ಮಂಗಳೂರು(ದಕ್ಷಣ ಕನ್ನಡ):ಈ ಋತುವಿನ ಮೊದಲ ವಿಹಾರ ನೌಕೆ MS SILVER WHISPER (ಎಂಎಸ್ ಸಿಲ್ವರ್ ವಿಸ್ಪರ್) ನವ ಮಂಗಳೂರು ಬಂದರಿಗೆ ಮಂಗಳವಾರ ಆಗಮಿಸಿತು. ಐಷಾರಾಮಿ ಹಡಗು ಮುಂಬೈನಿಂದ ಆಗಮಿಸಿದ್ದು, 299 ಪ್ರಯಾಣಿಕರು ಮತ್ತು 296 ಸಿಬ್ಬಂದಿ ಇದ್ದರು.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೆ ಮುಗಿಲನ್ ಅವರು ಹಡಗಿನ ಕ್ಯಾಪ್ಟನ್‌ಗೆ ಸ್ಮರಣಿಕೆ ನೀಡುವ ಮೂಲಕ ಅತಿಥಿಗಳನ್ನು ಸ್ವಾಗತಿಸಿದರು.
ವಿಹಾರ ನೌಕೆ 'MS SILVER WHISPER' (ETV Bharat) ಪ್ರಯಾಣಿಕರು ಮೂಡುಬಿದಿರೆಯ ಸಾವಿರಗಂಬದ ಬಸದಿ, ಕದ್ರಿ ಮಂಜುನಾಥ ದೇವಸ್ಥಾನ, ಸೇಂಟ್ ಅಲೋಶಿಯಸ್ ಚಾಪೆಲ್ ಮತ್ತು ಪಿಲಿಕುಳದ ನಿಸರ್ಗಧಾಮಕ್ಕೆ ಭೇಟಿ ನೀಡಿದರು.
ಎಂಎಸ್ ಸಿಲ್ವರ್ ವಿಸ್ಪರ್ ಹಡಗು (ETV Bharat) ಈ ಹಡಗು 186 ಮೀಟರ್ ಉದ್ದ, 6.20 ಮೀಟರ್ ಡ್ರಾಫ್ಟ್ ಮತ್ತು 28,258 ಟನ್ ತೂಕ ಹೊಂದಿದೆ. ಅಂತಾರಾಷ್ಟ್ರೀಯ ಪ್ರವಾಸದಲ್ಲಿರುವ ಹಡಗು ಕೇಪ್ಟೌನ್, ಮುಂಬೈ, ಮಂಗಳೂರು, ಕೊಲಂಬೊ ಮತ್ತು ಇತರೆ ಸ್ಥಳಗಳಿಗೆ ಪ್ರಯಾಣಿಸುತ್ತದೆ.
ಪ್ರವಾಸಿಗರಿಗೆ ಸಾಂಪ್ರದಾಯಿಕ ಸ್ವಾಗತ (ETV Bharat) ಹಡಗಿನಲ್ಲಿ ಹೈಟೆಕ್ ಸೌಲಭ್ಯ:ಪ್ರಯಾಣಿಕರ ಅನುಕೂಲತೆಗಾಗಿ 14 ಇಮಿಗ್ರೇಷನ್ ಕೌಂಟರ್‌ಗಳು, 2 ಕಸ್ಟಮ್ಸ್ ಕೌಂಟರ್‌ಗಳು, ವೈದ್ಯಕೀಯ ತಪಾಸಣಾ ಕೇಂದ್ರಗಳು, ಆಯುಷ್ ಸಚಿವಾಲಯದ ಧ್ಯಾನ ಕೇಂದ್ರ ಮತ್ತು ಯಕ್ಷಗಾನದ ಚಿತ್ರಣ ಹೊಂದಿರುವ ಸೆಲ್ಫಿ ಸ್ಟ್ಯಾಂಡ್ ಸೇರಿದಂತೆ ಹಲವು ಅತ್ಯಾಧುನಿಕ ಸೌಲಭ್ಯಗಳನ್ನು ಹಡಗಿನಲ್ಲಿ ಕಾಣಬಹುದು. ಈ ಪ್ರಥಮ ಕ್ರೂಸ್ ಹಡಗು, ನವ ಮಂಗಳೂರು ಬಂದರನ್ನು ಭಾರತದ ಪ್ರಮುಖ ಕ್ರೂಸ್ ತಾಣವಾಗಿ ಗುರುತಿಸಿದೆ.
ಹಡಗಿನ ಕ್ಯಾಪ್ಟನ್‌ಗೆ ಸ್ಮರಣಿಕೆ ನೀಡಿದ ಜಿಲ್ಲಾಧಿಕಾರಿ (ETV Bharat) ಇದನ್ನೂ ಓದಿ:ಕುಮಾರಧಾರ ನದಿಯಲ್ಲಿ ಕುಕ್ಕೆ ದೇವರಿಗೆ ನೌಕಾವಿಹಾರ, ಅವಭೃತೋತ್ಸವ: ಯಶಸ್ವಿನಿಯ ನೀರಾಟಕ್ಕೆ ಮನಸೋತ ಭಕ್ತರು