ದಾವಣಗೆರೆ:ಜಿಲ್ಲೆಯ ಚನ್ನಗಿರಿ ತಾಲೂಕಿನ ಹರನಹಳ್ಳಿ ಕೆಂಗಾಪುರದ ರಾಮಲಿಂಗೇಶ್ವರ ಮಠ ಮುಳ್ಳಿನ ಗದ್ದುಗೆಯ ಪವಾಡದಿಂದಲೇ ಚಿರಪರಿಚಿತವಾಗಿದೆ. ಶಿವರಾತ್ರಿ ಮರುದಿನ ಇಲ್ಲಿ ವರ್ಷಕ್ಕೊಮ್ಮೆ ನಡೆಯುವ ಮುಳ್ಳಿನ ಗದ್ದುಗೆಯ ಜಾತ್ರೆಯನ್ನು ಕಣ್ತುಂಬಿಕೊಳ್ಳಲು ಸಾವಿರಾರು ಜನ ಭಕ್ತರು ಮಠಕ್ಕಾಗಮಿಸುತ್ತಾರೆ.
ಹರನಹಳ್ಳಿ ಕೆಂಗಾಪುರದಲ್ಲಿ ಸ್ವಾಮೀಜಿ ಐದು ದಿನಗಳ ಕಾಲ ಉಪವಾಸ ಇದ್ದು, ಶಿವರಾತ್ರಿ ಮರುದಿನ ಮುಳ್ಳಿನ ಗದ್ದುಗೆ ಮೇಲೆ ನರ್ತನ ಮಾಡಿ ಪವಾಡ ಸೃಷ್ಟಿ ಮಾಡಿದ್ದಾರೆ. ಮುಳ್ಳಿನ ಗದ್ದಿಗೆ ಮೇಲೆ ನೃತ್ಯ ಮಾಡಿದರೂ ಕೂಡ ಶ್ರೀಗಳಿಗೆ ಏನೂ ಆಗದೇ ಇರುವುದು ಇಲ್ಲಿನ ಪವಾಡ.
ಭಕ್ತರ ಒಳಿತಿಗಾಗಿ ಐದು ದಿನಗಳ ಕಾಲ ಉಪವಾಸ ಇದ್ದು, ಗದ್ದುಗೆಯಲ್ಲಿ ನಿರ್ಮಾಣ ಮಾಡುವ ಮುಳ್ಳಿನ ಗದ್ದುಗೆ ಮೇಲೆ ಕೇವಲ ಬಾಳೆ ಎಲೆ ಹಾಸಿ ಅದರ ಮೇಲೆ ರಾಮಲಿಂಗೇಶ್ವರ ಸ್ವಾಮೀಜಿ ಕುಣಿದು, ಜಿಗಿದು ನರ್ತನವನ್ನು ಮಾಡುವುದೇ ಈ ಭಾಗದ ಬಹುದೊಡ್ಡ ಪವಾಡವಾಗಿದೆ. ಮುಳ್ಳಿನ ಗದ್ದುಗೆ ಮೇಲೆ ಜಿಗಿಯುವುದು, ನರ್ತಿಸಿದರು ಕೂಡ ಸ್ವಾಮೀಜಿಗೆ ಇಲ್ಲಿ ತನಕ ಯಾವುದೇ ಸಮಸ್ಯೆ ಆಗಿಲ್ಲ.
ಮಠದಿಂದ ಆರಂಭವಾಗಿ ಒಂದು ಕಿಮೀ ಜರುಗುವ ಮೆರವಣಿಯುದ್ದಕ್ಕೂ ರಾಮಲಿಂಗೇಶ್ವರ ಸ್ವಾಮೀಜಿ ಮುಳ್ಳಿನ ಮೇಲೆ ಕೂತಿರುತ್ತಾರೆ. ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ವಿವಿಧ ಹಳ್ಳಿಯಲ್ಲದೇ ಪಕ್ಕದ ರಾಜ್ಯಗಳಾದ ಕೇರಳ, ಮಹಾರಾಷ್ಟ್ರಗಳಿಂದ ಭಕ್ತರು ಆಗಮಿಸುತ್ತಾರೆ.