ಸೌತ್ ಇಂಡಿಯಾ ಬಾಡಿ ಬಿಲ್ಡಿಂಗ್ ಸ್ಪರ್ಧೆ ದಾವಣಗೆರೆ: ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಸೌತ್ ಇಂಡಿಯಾ ಬಾಡಿ ಬಿಲ್ಡಿಂಗ್ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು. ರಾಜ್ಯದ ಮೂಲೆ ಮೂಲೆಯಿಂದ ಆಗಮಿಸಿದ್ದ ದೈತ್ಯಾಕಾರ ದೇಹ ಹೊಂದಿದ್ದ ನೂರಾರು ಬಾಡಿ ಬಿಲ್ಡಿರ್ಸ್ಗಳು ಭಾಗವಹಿಸಿದರು. ಅಂತರಾಷ್ಟ್ರೀಯ ಕ್ರೀಡಾಪಟು ಬಾಡಿ ಬಿಲ್ಡರ್ ಮಂಜು ಮೊಗವೀರರವರ ನೇತೃತ್ವದಲ್ಲಿ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು. ಬಾಡಿಬಿಲ್ಡರ್ಸ್ಗಳು ಭಾಗಿಯಾಗಿ ವೇದಿಕೆಯಲ್ಲಿ ತಮ್ಮ ಶಕ್ತಿ ಪ್ರದರ್ಶನ ಮಾಡಿದರು.
ಮಂಜು ಮೊಗವೀರ ಸ್ನೇಹಿತರ ಬಳಗದಿಂದ ಇದು ಎರಡನೇ ಬಾರಿಗೆ ಆಯೋಜಿಸಲಾಗಿರುವ ದಕ್ಷಿಣ ಭಾರತ ದೇಹದಾರ್ಢ್ಯ ಸ್ಪರ್ಧೆಗೆ ಉತ್ತಮ ಪ್ರತಿಕ್ರಿಯೆ ದೊರಕಿದೆ. ದೂರದ ಊರುಗಳಿಂದ ಆಗಮಿಸಿ ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲ ಸ್ಪರ್ಧಾಳುಗಳಿಗೆ ಊಟದ ವ್ಯವಸ್ಥೆಯೊಂದಿಗೆ ವಸತಿಯ ವ್ಯವಸ್ಥೆ ಕಲ್ಪಿಸಲಾಗಿತ್ತು. ಸ್ಪರ್ಧೆಯಲ್ಲಿ ಭಾಗವಹಿಸುವವರು ಜಿಲ್ಲಾಮಟ್ಟದಲ್ಲಿ 200, ರಾಜ್ಯಮಟ್ಟದಲ್ಲಿ 500 ಹಾಗೂ ಸೌತ್ ಇಂಡಿಯಾ ಮಟ್ಟದಲ್ಲಿ 1,000 ರೂಪಾಯಿ ಶುಲ್ಕವನ್ನು ಅಸೋಸಿಯೇಷನ್ನಲ್ಲಿ ಪಾವತಿ ಮಾಡಬೇಕಿತ್ತು.
ದೇಹದಾರ್ಢ್ಯ ಸ್ಪರ್ಧೆಯಲ್ಲಿ ವಿಜೇತರಿಗಿತ್ತು ಆಕರ್ಷಕ ಪ್ರಶಸ್ತಿ:ದಕ್ಷಿಣ ಭಾರತ ಮಟ್ಟದಲ್ಲಿ ಗೆದ್ದವರಿಗೆ 01 ಲಕ್ಷ ಬಹುಮಾನ, ಮೊದಲನೇ ರನ್ನರ್ಗೆ 25 ಸಾವಿರ, ಎರಡನೇ ರನ್ನರ್ಗೆ 25 ಸಾವಿರ ಹಾಗೂ ಬೆಸ್ಟ್ ಫೋಸರ್ಗೆ 10 ಸಾವಿರ ರೂಪಾಯಿ ಬಹುಮಾನ ನೀಡಲಾಯಿತು. ಇನ್ನು ಸ್ಪರ್ಧೆಯಲ್ಲಿ ನುರಿತ ತೀರ್ಪುಗಾರರನ್ನು ಕರೆತರಲಾಗಿತ್ತು. ತೀರ್ಪುಗಾರರು ಹೇಳಿದಂತೆ ದೇಹದಾರ್ಢ್ಯ ಪಟುಗಳು ವೇದಿಕೆಯಲ್ಲಿ ಡಬಲ್ ಬೈಸೆಪ್, ಸೈಡ್ ಚೆಸ್ಟ್, ಲ್ಯಾಟಿಸ್, ಟ್ರೈಸೆಪ್ಸ್, ಸಿಂಗಲ್ ಬೈಸೆಪ್, ನೆಕ್, ಅಬ್ಡಾಬಲ್ಸ್, ಸೈಡ್ ಅಬ್ಡಾಬಲ್ಸ್ ಹೀಗೆ ನಾನಾ ಫೋಸ್ಗಳನ್ನು ಹೊಡೆಯುವ ಮೂಲಕ ತಮ್ಮ ದೈತ್ಯ ದೇಹವನ್ನು ವೇದಿಕೆಯಲ್ಲಿ ಪ್ರದರ್ಶಿಸಿ ನೆರೆದಿದ್ದ ಜನರನ್ನು ರಂಜಿಸಿದರು.
ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಬಿಲ್ಡರ್ಸ್: ಅಂತರರಾಷ್ಟ್ರೀಯ ಬಾಡಿಬಿಲ್ಡರ್ ಮಂಜು ಮೊಗವೀರ ಪ್ರತಿಕ್ರಿಯಿಸಿ "ಸೌತ್ ಇಂಡಿಯಾ ಬಾಡಿ ಬಿಲ್ಡಿಂಗ್ ಸ್ಪರ್ಧೆ ಮೊದಲ ಬಾರಿಗೆ ಆಯೋಜನೆ ಮಾಡಿದ್ದೇವೆ. ನಾನು ರಾಷ್ಟ್ರೀಯ ಬಾಡಿಬಿಲ್ಡರ್ ಆಗಿರುವ ಕಾರಣ ಬೇರೆ ಬೇರೆ ರಾಜ್ಯಗಳಿಗೆ ತೆರಳಿ ಕಾಂಪಿಟೇಷನ್ ಮಾಡಿದ್ದೇವೆ. ಹಾಗಾಗಿ ನಮಗೆ ಬೇಕಾಗಿರುವ ಅಗತ್ಯಗಳ ಬಗ್ಗೆ ಗೊತ್ತಿದ್ದು ನಮ್ಮಲ್ಲಿ ಬಂದ ಸ್ಫರ್ದಾಳುಗಳಿಗೆ ತೊಂದರೆ ಆಗದಂತೆ ವಸತಿ ಊಟದ ವ್ಯವಸ್ಥೆ ಮಾಡಿದ್ದೇವೆ. ತಮಿಳುನಾಡು, ಆಂಧ್ರ, ಚೆನ್ನೈ, ಕೇರಳ ಪುದುಚೇರಿಯಿಂದ ಸ್ಪರ್ಧಾಳುಗಳು ಬಂದಿದ್ದಾರೆ ಎಂದರು.
ಇದನ್ನೂ ಓದಿ:ಹಾವೇರಿ: ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಬಿದ್ದು ಗಾಯಗೊಂಡ ಪೈಲ್ವಾನರು - ವಿಡಿಯೋ