IND vs ENG T20I: ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಸರಣಿ ಭಾಗವಾಗಿ ಶುಕ್ರವಾರ ನಡೆದ 4ನೇ ಪಂದ್ಯದಲ್ಲಿ ಭಾರತ ರೋಚಕ ಗೆಲುವು ಸಾಧಿಸಿತು. ಈ ಗೆಲುವಿನೊಂದಿಗೆ ಒಂದು ಪಂದ್ಯ ಬಾಕಿ ಇರುವಂತೆಯೆ 3-1 ಅಂತರದಿಂದ ಸರಣಿಯನ್ನು ಕೈವಶ ಮಾಡಿಕೊಂಡಿದೆ.
ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಭಾರತ ಭರ್ಜರಿ ಪ್ರದರ್ಶನ ನೀಡಿತು. ಆರಂಭದಲ್ಲಿ 79ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಭಾರತಕ್ಕೆ ಹಾರ್ದಿಕ್ ಪಾಂಡ್ಯ ಮತ್ತು ಶಿವಂ ದುಬೆ ಆಸರೆಯಾದರು. ಈ ಇಬ್ಬರು 87 ರನ್ಗಳ ಜೊತೆಯಾಟ ಆಡಿದರು. ಹಾರ್ದಿಕ್ (53) ಮತ್ತು ದುಬೆ (53) ಇಬ್ಬರು ಅರ್ಧಶತಕ ಪೂರ್ಣಗೊಳಿಸಿದರು. ಇದರಿಂದಾಗಿ ಭಾರತ 9 ವಿಕೆಟ್ ನಷ್ಟಕ್ಕೆ 20 ಓವರ್ಗಳಲ್ಲಿ 181 ರನ್ ಕಲೆಹಾಕಿತು.
𝗪𝗛𝗔𝗧. 𝗔. 𝗪𝗜𝗡! 👏 👏#TeamIndia held their composure & sealed a 1⃣5⃣-run victory in the 4th T20I to bag the series, with a game to spare! 🙌 🙌
— BCCI (@BCCI) January 31, 2025
Scorecard ▶️ https://t.co/pUkyQwxOA3 #INDvENG | @IDFCFIRSTBank pic.twitter.com/Jjz5Cem2US
ಈ ಗುರಿಯನ್ನು ಬೆನ್ನಟ್ಟಿದ ಆಂಗ್ಲ ಪಡೆಯನ್ನು 166 ರನ್ಗಳಿಗೆ ಕಟ್ಟಿ ಹಾಕಿಕುವಲ್ಲಿ ಭಾರತೀಯ ಬೌಲರ್ಗಳು ಯಶಸ್ವಿಯಾದರು. ಬಿಷ್ಣೋಯಿ ಮತ್ತು ಹರ್ಷಿತ್ ರಾಣಾ ತಲಾ 3 ವಿಕೆಟ್ ಪಡೆದು ಮಿಂಚಿದರು.
ಆದರೆ, ಹರ್ಷಿತ್ ರಾಣಾ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ ಪಂದ್ಯದ ನಡುವೆ ತಂಡ ಸೇರಿಕೊಂಡು ಬೌಲಿಂಗ್ ಮಾಡಿ ಮೂರು ವಿಕೆಟ್ ಕಬಳಿಸಿದರು. ಇದರ ಬೆನ್ನಲ್ಲೆ ಭಾರತದ ವಿರುದ್ಧ ಅಪಸ್ವರ ಕೇಳಿ ಬಂದಿದ್ದವು. ತಂಡದಲ್ಲಿ ಇರದ ಪ್ಲೇಯರ್ಗೆ ಕರೆತಂದು ಬೌಲಿಂಗ್ ಮಾಡಿಸಿ ಮೋಸದಾಟ ಆಡಿದ್ದಾರೆ ಎಂದು ಆರೋಪಗಳು ಕೇಳಿ ಬಂದಿವೆ.
ಆದರೆ, ಆದರೆ ಐಸಿಸಿ ನಿಯಮಗಳ ಪ್ರಕಾರ ಕನ್ಕ್ಯುಶನ್ ಸಬ್ಸ್ಟಿಟ್ಯೂಟ್ ಆಟಗಾರನಾಗಿ ತಂಡಕ್ಕೆ ಕರೆತರಲಾಗಿತ್ತು. ಕಾರಣ ಮೊದಲ ಇನ್ನಿಂಗ್ಸ್ನ ಕೊನೆಯ ಓವರ್‌ನಲ್ಲಿ ಚೆಂಡು ದುಬೆ ಅವರ ಹೆಲ್ಮೆಟ್‌ಗೆ ಬಲವಾಗಿ ಬಡಿದಿತ್ತು. ಈ ಹಿನ್ನೆಲೆ ಮ್ಯಾನೆಜ್ಮೆಂಟ್ ಕನ್ಕ್ಯುಶನ್ ಸಬ್ಸ್ಟಿಟ್ಯೂಟ್ ಮೂಲಕ ಹರ್ಷಿತ್ ರಾಣಾಗೆ ತಂಡಕ್ಕೆ ಕರೆತರಲಾಯಿತು.
JOS BUTTLER IN PRESS CONFERENCE:
— Johns. (@CricCrazyJohns) January 31, 2025
" it's not a like to like replacement - we don't agree with that". pic.twitter.com/td5QYMmcc7
ಕನ್ಕ್ಯುಶನ್ (Concussion) ಸಬ್ ಎಂದರೇನು?: ಐಸಿಸಿ ನಿಯಮಗಳ ಪ್ರಕಾರ, ಕನ್ಕ್ಯುಶನ್ ಸಬ್ ಎಂದರೆ ಬ್ಯಾಟರ್ ತಲೆಗೆ ಅಥವಾ ಹೆಲ್ಮೇಟ್ಗೆ ಚೆಂಡು ಬಲವಾಗಿ ಬಡಿದರೆ ಅವರ ಸ್ಥಾನಕ್ಕೆ ಬದಲಿ ಆಟಗಾರನಾಗಿ ಇನ್ನೊಬ್ಬರನ್ನು ತಂಡಕ್ಕೆ ಸೇರಿಸಿಕೊಳ್ಳಬಹುದು. ಆದರೆ, ದುಬೆ ಮತ್ತು ರಾಣಾ ಅವರ ವಿಷಯದಲ್ಲಿ ಇದು ಸ್ಪಷ್ಟವಾಗಿಲ್ಲ. ಏಕೆಂದರೆ ಕನ್ಕ್ಯುಶನ್ ಸಬ್ ಆಗಿದ್ದರೆ, ಆಲ್ರೌಂಡರ್ ಸ್ಥಾನಕ್ಕೆ ಆಲ್ರೌಂಡರ್ ಅನ್ನೆ ಕರೆತರಬೇಕು. ಬೌಲರ್ ಆಗಿದ್ದರೇ ಬೌಲರ್ ಅನ್ನೆ ತಂಡಕ್ಕೆ ಕರೆತರಬೇಕು. ಈ ಹಿನ್ನೆಲೆ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಅಸಮಾಧಾನ ಹೊರಹಾಕಿದ್ದಾರೆ.
ಐಸಿಸಿ ನಿಯಮಗಳ ಪ್ರಕಾರ ಶಿವಂ ದುಬೆ ಬದಲಿಗೆ ಬೌಲರ್ ಅವರನ್ನು ಕನ್ಕ್ಯುಶನ್ ಬದಲಿ ಆಟಗಾರನಾಗಿ ಹೇಗೆ ಕರೆತರಲಾಯಿತು ಎಂದು ಬಟ್ಲರ್ ಪ್ರಶ್ನಿಸಿದ್ದಾರೆ. ಈ ರೀತಿ ಮಾಡುವುದು ಸರಿಯಲ್ಲ. ನಾವು ಇದನ್ನು ಒಪ್ಪಲ್ಲ. ಕನಿಷ್ಠ ಈ ನಿರ್ಧಾರ ತೆಗೆದುಕೊಳ್ಳುವಾಗ ನಮ್ಮೊಂದಿಗೆ ಸಮಾಲೋಚನೆಯೂ ನಡೆಸಲಿಲ್ಲ.
ನಾನು ಬ್ಯಾಟಿಂಗ್‌ಗೆ ಬಂದಾಗ ಹರ್ಷಿತ್ ಏಕೆ ಫೀಲ್ಡಿಂಗ್ ಮಾಡುತ್ತಿದ್ದೀರಿ ಎಂದು ಕೇಳಿದೆ. ಅವರು ಕನ್ಕ್ಯುಶನ್ ಸಬ್ ಎಂದು ಉತ್ತರಿಸಿದರು. ಮ್ಯಾಚ್ ರೆಫರಿ ಜಾವಗಲ್ ಶ್ರೀನಾಥ್ ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದಿದ್ದಾರೆ.
ಇದನ್ನೂ ಓದಿ: 5 ತಿಂಗಳ ಬಳಿಕ ಸ್ಪೋಟಕ ಬ್ಯಾಟರ್ ಎಂಟ್ರಿ; ಭಾರತಕ್ಕೆ ಬಂತು ಆನೆಬಲ!