ಕರ್ನಾಟಕ

karnataka

ETV Bharat / state

ಸಿಂಧನೂರು: ಹಾಸ್ಟೆಲ್​ನಲ್ಲಿ ಪಿಯುಸಿ ವಿದ್ಯಾರ್ಥಿ ಆತ್ಮಹತ್ಯೆ, ವಾರ್ಡನ್ ಮತ್ತು ಅಧಿಕಾರಿ ವಿರುದ್ಧ ದೂರು ದಾಖಲು - student suicide

ಸಿಂಧನೂರು ಸರ್ಕಾರಿ ಹಾಸ್ಟೆಲ್​ನಲ್ಲಿ ಪಿಯುಸಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಪಿಯುಸಿ ವಿದ್ಯಾರ್ಥಿ ಶವ ಪತ್ತೆ
ಪಿಯುಸಿ ವಿದ್ಯಾರ್ಥಿ ಶವ ಪತ್ತೆ

By ETV Bharat Karnataka Team

Published : Feb 16, 2024, 8:23 AM IST

Updated : Feb 16, 2024, 1:48 PM IST

ರಾಯಚೂರು:ದ್ವಿತೀಯ ಪಿಯುಸಿ ವಿದ್ಯಾರ್ಥಿಯೋರ್ವನ ಶವ ಸರ್ಕಾರಿ‌ ಹಾಸ್ಟೆಲ್​​ನಲ್ಲಿ ನೇಣು‌ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಯಚೂರಿನ ಸಿಂಧನೂರು ಪಟ್ಟಣದಲ್ಲಿ ನಡೆದಿದೆ.

ಜಿಲ್ಲೆಯ ಸಿಂಧನೂರು ಪಟ್ಟಣದಲ್ಲಿರುವ ಸಮಾಜ ಕಲ್ಯಾಣ ಇಲಾಖೆ‌ ವ್ಯಾಪ್ತಿಗೆ ಬರುವ ಡಾ.ಬಿ.ಆರ್.ಅಂಬೇಡ್ಕರ್ ಪೂರ್ವ ಪದವಿ ಪೂರ್ವ ವಸತಿ ನಿಲಯದಲ್ಲಿ ಹಿರೇ ಹುಸೇನಪ್ಪ‌(17) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗುಂಜಹಳ್ಳಿ ಗ್ರಾಮ ನಿವಾಸಿಯಾಗಿರುವ ವಿದ್ಯಾರ್ಥಿ ಸಿಂಧನೂರು ನಗರದ ಪಿಡಬ್ಲ್ಯೂಡಿ ಕ್ಯಾಂಪಿನಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾಬ್ಯಾಸ ಮಾಡುತ್ತಿದ್ದರು.

ವಸತಿ ನಿಲಯದಲ್ಲಿನ ಸಮಸ್ಯೆಗಳ ಬಗ್ಗೆ ಪ್ರಶ್ನಿಸಿದ್ದಕ್ಕೆ ವಸತಿ ನಿಲಯದ ವಾರ್ಡನ್​, ವಿದ್ಯಾರ್ಥಿಗಳನ್ನ ಎತ್ತಿಕಟ್ಟಿ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದ್ದಾರೆ ಜೊತೆಗೆ ಮತ್ತೋರ್ವ ಅಧಿಕಾರಿ ಜಾತಿ ನಿಂದನೆ ಮಾಡಿದ್ದರಿಂದ ನನ್ನ ಮಗ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಿ ಮೃತ ತಾಯಿ ಹುಸೇನಮ್ಮ ಪೊಲೀಸರಿಗೆ ಲಿಖಿತವಾಗಿ ದೂರು ನೀಡಿದ್ದಾರೆ.

ದೂರಿನ ಆಧಾರದ ಮೇಲೆ ಹಾಸ್ಟೆಲ್ ವಾರ್ಡನ್ ಮತ್ತು ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರ ಮೇಲೆ ಸಿಂಧನೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಘಟನೆ ವಿಚಾರ ತಿಳಿದ ಕೂಡಲೇ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಮಗನನ್ನು ಕಳೆದಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮಟ್ಟಿದೆ.

ಇದನ್ನೂ ಓದಿ: ಚಾಮರಾಜನಗರ: ಪತ್ನಿ ರೀಲ್ಸ್​​​ ವಿಚಾರ, ಪತಿ ಆತ್ಮಹತ್ಯೆ

Last Updated : Feb 16, 2024, 1:48 PM IST

ABOUT THE AUTHOR

...view details