ಕರ್ನಾಟಕ

karnataka

ETV Bharat / state

ಕೋಲಾರ ಜಿಲ್ಲಾ ಕಾಂಗ್ರೆಸ್​​ನಲ್ಲಿ ಮುಂದುವರೆದ ಗೊಂದಲ: ಪುಟ್ಟು ಆಂಜಿನಪ್ಪ ಕಾಂಗ್ರೆಸ್ ಸೇರ್ಪಡೆಗೆ ವಿರೋಧ - Kolar Congress

ಪುಟ್ಟು ಆಂಜಿನಪ್ಪ ಕಾಂಗ್ರೆಸ್ ಸೇರ್ಪಡೆಗೆ ರಾಜುಗೌಡ ಮತ್ತು ಬೆಂಬಲಿಗರು ವಿರೋಧ ವ್ಯಕ್ತಪಡಿಸಿದ್ದಾರೆ.

Etv Bharatraju-gowda-supporters-opposed-to-puttu-anjinappa-joining-congress
ಕೋಲಾರ ಜಿಲ್ಲಾ ಕಾಂಗ್ರೆಸ್​​ನಲ್ಲಿ ಮುಂದುವರೆದ ಗೊಂದಲ - ಪುಟ್ಟು ಆಂಜಿನಪ್ಪ ಕಾಂಗ್ರೆಸ್ ಸೇರ್ಪಡೆಗೆ ವಿರೋಧ

By ETV Bharat Karnataka Team

Published : Apr 1, 2024, 10:58 PM IST

Updated : Apr 1, 2024, 11:04 PM IST

ಕೋಲಾರ ಜಿಲ್ಲಾ ಕಾಂಗ್ರೆಸ್​​ನಲ್ಲಿ ಮುಂದುವರೆದ ಗೊಂದಲ: ಪುಟ್ಟು ಆಂಜಿನಪ್ಪ ಕಾಂಗ್ರೆಸ್ ಸೇರ್ಪಡೆಗೆ ವಿರೋಧ

ಕೋಲಾರ: ಜಿಲ್ಲಾ ಕಾಂಗ್ರೆಸ್​ನಲ್ಲಿ ಮತ್ತೆ ಗೊಂದಲ ಮುಂದುವರೆದಿದೆ. ಕಾಂಗ್ರೆಸ್​ ಅಭ್ಯರ್ಥಿ ಕೆ.ವಿ.ಗೌತಮ್​ ಪ್ರಚಾರ ಆರಂಭಿಸಿದ ಕೆಲವೇ ಕ್ಷಣಗಳಲ್ಲಿ ಪಕ್ಷದ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿದೆ.

ಇಂದು ಅಭ್ಯರ್ಥಿ ಕೆ.ವಿ.ಗೌತಮ್​, ಕೋಲಾರ ಉಸ್ತುವಾರಿ ಸಚಿವ ಬೈರತಿ ಸುರೇಶ್​, ಚಿಕ್ಕಬಳ್ಳಾಪುರ ಉಸ್ತುವಾರಿ ಸಚಿವ ಸುಧಾಕರ್ ಸೇರಿದಂತೆ ಜಿಲ್ಲೆಯ ಶಾಸಕರು ಮೂಡಣ ಬಾಗಿಲಿನ ಕುರುಡುಮಲೆ ವಿನಾಯಕನಿಗೆ ಪೂಜೆ ಸಲ್ಲಿಸಿ ಪ್ರಚಾರ ಕಾರ್ಯ ಆರಂಭಿಸಿದರು. ಅವರು ದೇವಾಲಯದಿಂದ ಹೊರಗೆ ಬರುತ್ತಿದ್ದಂತೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್​ನ ಎರಡು ಗುಂಪುಗಳ ನಡುವೆ ವಾಗ್ವಾದ ನಡೆಯಿತು.

ಕಳೆದ ವಿಧಾನಸಭಾ ಚುಣಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪುಟ್ಟು ಆಂಜಿನಪ್ಪ ಕಾಂಗ್ರೆಸ್ ಸೇರ್ಪಡೆಗೆ ಕಾಂಗ್ರೆಸ್​ನ ಪರಾಜಿತ ಅಭ್ಯರ್ಥಿ ರಾಜುಗೌಡ ಹಾಗೂ ಅವರ ಬೆಂಬಲಿಗರು ವಿರೋಧ ವ್ಯಕ್ತಪಡಿಸಿದ್ದಾರೆ. ಶಿಡ್ಲಘಟ್ಟದ ಲೋಕಸಭಾ ಚುನಾವಣೆಯ ಉಸ್ತುವಾರಿಯನ್ನು ರಾಜುಗೌಡರಿಗೆ ನೀಡುವಂತೆ ಅವರ ಬೆಂಬಲಿಗರು ಒತ್ತಾಯ ಮಾಡಿದ್ದಾರೆ. ಕೆ.ಹೆಚ್.ಮುನಿಯಪ್ಪ ಬಣದಲ್ಲಿ ಗುರುತಿಸಿಕೊಂಡಿರುವ ರಾಜುಗೌಡ ಅವರಿಗೆ ವಿರುದ್ಧವಾಗಿ ಸಚಿವ ಎಂ.ಸಿ.ಸುಧಾಕರ್,​ ಪುಟ್ಟು ಆಂಜಿನಪ್ಪ ಅವರನ್ನು ಕರೆತರಲು ಪ್ಲ್ಯಾನ್​ ಮಾಡುತ್ತಿದ್ದಾರೆ ಎಂದು ತಿಳಿದ ರಾಜುಗೌಡ ಬೆಂಬಲಿಗರು ಸಚಿವರ ಎದುರಲ್ಲೇ ಗಲಾಟೆ ಮಾಡಿ, ಅವರನ್ನು ಕಾಂಗ್ರೆಸ್​ಗೆ ಕರೆತರುವುದು ಬೇಡ ಎಂದು ಆಗ್ರಹಿಸಿದ್ದಾರೆ.

ಈ ವೇಳೆ ಸಚಿವ ಬೈರತಿ ಸುರೇಶ್​ ಹಾಗೂ ಸುಧಾಕರ್​ ಈ ಬಗ್ಗೆ ಪಕ್ಷದ ಹಿರಿಯರೊಡನೆ ಮಾತನಾಡಿ ತೀರ್ಮಾನಿಸುವುದಾಗಿ ಭರವಸೆ ನೀಡಿದ ನಂತರ ರಾಜುಗೌಡ ಬೆಂಬಲಿಗರು ಸಮಾಧಾನಗೊಂಡಿದ್ದಾರೆ.

ಇದನ್ನೂ ಓದಿ:ನಾನು ಸಿಎಂ ಆಗಿರಬೇಕೆಂದರೆ ಸುನೀಲ್ ಬೋಸ್ ಗೆಲ್ಲಿಸಿ: ಸಿಎಂ ಸಿದ್ದರಾಮಯ್ಯ - CM Siddaramaiah

Last Updated : Apr 1, 2024, 11:04 PM IST

ABOUT THE AUTHOR

...view details