ರಾಯಚೂರು:ಜಿಲ್ಲೆಯ ಗಂಜಳ್ಳಿ ಗ್ರಾಮದಲ್ಲಿ ಕೃಷ್ಣ ನದಿಯಲ್ಲಿ ಕುರಿಗೆ ನೀರು ಕುಡಿಸಲು ಹೋದ ಬಾಲಕ ನಾಪತ್ತೆಯಾಗಿದ್ದಾನೆ. ಈ ಹಿನ್ನೆಲೆಯಲ್ಲಿ ಬಾಲಕನನ್ನು ಮೊಸಳೆ ಹೊತ್ತೊಯ್ದಿರುವ ಶಂಕೆ ವ್ಯಕ್ತವಾಗಿದೆ. ವಿಶ್ವ (11) ಎಂಬ ಬಾಲಕನ ಶೋಧ ಕಾರ್ಯ ನಡೆದಿದೆ. ವಿಷಯ ತಿಳಿದು ಸ್ಥಳಕ್ಕೆ ರಾಯಚೂರು ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿದ್ದಾರೆ.
ರಾಯಚೂರು: ಕುರಿಗೆ ನೀರು ಕುಡಿಸಲು ನದಿಗೆ ತೆರಳಿದ್ದ ಬಾಲಕ ನಾಪತ್ತೆ, ಮೊಸಳೆ ಹೊತ್ತೊಯ್ದಿರುವ ಶಂಕೆ - Crocodile drags away a boy - CROCODILE DRAGS AWAY A BOY
ನದಿಗೆ ತೆರಳಿದ್ದ ಬಾಲಕನನ್ನು ಮೊಸಳೆ ಹೊತ್ತೊಯ್ದಿರುವ ಶಂಕೆ ರಾಯಚೂರು ಜಿಲ್ಲೆಯ ಗಂಜಳ್ಳಿ ಗ್ರಾಮದಲ್ಲಿ ವ್ಯಕ್ತವಾಗಿದೆ.
ಬಾಲಕನಿಗಾಗಿ ಶೋಧ (ETV Bharat)
Published : May 24, 2024, 7:53 PM IST
ಗ್ರಾಮಸ್ಥರು ಮತ್ತು ಅಗ್ನಿಶಾಮಕ ಸಿಬ್ಬಂದಿ, ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು ನದಿಯಲ್ಲಿ ಮತ್ತು ಸುತ್ತಮುತ್ತ 4 ಗಂಟೆಗಳಿಂದ ಶೋಧ ಕಾರ್ಯ ನಡೆಸಿದ್ದು, ಈ ವರೆಗೆ ಬಾಲಕನ ಸುಳಿವು ಸಿಕ್ಕಿಲ್ಲ. ರಾಯಚೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
ಇದನ್ನೂ ಓದಿ:ಭೀಕರ ರಸ್ತೆ ಅಪಘಾತ: ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಸಾವು - Horrific Road Accident