಚ್ಚುವರಿಯಾಗಿ ಪಡೆಯುತ್ತಿದ್ದಾರೆ. ಮುಂದಿನ ತಿಂಗಳು ಇನ್ನಷ್ಟು ದರ ಹೆಚ್ಚಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಗ್ರಾಹಕ ಮೋಹನ್.

ಬೇಸಿಗೆ ಝಳ ಹೆಚ್ಚಾಗುತ್ತಿರುವುದರಿಂದ ಅನೇಕರು ಎಳನೀರಿನ ಮೊರೆ ಹೋಗುತ್ತಿದ್ದಾರೆ. ರೈತರಿಂದ ಸಿಗುತ್ತಿದ್ದ ಎಳನೀರು ಕೊಂಚ ಪ್ರಮಾಣದಲ್ಲಿ ಕಡಿಮೆಯಾಗಿದೆ. ಮಳೆ ಕೊರತೆಯಿಂದ ತೆಂಗಿನ ಮರಗಳಲ್ಲಿ ಬಹಳಷ್ಟು ಎಳನೀರು ಕಾಯಿಗಳು ಬಂದಿಲ್ಲ ಎಂದು ರೈತರು ಹೇಳುತ್ತಿದ್ದು, ಆದರೆ ಖರೀದಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆದ್ದರಿಂದ ಹಲವು ಭಾಗದಲ್ಲಿ ಎಳನೀರು ಕಾಯಿಗಳ ಸಮಸ್ಯೆಯಾಗುತ್ತಿದೆ. ಬಿಸಿಲು ಹೆಚ್ಚಾಗುತ್ತಿರುವುದರಿಂದ ಮುಂದಿನ ದಿನದಲ್ಲಿ ಬೆಲೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಉಲ್ಲಾಳದ ಎಳನೀರಿನ ವ್ಯಾಪಾರಿ ದಿನೇಶ್ ಮತ್ತು ಸಿದ್ದಣ್ಣ ಹೇಳಿದ್ದಾರೆ.

ಇದನ್ನೂಓದಿ:ಕಾವೇರಿ 5ನೇ ಹಂತದ ಯೋಜನೆ ಪೂರ್ಣಗೊಳಿಸಲು ಟ್ರಾಫಿಕ್‌ ಪೊಲೀಸರಿಂದ ಸಹಕಾರದ ಭರವಸೆ - Kaveri 5th Phase

ABOUT THE AUTHOR

...view details