ಕರ್ನಾಟಕ

karnataka

ETV Bharat / state

ಕುಣಿಗಲ್​ ಶಾಸಕ ರಂಗನಾಥ್​​ ಆಯ್ಕೆ ಅಸಿಂಧು ಕೋರಿ ಸುಪ್ರೀಂ​ಗೆ ಬಿಜೆಪಿ ಅರ್ಜಿ: ನೋಟಿಸ್​ ಜಾರಿ - Supreme Court notice to MLA - SUPREME COURT NOTICE TO MLA

ಕುಣಿಗಲ್​ ಕಾಂಗ್ರೆಸ್​​ ಶಾಸಕ ರಂಗನಾಥ್​ ಆಯ್ಕೆಯನ್ನು ರದ್ದು ಮಾಡಬೇಕು ಎಂದು ಕೋರಿ ಪರಾಜಿತ ಬಿಜೆಪಿ ಅಭ್ಯರ್ಥಿ ಕೃಷ್ಣಕುಮಾರ್​ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದಾರೆ.

ಕುಣಿಗಲ್​ ಶಾಸಕ ರಂಗನಾಥ್​​ ಆಯ್ಕೆ ಅಸಿಂಧು ಕೋರಿ ಸುಪ್ರೀಂ​ಗೆ ಬಿಜೆಪಿ ಅರ್ಜಿ
ಕುಣಿಗಲ್​ ಶಾಸಕ ರಂಗನಾಥ್​​ ಆಯ್ಕೆ ಅಸಿಂಧು ಕೋರಿ ಸುಪ್ರೀಂ​ಗೆ ಬಿಜೆಪಿ ಅರ್ಜಿ (ETV Bharat)

By ETV Bharat Karnataka Team

Published : Sep 3, 2024, 8:23 PM IST

ನವದೆಹಲಿ:ತುಮಕೂರಿನ ಕುಣಿಗಲ್​ ಕ್ಷೇತ್ರದ ಶಾಸಕ ಡಾ.ಎಚ್​​.ಡಿ.ರಂಗನಾಥ್​ ಅವರು 2023 ರಲ್ಲಿ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಅಕ್ರಮವಾಗಿ ಆಯ್ಕೆಯಾಗಿದ್ದಾರೆ ಎಂದು ಬಿಜೆಪಿಯ ಪರಾಜಿತ ಅಭ್ಯರ್ಥಿ ಡಿ.ಕೃಷ್ಣಕುಮಾರ್​ ಅವರು ಆರೋಪಿಸಿ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಸಂಬಂಧ ಪ್ರತಿಕ್ರಿಯಿಸಲು ಸೂಚಿಸಿ ಕಾಂಗ್ರೆಸ್​ ಶಾಸಕರಿಗೆ ನ್ಯಾಯಾಲಯ ಮಂಗಳವಾರ ನೋಟಿಸ್​​ ಜಾರಿ ಮಾಡಿದೆ.

ಈ ಹಿಂದೆ ರಂಗನಾಥ್​ ಅವರ ಆಯ್ಕೆಯನ್ನು ರದ್ದು ಮಾಡಬೇಕು ಎಂದು ಕೋರಿ ಬಿಜೆಪಿ ನಾಯಕ ಕೃಷ್ಣಕುಮಾರ್​ ಅವರು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಇದನ್ನು ಕೋರ್ಟ್​ ತಿರಸ್ಕರಿಸಿತ್ತು. ಇದರ ವಿರುದ್ಧ ಅವರು ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಇಂದು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸೂರ್ಯಕಾಂತ್​​ ಮತ್ತು ಉಜ್ಜಲ್​ ಭುಯಾನ್​ ಅವರಿದ್ದ ಪೀಠ ಕಾಂಗ್ರೆಸ್​ ಶಾಸಕರಿಗೆ ನೋಟಿಸ್​ ರವಾನಿಸಿದೆ.

ಪರಾಜಿತ ಅಭ್ಯರ್ಥಿ ಮಾಡಿರುವ ಆರೋಪಗಳ ಬಗ್ಗೆ ಸೆಪ್ಟೆಂಬರ್​ 23 ರೊಳಗೆ ಪ್ರತಿಕ್ರಿಯಿಸಿ. ಈ ಬಗ್ಗೆ ಯಾವುದಾದರೂ ತಕರಾರು ಮತ್ತು ದಾಖಲೆಗಳಿದ್ದರೆ ಕೋರ್ಟ್​ಗೆ ಸಲ್ಲಿಸಿ ಎಂದು ನೋಟಿಸ್​​ನಲ್ಲಿ ಸೂಚಿಸಲಾಗಿದೆ. ಮುಂದಿನ ವಿಚಾರಣೆಯನ್ನು ಎರಡು ವಾರಗಳ ನಂತರ ನಡೆಸಲಾಗುವುದು ಎಂದು ಪೀಠ ಹೇಳಿದೆ.

ಅರ್ಜಿಯ ಆರೋಪವೇನು?:ಕುಣಿಗಲ್​ ಶಾಸಕ ರಂಗನಾಥ್​ ಅವರು ಚುನಾವಣೆಯ ವೇಳೆ ಅಕ್ರಮ ಎಸಗಿದ್ದಾರೆ. ಅಡುಗೆ ಸಾಮಾನು, ಡಿನ್ನರ್​​ ಸೆಟ್​, ಪ್ರೀಪೇಯ್ಡ್​​ ಕಾರ್ಡ್​ಗಳನ್ನು ನೀಡಿ ಮತದಾರರಿಗೆ ಆಮಿಷವೊಡ್ಡಿದ್ದಾರೆ ಎಂದು ಆರೋಪಿಸಿ, ಅವರ ಆಯ್ಕೆಯನ್ನು ರದ್ದು ಮಾಡಬೇಕು ಎಂದು ಬಿಜೆಪಿ ಪರಾಜಿತ ಅಭ್ಯರ್ಥಿ ಕೃಷ್ಣಕುಮಾರ್​ ಅವರು ಮನವಿ ಮಾಡಿದ್ದಾರೆ. ಇದರ ಜೊತೆಗೆ ರಂಗನಾಥ್​ ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್​​ನಲ್ಲಿ ತಮ್ಮ ಆಸ್ತಿ ಮತ್ತು ಹೊಣೆಗಾರಿಗೆ ಬಗ್ಗೆಯೂ ಸುಳ್ಳು ಹೇಳಿದ್ದರೆ ಎಂದು ಅರ್ಜಿಯಲ್ಲಿ ದೂರಲಾಗಿದೆ.

ಹೈಕೋರ್ಟ್​ ನಿರಾಕರಿಸಿದ್ದೇಕೆ?:ಬಿಜೆಪಿಯ ಕೃಷ್ಣಕುಮಾರ್ ಅವರು ರಂಗನಾಥ್ ಅವರ ಶಾಸಕತ್ವ ರದ್ದು ಕೋರಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಇದನ್ನು ವಿಚಾರಣೆ ನಡೆಸಿದ್ದ ಕೋರ್ಟ್​ ಅರ್ಜಿಯನ್ನು ಜೂನ್​ 21 ರಂದು ತಿರಸ್ಕರಿಸಿತ್ತು. ಅರ್ಜಿದಾರರು ಮಾಡಿರುವ ಆರೋಪಗಳಲ್ಲಿ ವಾಸ್ತವಾಂಶಗಳ ಕೊರತೆ ಇದೆ. ಅಲ್ಲದೇ ವಿಚಾರಣೆಯ ವಿಷಯ ಅಥವಾ ಕ್ರಿಯೆಗೆ ನಿಖರ ಕಾರಣವಿಲ್ಲ. ಅರ್ಜಿದಾರರ ತಕರಾರುಗಳು ಮತ್ತು ಆರೋಪಗಳು ಊಹೆ ಇಲ್ಲವೇ, ಕಲ್ಪನೆಯನ್ನು ಆಧರಿಸಿವೆ. ಅವರ ಆಯ್ಕೆಯನ್ನು ಪ್ರಶ್ನಿಸಲು ಇಷ್ಟು ಸಾಲದು ಎಂದು ಅಭಿಪ್ರಾಯಪಟ್ಟಿತ್ತು.

ಇದನ್ನೂ ಓದಿ:ಆತುರದ ಹೇಳಿಕೆಗೆ ಬೆಲ್ಲದ್​ ಕ್ಷಮೆಯಾಚನೆ: ಪಶ್ಚಾತಾಪಕ್ಕಿಂತ ದೊಡ್ಡ ಪ್ರಾಯಶ್ಚಿತ ಬೇರೊಂದಿಲ್ಲ ಎಂದ ಸಿಎಂ - ARVIND BELLAD APOLOGY LETTER

ABOUT THE AUTHOR

...view details