ಹಾಸನ:ಅತ್ಯಾಚಾರ ಆರೋಪ ಎದುರಿಸುತ್ತಿರುವ ಮಾಜಿ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಇಂದು ಎಸ್‌ಐಟಿ ತಂಡ ಹಾಸನಕ್ಕೆ ಕರೆತಂದು ಸ್ಥಳ ಮಹಜರು ನಡೆಸಿತು.
ಆರ್.ಸಿ ರಸ್ತೆಯಲ್ಲಿರುವ ಸಂಸದರ ನಿವಾಸದಲ್ಲಿ ಸುಮಾರು 4 ಗಂಟೆಗಳ ಕಾಲ ಮಹಜರು ನಡೆಯಿತು. ಎಸ್‌ಐಟಿ ಅಧಿಕಾರಿಗಳೊಂದಿಗೆ ಎಫ್‌ಎಸ್‌ಎಲ್ ತಂಡ ಕೂಡ ಹಾಜರಿತ್ತು. ಸಂತ್ರಸ್ತೆ ನೀಡಿದ ದೂರಿನಲ್ಲಿ ಸಂಸದರ ನಿವಾಸದಲ್ಲೇ ಅತ್ಯಾಚಾರ ನಡೆದಿತ್ತು ಎಂಬ ಉಲ್ಲೇಖವಿರುವ ಕಾರಣ ಮಹಜರು ನಡೆಸಲಾಗಿದೆ.