ರಾಯಚೂರು: ಮಲಿಯಬಾದ್ ಗ್ರಾಮ ಹಾಗೂ ಸುತ್ತಮುತ್ತಲಿನ ಜನರಲ್ಲಿ ಆತಂಕ ಮೂಡಿಸಿದ್ದ ಚಿರತೆ, ಅರಣ್ಯ ಇಲಾಖೆ ಇರಿಸಿದ್ದ ಬೋನ್‌ನಲ್ಲಿ ಇಂದು ಸೆರೆಯಾಗಿದೆ.
ಮಲಿಯಬಾದ್ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಪ್ರತ್ಯಕ್ಷವಾಗಿದ್ದ ಚಿರತೆ, ಹಸುಗಳು, ಕುರಿಗಳ ಮೇಲೆ ದಾಳಿ ನಡೆಸಿ ತಿಂದು ಹಾಕಿತ್ತು. ಅಲ್ಲದೇ ಹತ್ತಿರದಲ್ಲಿದ್ದ ಗೋ ಶಾಲೆಯಲ್ಲಿನ ಹಸುಗಳ ಮೇಲೂ ದಾಳಿ ನಡೆಸಿತ್ತು.
ಮಲಿಯಬಾದ್ ಗುಡ್ಡದಲ್ಲಿ ಚಿರತೆ ವಾಸವಾಗಿದ್ದರಿಂದ ಗುಡ್ಡದ ಸುತ್ತಮುತ್ತಲಲ್ಲಿ ಜನರು ಕೃಷಿ ಚಟುವಟಿಕೆಗಳಲ್ಲಿ ತೊಡಗುವುದು ಮತ್ತು ದನಕರುಗಳನ್ನು ಮೇಯಿಸಲು ಕರೆದುಕೊಂಡು ಹೋಗುವುದೇ ದೊಡ್ಡ ಸಮಸ್ಯೆಯಾಗಿತ್ತು. ಈ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡ ನಂತರ ಪರಿಶೀಲನೆ ನಡೆಸಿ, ಸಿಸಿ ಕ್ಯಾಮೆರಾಗಳು, ಡ್ರೋನ್ ಸಹಾಯದ ಮೂಲಕ ಚಿರತೆ ಓಡಾಟವನ್ನು ಪರಿಶೀಲನೆ ನಡೆಸಿ ಹಲವು ಕಡೆಗಳಲ್ಲಿ ಬೋನ್ಗಳನ್ನು ಅಳವಡಿಸಲಾಗಿತ್ತು.