ಕರ್ನಾಟಕ

karnataka

ETV Bharat / state

ಜಗದೀಶ್​ ಶೆಟ್ಟರ್​ಗೆ ಬೆಳಗಾವಿ ಟಿಕೆಟ್: ಸಂಸದೆ ಮಂಗಳಾ ಅಂಗಡಿ - Belgavi constituency ticket

ಜಗದೀಶ್​ ಶೆಟ್ಟರ್​ ಅವರಿಗೆ ಬೆಳಗಾವಿಯಿಂದ ಬಿಜೆಪಿ ಟಿಕೆಟ್ ಕೊಡುವ ಚರ್ಚೆ ನಡೆದಿದೆ ಎಂದು ಸಂಸದೆ ಮಂಗಳಾ ಅಂಗಡಿ ಹೇಳಿದ್ದಾರೆ. ಹೈಕಮಾಂಡ್ ಭೇಟಿಗೆಂದು ನವದೆಹಲಿ ತೆರಳಿದ್ದ ಸಂಸದೆ, ವಾಪಸ್ ಆಗಮಿಸಿ ಈ ಮಾಹಿತಿ ನೀಡಿದ್ದಾರೆ.

ಸಂಸದೆ ಮಂಗಳಾ ಅಂಗಡಿ ಹೇಳಿಕೆ
ಸಂಸದೆ ಮಂಗಳಾ ಅಂಗಡಿ ಹೇಳಿಕೆ

By ETV Bharat Karnataka Team

Published : Mar 15, 2024, 1:18 PM IST

Updated : Mar 15, 2024, 2:03 PM IST

ಸಂಸದೆ ಮಂಗಳಾ ಅಂಗಡಿ ಮಾಹಿತಿ

ಬೆಳಗಾವಿ:ಮತ್ತೊಂದು ಅವಧಿಗೆ ಟಿಕೆಟ್​ ನೀಡುವಂತೆ ದೆಹಲಿಗೆ ತೆರಳಿದ್ದ ಸಂಸದೆ ಮಂಗಳಾ ಅಂಗಡಿ ಖಾಲಿ ಕೈಯಲ್ಲಿ ವಾಪಸ್​ ಆಗಿದ್ದಾರೆ. ಮಾಜಿ ಸಿಎಂ ಜಗದೀಶ್​ ಶೆಟ್ಟರ್​ ಅವರಿಗೆ ಬೆಳಗಾವಿ ಟಿಕೆಟ್​ ಅಂತಿಮವಾಗಿದೆ ಎಂಬ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ.

ಹೌದು, ಬೆಳಗಾವಿ ಬಿಜೆಪಿ ಟಿಕೆಟ್​ ಬಹುತೇಕ ಜಗದೀಶ್​ ಶೆಟ್ಟರ್​ ಅವರಿಗೆ ಫಿಕ್ಸ್​ ಆಗಿದ್ದು, ಅಧಿಕೃತ ಆದೇಶ ಮಾತ್ರ ಬಾಕಿಯಿದೆ. ಈ ಬಗ್ಗೆ ಬೆಳಗಾವಿ ಗೃಹ ಕಚೇರಿಯಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಸಂಸದೆ ಮಂಗಳಾ ಅಂಗಡಿ, ಎರಡನೇ ಪಟ್ಟಿಯಲ್ಲಿ ನಮ್ಮ ಕುಟುಂಬದ ಹೆಸರು ಬರಲಿಲ್ಲ. ಹೀಗಾಗಿ ನಾವು ನಾಯಕರಿಗೆ ಭೇಟಿಯಾಗಲು ಹೋಗಿದ್ದೆವು. ಆದರೆ ಅಷ್ಟರೊಳಗೆ ಜಗದೀಶ್​ ಶೆಟ್ಟರ್​ ಅವರಿಗೆ ಟಿಕೆಟ್ ಕೊಡುವ ಚರ್ಚೆ ನಡೆದಿತ್ತು. ಹಾಗಾಗಿ, ದೆಹಲಿಯಲ್ಲಿ ವರಿಷ್ಠರನ್ನು ಭೇಟಿ ಆಗಲಿಲ್ಲ. ಅಲ್ಲದೇ ಪಟ್ಟಿಯಲ್ಲಿ ಈಗಲೂ ನನ್ನ ಹಾಗೂ ನನ್ನ ಮಕ್ಕಳ ಹೆಸರಿದೆ ಎಂದರು.

ಜಗದೀಶ್​ ಶೆಟ್ಟರ್ ಅವರಿಗೆ ಟಿಕೆಟ್ ಕೊಟ್ಟರೆ ನೀವು ಒಪ್ಪಿಕೊಳ್ಳುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಹಿರಿಯ ನಾಯಕರು ಅವರಿಗೆ ಟಿಕೆಟ್​ ಕೊಟ್ಟರೆ ಅಭ್ಯಂತರ ಇಲ್ಲ. ರಾಜ್ಯಾಧ್ಯಕ್ಷರು ಜಗದೀಶ್​​ ಶೆಟ್ಟರ್​ ಅವರಿಗೆ ಸ್ಪರ್ಧಿಸುವಂತೆ ಹೇಳಿದ್ದಾರೆ. ಜಗದೀಶ್​ ಶೆಟ್ಟರ್​ ಅವರಿಗೆ ಟಿಕೆಟ್ ಕೊಟ್ಟರೆ ನಾನು ಅವರ ಜೊತೆಗೆ ಪ್ರಚಾರ ಮಾಡುತ್ತೇನೆ. ಮಕ್ಕಳಿಗೆ ಟಿಕೆಟ್ ಆಗಬೇಕು ಎನ್ನುವುದು ನನ್ನ ಆಸೆ ಇತ್ತು. ಆದರೆ ಹೈಕಮಾಂಡ್ ನಿರ್ಧಾರ ತೆಗೆದುಕೊಂಡಿದೆ ಎಂದು ಪ್ರತಿಕ್ರಿಯೆ ನೀಡಿದರು.

ಜಗದೀಶ್​ ಶೆಟ್ಟರ್​ ಅವರ ಬೆಳಗಾವಿ ಸ್ಪರ್ಧೆಯ ಬಗ್ಗೆ ಗೋ ಬ್ಯಾಕ್​ ಶೆಟ್ಟರ್ ಅಭಿಯಾನ ವಿಚಾರಕ್ಕೆ ಪ್ರತಿಕ್ರಿಯಿಸಿ, 'ಬೇರೆ ಬೇರೆ ಜಿಲ್ಲೆಯ ನಾಯಕರು ಈಗಾಗಲೇ ಬೇರೆ ಬೇರೆ ಕಡೆ ಸ್ಪರ್ಧೆ ಮಾಡಿದ್ದಾರೆ. ಜಗದೀಶ್​ ಶೆಟ್ಟರ್ ಅವರು ಮಾಜಿ ಸಿಎಂ ಮತ್ತು ಹಿರಿಯರಾಗಿದ್ದಾರೆ. ಸ್ಪರ್ಧೆ ಮಾಡಬಹುದು ಎಂದು ಮಂಗಳಾ ಅಂಗಡಿ ಹೇಳಿದರು.

ಬೇರೆ ಏನಾದರು ಹೈಕಮಾಂಡ್​ ಆಶ್ವಾಸನೆ ಕೊಟ್ಟಿದ್ದಾರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ಟಿಕೆಟ್​ ಕ್ಯಾನ್ಸಲ್​ ಅಂತಾನೂ ಹೇಳಿಲ್ಲ ಎಂದರು. ಖುಷಿಯಿಂದ ಸೀಟ್ ಬಿಟ್ಟು ಕೊಡ್ತಿರಾ ಎಂಬ ವಿಚಾರಕ್ಕೆ ನಸು ನಕ್ಕು ಪ್ರಸಂಗ ಹಾಗೇ ಬಂದಿದೆ. ಏನೂ ಮಾಡೋದಿಕ್ಕೆ ಆಗೋದಿಲ್ಲ‌ ಎಂದು ತಿಳಿಸಿದರು.

ಇದನ್ನೂ ಓದಿ:ಮಹಿಳೆಯರಿಗೆ ಉಡಿತುಂಬಿ ಮತಯಾಚನೆ, ಕಾಂಗ್ರೆಸ್​ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಪತ್ನಿಯಿಂದ ಪ್ರಚಾರ

ಶೆಟ್ಟರ್ ಮನವೊಲಿಸಿದ್ದೇವೆ ಎಂದ ಬಿಎಸ್​ವೈ: ಇಂದು ಬೆಳಗ್ಗೆ ಡಾಲರ್ಸ್​ ಕಾಲೋನಿಯಲ್ಲಿ ತಮ್ಮ ಮನೆಯಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಮಾತನಾಡಿ, ಜಗದೀಶ್ ಶೆಟ್ಟರ್​ ಅವರಿಗೆ ಬೆಳಗಾವಿಯಿಂದ ಸ್ಪರ್ಧೆ ಮಾಡಲು ಇಷ್ಟವಿರಲಿಲ್ಲ. ಕೊನೆಗೆ ನಾನು ಮನವೋಲಿಸಿ ಬೆಳಗಾವಿಯಲ್ಲಿ ಸ್ಪರ್ಧಿಸುವಂತೆ ಮನವೊಲಿಸಿದ್ದೇನೆ. ಅವರು ಸಂತೋಷದಿಂದ ಒಪ್ಪಿಕೊಂಡು ಹೋಗಿದ್ದಾರೆ. ಬಹಳ ದೊಡ್ಡ ಅಂತರದಲ್ಲಿ ಬೆಳಗಾವಿಯಿಂದ ಗೆಲ್ಲಲು ಸಾಧ್ಯವಿ ಎಂದಿದ್ದರು.

Last Updated : Mar 15, 2024, 2:03 PM IST

ABOUT THE AUTHOR

...view details