ದಾವಣಗೆರೆ: ಮಹಿಳೆಯರಿಗೆ ಉಪಯೋಗವಾಗಲೆಂದು ರಾಜ್ಯ ಸರ್ಕಾರ ಶಕ್ತಿ ಯೋಜನೆಯನ್ನು ಜಾರಿ ಮಾಡಿದೆ. ಇದರಿಂದ ಸಾಕಷ್ಟು ಮಹಿಳೆಯರಿಗೆ ಉಪಯೋಗವಾಗಿದೆ. ಇಂತಹ ಮಹತ್ವಾಕಾಂಕ್ಷೆಯ ಯೋಜನೆ ಜಾರಿಯಾಗಿ ಒಂದು ವರ್ಷವಾಗಿದೆ. ಈ ಒಂದು ವರ್ಷದಲ್ಲಿ ದಾವಣಗೆರೆ ಕೆಎಸ್‌ಆರ್‌ಟಿಸಿ ಘಟಕಕ್ಕೆ ಸಾಕಷ್ಟು ಆದಾಯ ಹರಿದು ಬಂದಿದೆ.
ಶಕ್ತಿ ಯೋಜನೆ: ದಾವಣಗೆರೆ ಕೆಎಸ್‌ಆರ್‌ಟಿಸಿ ಘಟಕಕ್ಕೆ ನಿರೀಕ್ಷೆ ಮೀರಿ ಆದಾಯ - Shakti Scheme - SHAKTI SCHEME
ಶಕ್ತಿ ಯೋಜನೆ ಜಾರಿಯಾಗಿ ಒಂದು ವರ್ಷ ಪೂರ್ಣವಾಗಿದ್ದು, ದಾವಣಗೆರೆ ಘಟಕ ನಿರೀಕ್ಷೆಗೂ ಮೀರಿ ಆದಾಯ ಗಳಿಸಿದೆ.
Published : Jul 5, 2024, 2:53 PM IST
ದಾವಣಗೆರೆ ಕೆಎಸ್‌ಆರ್‌ಟಿಸಿ ಘಟಕ ಒಟ್ಟು 90.05 ಕೋಟಿ ಆದಾಯ ಗಳಿಸಿದೆ. ಈ ವರ್ಷದಲ್ಲಿ 3 ಕೋಟಿ 28 ಲಕ್ಷ ಜನ ಪ್ರಯಾಣಿಸಿದ್ದಾರೆ. ಇದರಲ್ಲಿ ಮಹಿಳೆಯರೇ ಹೆಚ್ಚು ಎಂಬುದು ವಿಶೇಷ. ಇದಲ್ಲದೇ ಒಂದು ದಿನಕ್ಕೆ 90 ಸಾವಿರ ಜನ ಪ್ರಯಾಣ ಮಾಡಿರುವುದು ವಿಶೇಷ ಸಾಧನೆ ಎಂದು ದಾವಣಗೆರೆ ಕೆಎಸ್‌ಆರ್‌ಟಿಸಿ ಘಟಕದ ನಿಯಂತ್ರಣಾಧಿಕಾರಿ ಸಿದ್ದೇಶ್ವರ್ ಎನ್.ಹೆಬ್ಬಾಳ ಹೇಳಿದರು.
ಧಾರ್ಮಿಕ ಸ್ಥಳಗಳಿಗೆ ಮಹಿಳೆಯರ ಭೇಟಿ: ದುಡಿಯುವ ವರ್ಗದ ಮಹಿಳೆಯರಿಗೆ ಈ ಯೋಜನೆ ಆಸರೆಯಾಗಿದೆ. ಅಲ್ಲದೇ ಮಹಿಳೆಯರು ಧಾರ್ಮಿಕ, ಪ್ರವಾಸಿ ತಾಣಗಳಿಗೆ ಹೆಚ್ಚು ಪ್ರಯಾಣ ಬೆಳೆಸಿದ್ದಾರೆ. ಆದಾಯ ಹೆಚ್ಚು ಹರಿದು ಬಂದಿದ್ದರಿಂದ ಟ್ರಿಪ್ಗಳ ಸಂಖ್ಯೆ ಹಾಗು ಬಸ್ ಸಂಖ್ಯೆ ಏರಿಕೆ ಮಾಡಲಾಗುತ್ತದೆ. ಅಲ್ಲದೇ ಹುಬ್ಬಳ್ಳಿ, ಬೆಂಗಳೂರು, ಬೆಳಗಾವಿ ಭಾಗಕ್ಕೆ ರಾತ್ರಿ ವೇಳೆ ಹೆಚ್ಚು ಬಸ್ ಬಿಡಲಾಗುತ್ತದೆ. ಈಗಾಗಲೇ ಜಿಲ್ಲೆಯ ವಿವಿಧ ಮಾರ್ಗಗಳಲ್ಲಿ ಒಟ್ಟು 47 ಬಸ್‌ಗಳನ್ನು ಬಿಡಲಾಗಿದೆ. 37 ನೂತನ ಅಶ್ವಮೇಧ ಬಸ್ಗಳು ಕೂಡ ಪ್ರಯಾಣಿಸುತ್ತಿವೆ. ಈ ಹಿಂದೆ ಸಿಬ್ಬಂದಿಗಳಿಗೂ ಇಂತಿಷ್ಟು ಟಿಕೆಟ್ ನೀಡಬೇಕೆಂಬ ಗುರಿ ಇತ್ತು. ಈಗ ಈ ತಲೆನೋವು ದೂರವಾಗಿದೆ.