ಕರ್ನಾಟಕ

karnataka

ETV Bharat / state

ಯುವ ವಿಚ್ಛೇದನ ವಿಚಾರ ನಮಗೆ ಗೂತ್ತಿಲ್ಲ: ಶಿವಣ್ಣ ದಂಪತಿ - Yuva Rajkumar Divorce Case - YUVA RAJKUMAR DIVORCE CASE

ಮಾಧ್ಯಮದಲ್ಲಿ ವರದಿಯಾಗುತ್ತಿರುವ ನಟ ಯುವರಾಜ್‌ಕುಮಾರ್‌ ಮತ್ತು ಶ್ರೀದೇವಿ ಅವರ ವಿವಾಹ ವಿಚ್ಛೇದನ ಕುರಿತು ಶಿವರಾಜ್ ಕುಮಾರ್ ದಂಪತಿ ಶಿವಮೊಗ್ಗದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

SHIVANNA COUPLE REACTS
ಶಿವಣ್ಣ ದಂಪತಿ (ETV Bharat)

By ETV Bharat Karnataka Team

Published : Jun 10, 2024, 5:29 PM IST

Updated : Jun 10, 2024, 6:37 PM IST

ಶಿವಣ್ಣ ದಂಪತಿ (ETV Bharat)

ಶಿವಮೊಗ್ಗ:ಯುವ ರಾಜಕುಮಾರ್​ ಡಿವೋರ್ಸ್ ಮೊರೆ ಹೋಗಿರುವ ವಿಚಾರ ನಮಗೆ ಗೊತ್ತಿಲ್ಲ. ಗೊತ್ತಿಲ್ಲದ ವಿಚಾರದ ಬಗ್ಗೆ ನಾವು ಮಾತನಾಡುವುದು ತಪ್ಪು ಎಂದು ನಟ ಶಿವರಾಜ್ ಕುಮಾರ್ ಹೇಳಿದರು. ಅವರ ಪತ್ನಿ, ಗೀತಾ ಶಿವರಾಜ್ ಕುಮಾರ್ ಕೂಡ ಅದೇ ಮಾತನ್ನು ಹೇಳಿದರು.

ಸ್ಯಾಂಡಲ್​ವುಡ್​​ ನಟ ಯುವ ರಾಜಕುಮಾರ್​ ಅವರು ಪತ್ನಿ ಶ್ರೀದೇವಿಗೆ ಡಿವೋರ್ಸ್‌ ನೀಡಲು ಮುಂದಾಗಿರುವ ಸುದ್ದಿ ಮಾಧ್ಯಮದಲ್ಲಿ ವರದಿಯಾಗುತ್ತಿದ್ದು, ಈ ಬಗ್ಗೆ ಶಿವಮೊಗ್ಗದಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಶಿವರಾಜ್ ಕುಮಾರ್ ದಂಪತಿ ಹೀಗೆ ಉತ್ತರಿಸಿದರು.

ಯುವ ಡಿವೋರ್ಸ್‌ ಕುರಿತಾಗಿ ನಮಗೆ ಏನೂ ಗೊತ್ತಿಲ್ಲ. ಗೂತ್ತಿಲ್ಲದ ವಿಚಾರದ ಬಗ್ಗೆ ಮಾತನಾಡುವುದು ಸರಿ ಅಲ್ಲ. ಆದರೆ, ಈ ಸುದ್ದಿ ನನಗೆ ಬೇಸರ ತರಿಸಿದೆ. ಗೊತ್ತಿಲ್ಲದೇ ಏನೂ ಮಾತನಾಡಬಾರದು. ಅದು ಅವರ ವೈಯಕ್ತಿಕ ಬದುಕು. ಈ ಬಗ್ಗೆ ಹೇಳೋಕೆ ನಮಗೆ ಕಷ್ಟ ಆಗುತ್ತದೆ. ಕುಟುಂಬದ ಹಿರಿಯನಾಗಿ ನನಗೆ ಏನೂ ಗೂತ್ತಿಲ್ಲ‌. ಮನೆಗೆ ಹೋಗಿ ಈ ಬಗ್ಗೆ ಯುವ ಜತೆ ಮಾತನಾಡುತ್ತೇವೆ ಎಂದು ಶಿವರಾಜ್ ಕುಮಾರ್ ಹೇಳಿದರು.

ಗೀತಾ ಶಿವರಾಜ್ ಕುಮಾರ್ ಮಾತನಾಡಿ, ಇದು ನಮ್ಮ ಮನೆಯ ವಿಚಾರ. ಇಲ್ಲಿವರೆಗೂ ಅದರ ಬಗ್ಗೆ ಗೊತ್ತಿಲ್ಲ. ಈ ಬಗ್ಗೆ ವಿಚಾರ ಮಾಡುತ್ತೇವೆ. ಅಲ್ಲದೇ ಈ ವಿಚಾರದ ಬಗ್ಗೆ ಏನೂ ಮಾತನಾಡದೆ ಇರುವುದು ಒಳ್ಳೆಯದು. ಇದರ ಬಗ್ಗೆ ನಾವಿಬ್ಬರೂ ಮಾತನಾಡಲ್ಲ. ಅಲ್ಲಿ ಏನಾಗಿದೆ ಎಂದು ನಮಗೆ ಗೂತ್ತಿಲ್ಲ ಎಂದರು.

ಇದನ್ನೂ ಓದಿ:'ಪರಸ್ಪರ ಒಪ್ಪಿಗೆಯಿಂದ ಬೇರೆಯಾಗಿದ್ದೇವೆ': ಚಂದನ್ ಶೆಟ್ಟಿ-ನಿವೇದಿತಾ ಗೌಡ ವಿಚ್ಛೇದನ - Chandan Shetty Niveditha Gowda Divorce

Last Updated : Jun 10, 2024, 6:37 PM IST

ABOUT THE AUTHOR

...view details