ತುಮಕೂರು:ಒಂದೇ ದಿನ ರಾತ್ರಿ ಸುರಿದ ಭಾರೀ ಮಳೆಗೆ ಕೊರಟಗೆರೆ, ಮಧುಗಿರಿ ಭಾಗದಲ್ಲಿ ಹರಿಯುವ ಜಯಮಂಗಲಿ ನದಿ ಮೈತುಂಬಿ ಹರಿಯುತ್ತಿದೆ. ಇದರಿಂದ ಮಧುಗಿರಿ ತಾಲೂಕಿನ ವೀರೇನಹಳ್ಳಿ-ಕಾಳೇನಹಳ್ಳಿ ನಡುವಿನ ರಸ್ತೆ ಜಲಾವೃತಗೊಂಡಿದೆ. ತೋಟ-ಹೊಲಗಳು ನೀರಿನಿಂದ ತುಂಬಿದೆ. ರೈತರಲ್ಲಿ ಸಂತಸ ಮೂಡಿದೆ.
ತುಮಕೂರು: ರಾತ್ರಿ ಸುರಿದ ಭಾರೀ ಮಳೆಗೆ ತುಂಬಿ ಹರಿದ ಜಯಮಂಗಲಿ ನದಿ - River Jayamangali
ತುಮಕೂರಿನ ಜಯಮಂಗಲಿ ನದಿ ನಿನ್ನೆ ರಾತ್ರಿ ಸುರಿದ ಭಾರೀ ಮಳೆಯಿಂದ ಉಕ್ಕಿ ಹರಿಯುತ್ತಿದೆ.
ಜಯಮಂಗಲಿ ನದಿ (ETV Bharat)
Published : Aug 20, 2024, 1:47 PM IST
|Updated : Aug 20, 2024, 2:29 PM IST
ಇನ್ನು ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಹೋಬಳಿ ನಂದಿಹಳ್ಳಿಯಿಂದ ಗೊಲ್ಲರಹಟ್ಟಿಗೆ ಸಂಪರ್ಕಿಸುವ ರಸ್ತೆಯ ಸೇತುವೆ ಕುಸಿದಿದೆ. ಕೊರಟಗೆರೆ ತಾಲೂಕು ಕೇಂದ್ರ ರಸ್ತೆಯಲ್ಲಿ ಉಕ್ಕಿ ಹರಿದ ನೀರು ರಸ್ತೆಯ ಅಕ್ಕಪಕ್ಕದ ಅಂಗಡಿ ಮುಂಗಟ್ಟುಗಳಿಗೆ ನುಗ್ಗಿದೆ.
ಇದನ್ನೂ ಓದಿ:ಹಾವೇರಿ: ತುಂಬಿದ ನದಿಯಲ್ಲಿ ಸಿದ್ಧಾರೂಢ ಮತ್ತು ಮಲ್ಲಿಕಾರ್ಜುನಸ್ವಾಮಿಗೆ ತೆಪ್ಪೋತ್ಸವ - teppotsava
Last Updated : Aug 20, 2024, 2:29 PM IST