ಕರ್ನಾಟಕ

karnataka

ETV Bharat / state

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಹುಲಿಕುಣಿತ ವೀಕ್ಷಿಸಿ ಖುಷಿಪಟ್ಟ ರಕ್ಷಿತಾ ಪ್ರೇಮ್ ದಂಪತಿ - Rakshita Prem Couple - RAKSHITA PREM COUPLE

ರಕ್ಷಿತಾ, ಪ್ರೇಮ್ ದಂಪತಿ ಗುರುವಾರ ಕುಕ್ಕೆ ಸುಬ್ರಹ್ಮಣ್ಯ ದೇವಳಕ್ಕೆ ಭೇಟಿ ನೀಡಿದ್ದರು.

Rakshita Prem visits Subrahmanya
ಹುಲಿಕುಣಿತ ವೀಕ್ಷಿಸಿದ ರಕ್ಷಿತಾ ಪ್ರೇಮ್ ದಂಪತಿ (ETV Bharat)

By ETV Bharat Entertainment Team

Published : Oct 4, 2024, 7:12 PM IST

ಸುಬ್ರಹ್ಮಣ್ಯ(ದಕ್ಷಿಣ ಕನ್ನಡ):ಕನ್ನಡ ಚಿತ್ರರಂಗದ ಜನಪ್ರಿಯ ತಾರಾ ದಂಪತಿ ಪ್ರೇಮ್ ಹಾಗೂ ರಕ್ಷಿತಾ ಪ್ರೇಮ್ ಅವರು ಗುರುವಾರ ಕುಕ್ಕೆ ಸುಬ್ರಹ್ಮಣ್ಯ ದೇವಳಕ್ಕೆ ಭೇಟಿ ನೀಡಿದ್ದಾರೆ. ದೇವರ ದರ್ಶನ ಪಡೆದು, ಪ್ರಾರ್ಥನೆ ಸಲ್ಲಿಸಿ, ಪ್ರಸಾದ ಸ್ವೀಕರಿಸಿದರು.

ಪೂಜೆಯ ನಂತರ ಹೊರಡುವ ಸಂದರ್ಭದಲ್ಲಿ ಹುಲಿ ವೇಷಧಾರಿಗಳನ್ನು ಕಂಡು ಕಾರಿನಿಂದಿಳಿದರು. ನವರಾತ್ರಿಯ ವಿಶೇಷ ದಿನದಂದು ಕರಾವಳಿಯಲ್ಲಿ ಪ್ರಸಿದ್ದಿ ಪಡೆದಿರುವ ಹುಲಿ ವೇಷಧಾರಿಗಳು ದೇವಸ್ಥಾನದ ಬಳಿ ಇದ್ದರು. ತಕ್ಷಣ ಸುಬ್ರಹ್ಮಣ್ಯದ ಖ್ಯಾತ ಫೋಟೋಗ್ರಾಫರ್ ಸಂತೋಷ್ ನೂಚಿಲ ಅವರು ರಕ್ಷಿತಾ ಪ್ರೇಮ್ ದಂಪತಿಗೆ ಹುಲಿ ಕುಣಿತವನ್ನು ವೀಕ್ಷಿಸಲು ವ್ಯವಸ್ಥೆ ಮಾಡಿದರು. ಹುಲಿ ವೇಷಧಾರಿಗಳ ನರ್ತನ ಕಂಡು ರಕ್ಷಿತಾ ಪ್ರೇಮ್ ದಂಪತಿ ಬಹಳ ಹರ್ಷ ವ್ಯಕ್ತಪಡಿಸಿದರು. ಈ ಬಗ್ಗೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿ, ಎಲ್ಲ ಹುಲಿ ವೇಷಧಾರಿಗಳಿಗೂ ಶುಭಾಶಯ ಕೋರಿದರು.

ಹುಲಿಕುಣಿತ ವೀಕ್ಷಿಸಿದ ರಕ್ಷಿತಾ ಪ್ರೇಮ್ ದಂಪತಿ (ETV Bharat)

ಇದನ್ನೂ ಓದಿ:ಸೆಟ್ಟೇರಿತು ದಳಪತಿ ವಿಜಯ್​​​ ನಟನೆಯ 'ದಳಪತಿ 69': 'ಕೆವಿಎನ್'​​ ಕಾರ್ಯಕ್ರಮದ ಫೋಟೋಗಳು - Thalapathy 69 Pooja Ceremony

ABOUT THE AUTHOR

...view details