ಕರ್ನಾಟಕ

karnataka

ETV Bharat / state

ಮನೆಗಳ ಬೀಗ ಮುರಿದು ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿದ ಕಳ್ಳರು - Serial Burglary - SERIAL BURGLARY

ಹರಪನಹಳ್ಳಿ ಪಟ್ಟಣದಲ್ಲಿ ಮನೆಗಳ ಬೀಗ ಮುರಿದು ಸರಣಿ ಕಳ್ಳತನ ಮಾಡಿರುವ ಖದೀಮರು, ಮನೆಯಲ್ಲಿದ್ದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.

SERIAL BURGLARY
ಶ್ವಾನದಳ ತಂಡದಿಂದ ಪರಿಶೀಲನೆ (ETV Bharat)

By ETV Bharat Karnataka Team

Published : Aug 22, 2024, 1:38 PM IST

ರಪನಹಳ್ಳಿ ಪಟ್ಟಣ ಕೆಹೆಚ್​ಬಿ ಬಡಾವಣೆಯಲ್ಲಿ ಕಳ್ಳರ ಕೈಚಳಕ (ETV Bharat)

ದಾವಣಗೆರೆ: ಮೂರು ಮನೆಗಳ ಬೀಗ ಮುರಿದು ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣವನ್ನು ದೋಚಿರುವ ಘಟನೆ ದಾವಣಗೆರೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ವಿಜಯನಗರ ಜಿಲ್ಲೆಯ ಹರಪನಹಳ್ಳಿ ಪಟ್ಟಣ ಕೆಹೆಚ್​ಬಿ ಬಡಾವಣೆಯಲ್ಲಿ ನಡೆದಿದೆ‌. ಬಡಾವಣೆಯ ಉಪನ್ಯಾಸಕರಾದ ಬುಳ್ಳಪ್ಪ, ವಿರೇಶ ನಾಯಕ, ಯೋಧ ಅಡಿವೆಪ್ಪ ಎಂಬುವರ ಮನೆಗಳಲ್ಲಿ ಕಳ್ಳತನ ನಡೆದಿದ್ದು, ಕಳ್ಳರ ಕೈಚಳಕಕ್ಕೆ ಸ್ಥಳೀಯರು ಭಯಭೀತರಾಗಿದ್ದಾರೆ.

ಉಪನ್ಯಾಸಕ ಬುಳ್ಳಪ್ಪ ಮನೆಯಲ್ಲಿ ಒಟ್ಟು 14 ಲಕ್ಷ ಮೌಲ್ಯದ 20 ತೊಲೆ ಬಂಗಾರ, 15 ತೊಲೆ ಬೆಳ್ಳಿ ಆಭರಣಗಳು ಹಾಗೂ 8 ಸಾವಿರ ನಗದನ್ನು ಕಳ್ಳರು ಕದ್ದೊಯ್ದಿದ್ದಾರೆ. ಮತ್ತೋರ್ವ ಉಪನ್ಯಾಸಕ ವೀರೇಶ್ ನಾಯಕ ಬೇರೆ ಊರಿಗೆ ತೆರಳಿದ್ದರಿಂದ ಏನೆಲ್ಲ ಕಳ್ಳತನ ಆಗಿದೆ ಎಂಬುದು ಮಾಹಿತಿ ದೊರೆತಿಲ್ಲ. ಅಲ್ಲದೆ ಯೋಧ ಅಡಿವೆಪ್ಪ ಮನೆಯಲ್ಲಿ ಏನೂ ಸಿಗದೇ ಇರುವುದರಿಂದ ಕಳ್ಳರು ಬೀರುವಿನ ಡ್ರಾ ಕಿತ್ತು ಬಿಸಾಕಿ ಹೋಗಿದ್ದಾರೆ. ಘಟನಾ ಸ್ಥಳಕ್ಕೆ ಹೊಸಪೇಟೆ ಬೆರಳಚ್ಚು ತಜ್ಞರು, ಶ್ವಾನದಳ ತಂಡ ದೌಡಾಯಿಸಿದ್ದು, ಡಿವೈಎಸ್ಪಿ ವೆಂಕಟಪ್ಪ ನಾಯಕ ಮತ್ತವರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಈ ಸಂಬಂಧ ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳ್ಳರ ಕೈಚಳಕ (ETV Bharat)

ಒಳಚರಂಡಿ ಕಬ್ಬಿಣ ಗ್ರಿಲ್ ಕದ್ದ ಕಳ್ಳರು: ಸ್ಮಾರ್ಟ್ ಸಿಟಿ ವತಿಯಿಂದ ಒಳಚರಂಡಿಗೆ ಕೂರಿಸಿದ್ದ ಕಬ್ಬಿಣದ ಗ್ರಿಲ್ ಅನ್ನು ಕಳ್ಳರು ಕಳ್ಳತನ ಮಾಡಿದ್ದಾರೆ. ಇದರಿಂದ ಸ್ಮಾರ್ಟ್ ಸಿಟಿ ಲಿಮಿಟೆಡ್ ಹಾಗೂ ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ತಲೆಬಿಸಿಯಾಗಿ ಪರಿಣಮಿಸಿದೆ. ಕಳೆದ ದಿನ ಅಪರಿಚಿತ ಯುವಕರಿಬ್ಬರು ನಗರದ ಚೌಕಿಪೇಟೆ, ಬಿನ್ನಿ ಕಂಪನಿ, ಮಂಡಿಪೇಟೆ, ಎನ್ ಆರ್ ರಸ್ತೆಗಳಿಗೆ ಅಳವಡಿಸಿದ್ದ ಕಬ್ಬಿಣದ ಗ್ರಿಲ್​ಗಳನ್ನು ತಡರಾತ್ರಿ ಕಳ್ಳತನ ಮಾಡಿದ್ದಾರೆ. ಕಳ್ಳತನದ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ.

ಸಣ್ಣ ಒಳಚರಂಡಿಗೆ ಸರಾಗವಾಗಿ ನೀರು ಹೋಗಲು ಅಳವಡಿಸಿದ್ದ ಕಬ್ಬಿಣ ಗ್ರಿಲ್​ಗಳು ಕಳ್ಳತನವಾಗಿದ್ದರಿಂದ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ. ಗ್ರಿಲ್​ಗಳನ್ನು ಕಳ್ಳತನ ಮಾಡುತ್ತಿರುವ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಕಳ್ಳರನ್ನು ಹಿಡಿಯುವಂತೆ ಜನ ಮನವಿ ಮಾಡಿದ್ದಾರೆ. ಕಳ್ಳರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಪಾಲಿಕೆ ಆಯುಕ್ತರಿಗೆ, ಕಂಪನಿ ವತಿಯಿಂದ ಕಬ್ಬಿಣದ ಗ್ರಿಲ್​ಗಳನ್ನು ತಂದು ಕೂರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಥಳೀಯರು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಉಡುಪಿ: ಐಟಿ ಅಧಿಕಾರಿಗಳ ಸೋಗಿನಲ್ಲಿ ಮನೆಗೆ ನುಗ್ಗಿ ದರೋಡೆಗೆ ಯತ್ನಿಸಿದ್ದ ತಂಡ; ಇಬ್ಬರು ಆರೋಪಿಗಳ ಬಂಧನ - FAKE IT OFFICERS ARREST

ABOUT THE AUTHOR

...view details