ಕರ್ನಾಟಕ

karnataka

By ETV Bharat Karnataka Team

Published : 4 hours ago

Updated : 4 hours ago

ETV Bharat / state

ಮುಡಾ ಕೆಸರೆ ಜಮೀನು ಮಹಜರು: ದೂರುದಾರ ಸ್ನೇಹಮಯಿ ಕೃಷ್ಣ ಹೇಳಿದ್ದೇನು? - Muda Plots Inspection

ಮುಡಾ ಕೆಸರೆ ಜಮೀನಿನ ಸ್ಥಳ ಮಹಜರು ಪ್ರಕಿಯೆಯಲ್ಲಿ ಭಾಗವಹಿಸಿದ್ದರ ಕುರಿತು ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

snehamayi-krishna
ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ (ETV Bharat)

ಮೈಸೂರು:ಲೋಕಾಯುಕ್ತರು ನೀಡಿದ ನೋಟಿಸಿನಂತೆ ಇಂದು ಬೆಳಗ್ಗೆ ವಿಚಾರಣೆಗೆ ಹಾಜರಾಗಿದ್ದೆ. ಬಳಿಕ ಕೆಸರೆ ಗ್ರಾಮದಲ್ಲಿ‌ರುವ ಮೂಲ ಸ್ಥಳದಲ್ಲಿ ಲೋಕಾಯುಕ್ತ ಪೊಲೀಸರ ಸಮ್ಮುಖದಲ್ಲಿ ಸ್ಥಳ ಮಹಜರು ನಡೆಯಿತು. 3ನೇ ತಾರೀಖಿನಂದು ಬದಲಿ ನಿವೇಶನ ಪಡೆದ ವಿಜಯನಗರದ ಮೂರನೇ ಹಂತದ ಸ್ಥಳ ಮಹಜರಿಗೆ ಬರುವಂತೆ ಹೇಳಿದ್ದಾರೆ ಎಂದು ದೂರುದಾರ ಸ್ನೇಹಮಯಿ ಕೃಷ್ಣ ತಿಳಿಸಿದರು.

ಸ್ಥಳ ಮಹಜರಿನ ಬಳಿಕ ಲೋಕಾಯುಕ್ತ ಕಚೇರಿಯೆದುರು ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ಲೋಕಾಯುಕ್ತ ಎಸ್​ಪಿಯವರು ನನ್ನ ಸಮ್ಮುಖದಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಸ್ಥಳ ಮಹಜರು ನಡೆಸಿದರು. ಅದರ ಅಳತೆ ಮತ್ತು ನಿವೇಶನಗಳು ಇದೆಯೇ ಎಂದು ಪರಿಶೀಲನೆ ನಡೆಸಿದರು ಎಂದರು.

ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಹೇಳಿಕೆ (ETV Bharat)

ಸರ್ವೆ ನಂಬರ್ 464ರಲ್ಲಿ 3 ಎಕರೆ‌ 14‌ ಗುಂಟೆಯಲ್ಲಿ ಚರಂಡಿ, ಉದ್ಯಾನವನ ರಚನೆ ಆಗಿರುವುದು ಸ್ಪಷ್ಟವಾಗಿ ಕಂಡುಬಂದಿದೆ. ನನ್ನ ಆರೋಪಕ್ಕೆ ಪೂರಕವಾದ ಸಾಕ್ಷ್ಯಾಧಾರಗಳು ಸ್ಥಳ ಮಹಜರಿನಲ್ಲಿ ಕಂಡುಬಂದಿವೆ. ಈಗಾಗಲೇ ಮೈಸೂರು ಲೋಕಾಯುಕ್ತ ಎಸ್​ಪಿ ತಾಲೂಕು ಕಚೇರಿಯ ಭೂ ದಾಖಲೆಗಳ ಇಲಾಖೆಗೆ ಹೋಗಿ ಮಾಹಿತಿಯನ್ನು ಪಡೆಯುತ್ತಿದ್ದಾರೆ ಎಂದು ಹೇಳಿದರು.

ಸ್ಥಳ ಮಹಜರಿನಲ್ಲಿ ಜಾಗದ ಗಡಿಯನ್ನು ಗುರುತು ಮಾಡಿ, ವಿವರವಾದ ಮಹಜರು ದಾಖಲೆ ಸಿದ್ಧಪಡಿಸಿ, ಸಹಿ ಪಡೆದುಕೊಂಡಿದ್ದಾರೆ. ಆ ಭೂಮಿಯಲ್ಲಿ ಎಷ್ಟು ನಿವೇಶನಗಳನ್ನು ಮಾಡಲಾಗಿದೆ ಮತ್ತು ಚರಂಡಿ, ರಸ್ತೆಗೆ ಎಷ್ಟು ಭೂಮಿ ಬಳಕೆಯಾಗಿದೆ ಎಂಬುದನ್ನು ಸಂಪೂರ್ಣವಾಗಿ ಗುರುತು ಮಾಡಿ, ಮಹಜರು ಮಾಡಲಾಗಿದೆ. ಭೂಮಾಪಕರು ಮತ್ತು ನಗರ ಅಭಿವೃದ್ಧಿ ಪ್ರಾಧಿಕಾರದಿಂದ ಲೋಕಾಯುಕ್ತ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದ ಕೆಲವು ದಾಖಲೆಗಳನ್ನು ಪಡೆದುಕೊಂಡಿದ್ದಾರೆ. ಹೆಚ್ಚಿನ ದಾಖಲೆಗಳ ಸಂಗ್ರಹಕ್ಕೆ ತಹಶೀಲ್ದಾರ್ ಕಚೇರಿಗೆ ಎಸ್​ಪಿ ತೆರಳಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ:ಸಿಎಂ ಸಿದ್ದರಾಮಯ್ಯ ವಿರುದ್ಧ ಇ.ಡಿಗೂ ದೂರು ನೀಡಿದ ಸ್ನೇಹಮಯಿ ಕೃಷ್ಣ - Muda Scam

Last Updated : 4 hours ago

ABOUT THE AUTHOR

...view details