ಕರ್ನಾಟಕ

karnataka

ETV Bharat / state

ಉಡುಪಿಯಲ್ಲಿ ಎರಡು ತಂಡಗಳ ನಡುವೆ ಗ್ಯಾಂಗ್​ವಾರ್ ಪ್ರಕರಣ; ಒಟ್ಟು ಆರು ಮಂದಿ ಬಂಧನ - udupi gang war case - UDUPI GANG WAR CASE

ನಡುರಸ್ತೆಯಲ್ಲಿ ಅಡ್ಡಾದಿಡ್ಡಿ ಕಾರು ಚಲಾಯಿಸಿ, ಎರಡು ಗುಂಪುಗಳು ಪರಸ್ಪರ ಹೊಡೆದಾಡಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಆರೋಪಿಗಳನ್ನ ಬಂಧಿಸಲಾಗಿದೆ.

Accused
ಆರೋಪಿಗಳು (ETV Bharat)

By ETV Bharat Karnataka Team

Published : May 26, 2024, 10:42 PM IST

ಉಡುಪಿ :ಉಡುಪಿ ನಗರದಲ್ಲಿ ಎರಡು ತಂಡಗಳ ನಡುವೆ ಗ್ಯಾಂಗ್​ವಾರ್ ನಡೆದ ಪ್ರಕರಣದಲ್ಲಿ ಒಟ್ಟು ಆರು ಆರೋಪಿಗಳನ್ನು ಬಂಧಿಸಲಾಗಿದೆ.

ಘಟನೆ ಬೆಳಕಿಗೆ ಬಂದ ತಕ್ಷಣ ಮೂವರು ಆರೋಪಿಗಳನ್ನು ಶನಿವಾರ ಬಂಧಿಸಲಾಗಿತ್ತು. ಮತ್ತೆ ಮೂವರನ್ನು ಭಾನುವಾರ ಬಂಧಿಸಲಾಗಿದೆ. ಆಶಿಕ್, ರಾಕೀಬ್, ಸಕ್ಲೈನ್​ನನ್ನು ಈ ಮೊದಲೇ ಬಂಧಿಸಲಾಗಿತ್ತು. ಇಂದು ಮಜೀದ್, ಅಲ್ಫಾಜ್, ಶರೀಫ್​ನನ್ನು ಬಂಧಿಸಲಾಗಿದೆ.

ಮೇ 18 ರಂದು ರಾತ್ರಿ ಎರಡು ತಂಡಗಳ ನಡುವೆ ರಸ್ತೆಯಲ್ಲೇ ಹೊಡೆದಾಟ ನಡೆದಿತ್ತು. ಅಡ್ಡಾದಿಡ್ಡಿ ಕಾರು ಚಲಾಯಿಸಿ ಎರಡೂ ಕಾರುಗಳು ಪರಸ್ಪರ ಡಿಕ್ಕಿ ಹೊಡೆದ ಬಳಿಕ ಎರಡು ತಂಡಗಳ ನಡುವೆ ಫೈಟ್ ನಡೆದಿತ್ತು. ಈ ವೇಳೆ ನಡುರಸ್ತೆಯಲ್ಲೇ ತಂಡವೊಂದು ತಲ್ವಾರ್​ ಹಿಡಿದು ಹೊಡೆದಾಟ ನಡೆಸಿತ್ತು. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಘಟನೆಯ ಗಂಭೀರತೆ ಮತ್ತು ಸಾರ್ವಜನಿಕರ ಆಗ್ರಹದ ನಡುವೆ ಪೊಲೀಸ್ ಕಾರ್ಯಾಚರಣೆ ನಡೆದಿದ್ದು, ಇದುವರೆಗೆ ಪ್ರಕರಣಕ್ಕೆ ಸಂಬಂಧಿಸಿದ ಒಟ್ಟು ಆರು ಜನರನ್ನು ಬಂಧಿಸಿದ್ದಾರೆ. ಆರೋಪಿಗಳು ಕಾರಿನಲ್ಲಿ ಅಕ್ರಮವಾಗಿ ತಲ್ವಾರ್ ಇರಿಸಿ, ಉಡುಪಿಯಲ್ಲಿ ಕಳ್ಳತನ ಮಾಡಲು ಪ್ರಯತ್ನಿಸಿರುವುದಾಗಿಯೂ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

'ಆಶಿಕ್ ಮತ್ತು ರಕೀಬ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಎರಡು ಸ್ವಿಪ್ಟ್ ಕಾರು, ಎರಡು ಬೈಕ್, ಒಂದು ತಲ್ವಾರ್ ಮತ್ತು ಒಂದು ಡ್ರ್ಯಾಗರ್ ವಶಪಡಿಸಿಕೊಳ್ಳಲಾಗಿದೆ. ಬಂಧಿತರು ಗರುಡ ಗ್ಯಾಂಗ್​ನವರು ಎಂದು ತಿಳಿಸಿದ್ದಾರೆ. ಉಳಿದ ಆರೋಪಿಗಳಿಗಾಗಿ ತನಿಖೆ ಮುಂದುವರಿದಿದೆ' ಎಂದು ಉಡುಪಿ ಎಸ್ಪಿ ಅರುಣ್ ಕೆ ತಿಳಿಸಿದ್ದರು.

ಇದನ್ನೂ ಓದಿ :ಉಡುಪಿಯ ನಡು ರಸ್ತೆಯಲ್ಲೇ ಗ್ಯಾಂಗ್ ವಾರ್: ಅಡ್ಡಾದಿಡ್ಡಿ ಕಾರು ಚಲಾಯಿಸಿ ಹೊಡೆದಾಟ - ವಿಡಿಯೋ ವೈರಲ್ - Udupi Gang War

ABOUT THE AUTHOR

...view details