ಕರ್ನಾಟಕ

karnataka

ETV Bharat / state

ಸಿಎಂ ಸಿದ್ದರಾಮಯ್ಯ ಬೆಂಬಲಕ್ಕೆ ನಿಂತ ರಾಷ್ಟ್ರೀಯ ಅಹಿಂದ ಸಂಘಟನೆ: ಹುಬ್ಬಳ್ಳಿಯಿಂದ ಬೆಂಗಳೂರಿಗೆ ಜನಯಾತ್ರೆ - Ahinda Supports CM - AHINDA SUPPORTS CM

ಸಿಎಂ ಸಿದ್ದರಾಮಯ್ಯ ಅವರನ್ನು ಬೆಂಬಲಿಸಿ ರಾಷ್ಟ್ರೀಯ ಅಹಿಂದ ಸಂಘಟನೆ ಅ. 3 ಹಾಗೂ 4 ರಂದು ಹುಬ್ಬಳ್ಳಿಯಿಂದ ಬೆಂಗಳೂರಿಗೆ ಬೈಕ್​ಗಳ ಮೂಲಕ ಜನಯಾತ್ರೆ ಕೈಗೊಂಡಿದೆ.

President Muthappa Shivalli press conference
ಸಂಘಟನೆ ರಾಷ್ಟ್ರಾಧ್ಯಕ್ಷ ಮುತ್ತಪ್ಪ ಶಿವಳ್ಳಿ ಸುದ್ದಿಗೋಷ್ಠಿ (ETV Bharat)

By ETV Bharat Karnataka Team

Published : Sep 28, 2024, 5:08 PM IST

Updated : Sep 28, 2024, 5:39 PM IST

ಹಾವೇರಿ:ಮುಡಾ ಪ್ರಕರಣದಲ್ಲಿ ಎಫ್ಐಆರ್ ದಾಖಲಾಗಿರುವ ಸಿಎಂ ಸಿದ್ದರಾಮಯ್ಯ ಅವರ ಬೆಂಬಲಕ್ಕೆ ಇದೀಗ ರಾಷ್ಟ್ರೀಯ ಅಹಿಂದ ಸಂಘಟನೆ ಮುಂದಾಗಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆ ರಾಷ್ಟ್ರಾಧ್ಯಕ್ಷ ಮುತ್ತಪ್ಪ ಶಿವಳ್ಳಿ, "ಸಿದ್ದರಾಮಯ್ಯ ಅವರು ಪ್ರಾಮಾಣಿಕ ರಾಜಕಾರಣಿ. ಸಿದ್ದರಾಮಯ್ಯ ಅವರನ್ನು ಬೆಂಬಲಿಸಿ ಆಕ್ಟೋಬರ್ 3 ರಂದು ಹುಬ್ಬಳ್ಳಿಯಿಂದ ಬೆಂಗಳೂರುವರೆಗೆ ನೂರಾರು ಬೈಕ್‌ಗಳ ಮೂಲಕ ಬೆಂಗಳೂರುವರೆಗೂ ಜನಯಾತ್ರೆ ಕೈಗೊಳ್ಳಲಾಗಿದೆ. ಅ.4ರಂದು ವಿಧಾನಸೌಧದಲ್ಲಿ ಜನಯಾತ್ರೆ ಮುಕ್ತಾಯಗೊಳ್ಳಲಿದೆ" ಎಂದು ತಿಳಿಸಿದರು.

"3ರಂದು ಹುಬ್ಬಳ್ಳಿಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಜನಯಾತ್ರೆಗೆ ಚಾಲನೆ ನೀಡಲಾಗುವುದು. ನಂತರ ಶಿಗ್ಗಾಂವ್‌ಗೆ ಬಂದು ನಗರದಲ್ಲಿ ಅಂಬೇಡ್ಕರ್ ಮೂರ್ತಿ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಬಹಿರಂಗ ಸಮಾವೇಶ ನಡೆಸಲಾಗುವುದು. ನಂತರ ಹಾವೇರಿ ದಾವಣಗೆರೆಗೆ ಆಗಮಿಸುವ ಜನಯಾತ್ರೆ ಚಿತ್ರದುರ್ಗದಲ್ಲಿ ರಾತ್ರಿ ಉಳಿದುಕೊಳ್ಳಲಿದೆ. ಆದಾದ ನಂತರ 4ರಂದು ಚಿತ್ರದುರ್ಗದಿಂದ ಆರಂಭವಾಗುವ ಯಾತ್ರೆ ತುಮಕೂರು ನಂತರ ಬೆಂಗಳೂರು ತಲುಪಲಿದೆ. ಯಾತ್ರೆಯಲ್ಲಿ ಸಾವಿರಾರು ಜನ ಬೈಕ್‌ಗಳ ಮೂಲಕ ಪಾಲ್ಗೊಳ್ಳಲಿದ್ದಾರೆ. ಅಹಿಂದ ಸಮಾಜದ ವಿವಿಧ ಮುಖಂಡರು ಯಾತ್ರೆಗೆ ಸಾಥ್ ನೀಡಲಿದ್ದಾರೆ." ಎಂದು ಹೇಳಿದರು.

ಸಂಘಟನೆ ರಾಷ್ಟ್ರಾಧ್ಯಕ್ಷ ಮುತ್ತಪ್ಪ ಶಿವಳ್ಳಿ ಸುದ್ದಿಗೋಷ್ಠಿ (ETV Bharat)

ಕೇಂದ್ರ ಬಿಜೆಪಿ ವಿರುದ್ಧ ಹರಿಹಾಯ್ದ ಶಿವಳ್ಳಿ, "ಕೇಂದ್ರ ಬಿಜೆಪಿ ಸರ್ಕಾರ ರಾಜ್ಯಗಳಲ್ಲಿರುವ ಬಿಜೆಪಿಯೇತರ ಸರ್ಕಾರಗಳನ್ನು ಅಸ್ಥಿರಗೊಳಿಸಲು ಈ ರೀತಿ ಮಾಡುತ್ತಿದೆ. ದಿವಂಗತ ದೇವರಾಜ್ ಅರಸು ನಂತರ ರಾಜ್ಯ ಕಂಡ ಪ್ರಾಮಾಣಿಕ ಅಹಿಂದ ನಾಯಕ ಎಂದರೆ ಸಿದ್ದರಾಮಯ್ಯ. ಪ್ರಧಾನಿ ನರೇಂದ್ರ ಮೋದಿ ಸರಿಸಮಾನ ನಾಯಕರು ಯಾರಾದರೂ ಇದ್ದರೆ ಅದು ಸಿದ್ದರಾಮಯ್ಯ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ವಿರುದ್ಧ ಷಡ್ಯಂತ್ರ ನಡೆಸಲಾಗುತ್ತಿದೆ" ಎಂದು ಆರೋಪಿಸಿದರು.

ಇದನ್ನೂ ಓದಿ:ಬಿಜೆಪಿಯ ರಾಶಿ ರಾಶಿ ಭ್ರಷ್ಟರ ವಿರುದ್ಧ ಪ್ರಧಾನಿ ಮೋದಿ ಕ್ರಮ ಕೈಗೊಳ್ಳಲಿ: ಸಿಎಂ ಸಿದ್ದರಾಮಯ್ಯ‌ - cm siddaramaiah

Last Updated : Sep 28, 2024, 5:39 PM IST

ABOUT THE AUTHOR

...view details