ಕರ್ನಾಟಕ

karnataka

ETV Bharat / state

ಶಿವಮೊಗ್ಗ: 3 ವರ್ಷದಲ್ಲಿ 468 ಪೋಕ್ಸೊ ಪ್ರಕರಣ ದಾಖಲು - POCSO Cases In Shivamogga - POCSO CASES IN SHIVAMOGGA

ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ 468 ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ.

POCSO  Sexual awareness  Child marriage  Shivamogga
ಶಿವಮೊಗ್ಗದಲ್ಲಿ ಪೋಕ್ಸೊ ಪ್ರಕರಣ ಹೆಚ್ಚಳ (ETV Bharat)

By ETV Bharat Karnataka Team

Published : May 24, 2024, 9:57 AM IST

Updated : May 24, 2024, 3:22 PM IST

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಂಜುನಾಥ್ ಮಾತನಾಡಿದರು. (ETV Bharat)

ಶಿವಮೊಗ್ಗ:ಶಿವಮೊಗ್ಗ ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಮಕ್ಕಳ ರಕ್ಷಣೆಗಿರುವ ಪೋಕ್ಸೊ ಕಾಯ್ದೆಯಡಿ ದಾಖಲಾಗುವ ಪ್ರಕರಣಗಳ ಸಂಖ್ಯೆ ಏರುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ಜಿಲ್ಲೆಯಲ್ಲಿ ಒಟ್ಟು 468 ಪ್ರಕರಣಗಳು ದಾಖಲಾಗಿವೆ. ಇದು ಪೋಷಕರನ್ನು ಚಿಂತೆಗೀಡು ಮಾಡಿದೆ.

ಲೈಂಗಿಕ ದೌರ್ಜನ್ಯ ಪ್ರಕರಣಗಳ ಮಾಹಿತಿ (ETV Bharat)

2021-22ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಒಟ್ಟು 154 ಪೋಕ್ಸೊ ಪ್ರಕರಣ ದಾಖಲಾಗಿದ್ದವು. 2022-23ರಲ್ಲಿ ಪೋಕ್ಸೊ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಮೂರು ವರ್ಷದಲ್ಲಿ ಒಟ್ಟು 468 ಪ್ರಕರಣಗಳು ಬೆಳಕಿಗೆ ಬಂದಿದೆ. ಈ ಪೈಕಿ ಕಾಲೇಜು ವಿದ್ಯಾರ್ಥಿನಿಯರ ಮೇಲಾಗಿರುವ ದೌರ್ಜನ್ಯ ಪ್ರಕರಣಗಳೇ ಅಧಿಕ. ಕೆಲವು ಪ್ರಕರಣಗಳಲ್ಲಿ ಬಾಲಕಿಯರ ಮೇಲೆ ಪರಿಚಯಸ್ಥರಿಂದಲೇ ದುಷ್ಕೃತ್ಯ ನಡೆದಿದೆ. ಇನ್ನು ಕೆಲವರು ನಾನಾ ರೀತಿಯ ಆಸೆ, ಆಮಿಷಗಳನ್ನೊಡ್ಡಿ ಕೃತ್ಯ ಎಸಗಿದ್ದಾರೆ. ಕೆಲವೆಡೆ ಅಕ್ಕಪಕ್ಕದ ಮನೆಯವರೇ ಕೃತ್ಯ ಎಸಗಿದ್ದಾರೆ.

ಲೈಂಗಿಕ ದೌರ್ಜನ್ಯ ಪ್ರಕರಣಗಳ ಮಾಹಿತಿ (ETV Bharat)

ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಪೋಕ್ಸೊ ಕಾಯ್ದೆ ಕುರಿತಂತೆ ಶಾಲೆ, ಕಾಲೇಜು ಮಟ್ಟದಲ್ಲಿ ಸಾಕಷ್ಟು ಜಾಗೃತಿ ಮೂಡಿಸಲಾಗುತ್ತಿದೆ. ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದಲೂ ಅರಿವು ಮೂಡಿಸಲಾಗುತ್ತದೆ.

ಕಳೆದ 3 ವರ್ಷದಲ್ಲಿ ನಡೆದ ಪೋಕ್ಸೊ ಪ್ರಕರಣಗಳ ಮಾಹಿತಿ:

  • 2022ರಲ್ಲಿ 117 ಪ್ರಕರಣ ದಾಖಲು, 65 ಪ್ರಕರಣ ಇತ್ಯರ್ಥ, 52 ಪ್ರಕರಣ ಬಾಕಿ ಇದೆ.
  • 2023ರಲ್ಲಿ 152 ಪ್ರಕರಣ ದಾಖಲು, 51 ಪ್ರಕರಣ ಇತ್ಯರ್ಥ, 101 ಪ್ರಕರಣ ಬಾಕಿ ಇದೆ.
  • 2024ರ ಮಾರ್ಚ್ ತಿಂಗಳವರೆಗೆ 44 ಪ್ರಕರಣ ದಾಖಲು.

ಬಾಲ್ಯ ವಿವಾಹದ ಪ್ರಕರಣಗಳ ವಿವರ:

  • 2022ರಲ್ಲಿ 54 ಪ್ರಕರಣ ದಾಖಲು, 26 ಪ್ರಕರಣ ಇತ್ಯರ್ಥ, 26 ಬಾಕಿ ಇದೆ.
  • 2023ರಲ್ಲಿ 66 ಪ್ರಕರಣ ದಾಖಲು, 11 ಪ್ರಕರಣ ಇತ್ಯರ್ಥ, 55 ಬಾಕಿ ಇದೆ.
  • 2024ರಲ್ಲಿ 35 ಪ್ರಕರಣ ದಾಖಲಾಗಿದೆ.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪ್ರತಿಕ್ರಿಯೆ:''ಶಿವಮೊಗ್ಗದಂತಹ ಸುಶಿಕ್ಷಿತ ಜಿಲ್ಲೆಯಲ್ಲಿ ಇಷ್ಟೊಂದು ಪೋಕ್ಸೊ ಪ್ರಕರಣಗಳು ನಡೆಯುತ್ತಿವೆ. ಇದಕ್ಕಾಗಿ ನಮ್ಮ ಇಲಾಖೆ ಎಲ್ಲಿ ಪೋಕ್ಸೊ ಪ್ರಕರಣಗಳು ಹಾಗೂ ಬಾಲ್ಯ ವಿವಾಹ ನಡೆಯುತ್ತಿದೆಯೋ ಅದನ್ನು ಹಾಟ್​ಸ್ಪಾಟ್ ಎಂದು ಗುರುತಿಸುತ್ತಿದೆ. ಅಲ್ಲಿ ಶಾಲೆ ಹಾಗೂ ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತಿದೆ'' ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಂಜುನಾಥ್ ತಿಳಿಸಿದರು.

ಶಿಕ್ಷೆ ಪ್ರಮಾಣ: ಶಿಕ್ಷೆ ಪ್ರಮಾಣದ ಕುರಿತು ಮಾಹಿತಿ ನೀಡಿದ ಅವರು, ''ಪೋಕ್ಸೊ ಪ್ರಕರಣದಲ್ಲಿ 3ರಿಂದ 5 ವರ್ಷದವರೆಗೆ ಶಿಕ್ಷೆ ವಿಧಿಸಬಹುದು. ಗಂಭೀರ ಪ್ರಕರಣದಲ್ಲಿ‌ 14ರಿಂದ 20 ವರ್ಷಗಳ ಕಾಲ ಶಿಕ್ಷೆ ವಿಧಿಸಬಹುದು. ಬಾಲ್ಯ ವಿವಾಹದಲ್ಲಿ 1 ಲಕ್ಷ ರೂ. ದಂಡ ಹಾಕಬಹುದು. ಜೊತೆಗೆ 2 ವರ್ಷ ಕಾರಾಗೃಹ ಶಿಕ್ಷೆಯನ್ನೂ ವಿಧಿಸಬಹುದಾಗಿದೆ. ಬಾಲ್ಯ ವಿವಾಹ ಹಾಗೂ ಪೋಕ್ಸೊ ಪ್ರಕರಣಕ್ಕೆ ಸಂಬಂಧಿಸಿದಂತೆ ನಮ್ಮಲ್ಲಿ ಮಕ್ಕಳ ಸಹಾಯವಾಣಿ 1098 ಇದೆ. ಮಕ್ಕಳ ಯಾವುದೇ ಸಮಸ್ಯೆಗಳಿದ್ದರೂ ಈ ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.‌ ಬಾಲ್ಯ ವಿವಾಹ ಪ್ರಕರಣಗಳಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಕ್ಕಳು ಮದುವೆಯಾದರೆ, ಗರ್ಭಿಣಿಯಾದರೆ ಸಹಜವಾಗಿ ಪೋಕ್ಸೊ ಪ್ರಕರಣವಾಗಿ ಮಾರ್ಪಡುತ್ತದೆ. ಬಾಲ್ಯ ವಿವಾಹ,‌ ಪೋಕ್ಸೊ ಪ್ರಕರಣಗಳು ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ'' ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ:ನನಗೂ ಅಂತರ್ಜಾತಿ ವಿವಾಹವಾಗುವ ಆಸೆ ಇತ್ತು, ಆದರೆ ಹುಡುಗಿಯೇ ಒಪ್ಪಲಿಲ್ಲ: ಸಿಎಂ ಸಿದ್ದರಾಮಯ್ಯ - CM Siddaramaiah

Last Updated : May 24, 2024, 3:22 PM IST

ABOUT THE AUTHOR

...view details