ಕರ್ನಾಟಕ

karnataka

ETV Bharat / state

ಅಂಜಲಿ ಹತ್ಯೆಗೆ ಖಂಡನೆ: ಹುಬ್ಬಳ್ಳಿಯ ಚೆನ್ನಮ್ಮ ಸರ್ಕಲ್​ನಲ್ಲಿ ಪ್ರತಿಭಟನೆ - Protest in Hubballi - PROTEST IN HUBBALLI

ಅಂಜಲಿ ಹತ್ಯೆ ಖಂಡಿಸಿ ಹುಬ್ಬಳ್ಳಿಯ ಚೆನ್ನಮ್ಮ ಸರ್ಕಲ್​ನಲ್ಲಿ ನೇಹಾ ತಂದೆ ನಿರಂಜನ ಹಿರೇಮಠ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಅಂಜಲಿ ಹತ್ಯೆಗೆ ಖಂಡಿನೆ: ಹುಬ್ಬಳ್ಳಿಯ ಚೆನ್ನಮ್ಮ ಸರ್ಕಲ್​ನಲ್ಲಿ ಪ್ರತಿಭಟನೆ
ಅಂಜಲಿ ಹತ್ಯೆಗೆ ಖಂಡಿನೆ: ಹುಬ್ಬಳ್ಳಿಯ ಚೆನ್ನಮ್ಮ ಸರ್ಕಲ್​ನಲ್ಲಿ ಪ್ರತಿಭಟನೆ (ETV Bharat)

By ETV Bharat Karnataka Team

Published : May 15, 2024, 7:47 PM IST

Updated : May 15, 2024, 8:24 PM IST

ಹುಬ್ಬಳ್ಳಿಯ ಚೆನ್ನಮ್ಮ ಸರ್ಕಲ್​ನಲ್ಲಿ ಪ್ರತಿಭಟನೆ (ETV Bharat)

ಹುಬ್ಬಳ್ಳಿ:ಅಂಜಲಿ ಹತ್ಯೆ ಖಂಡಿಸಿ ನೇಹಾ ತಂದೆ ನಿರಂಜನ ಹಿರೇಮಠ ನೇತೃತ್ವದಲ್ಲಿ ಹುಬ್ಬಳ್ಳಿಯ ಚೆನ್ನಮ್ಮ ಸರ್ಕಲ್​ನಲ್ಲಿ ಪ್ರತಿಭಟನೆ ನಡೆಸಲಾಯಿತು. ಶವಾಗಾರದಿಂದ ವೀರಾಪುರ ಓಣಿಗೆ ಮೃತದೇಹ ಸಾಗಿಸುತ್ತಿದ್ದ ಆಂಬ್ಯುಲೆನ್ಸ್​ ತಡೆದ ಪ್ರತಿಭಟನಾಕಾರರು, ಕೂಡಲೇ ಆರೋಪಿ ಬಂಧಿಸಿ, ಗಲ್ಲು ಶಿಕ್ಷೆಗೆ ಗುರಿ ಪಡಿಸಬೇಕು ಎಂದು ಆಗ್ರಹಿಸಿದರು.

ಅಂಜಲಿ ಕುಟುಂಬಸ್ಥರು ಮೃತದೇಹವನ್ನು ಮನೆ ಕೊಂಡೊಯ್ದಿದ್ದು, ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸ್​ ಬಿಗಿ ಬಂದೋಬಸ್ತ್​​ ವ್ಯವಸ್ಥೆ ಮಾಡಲಾಗಿದೆ.

ನಿರಂಜನ ಹಿರೇಮಠ ಮಾತನಾಡಿ, ಇಂದು ಹಾಡಹಾಗಲೇ ನಮ್ಮ ವಾರ್ಡ್​​ನಲ್ಲಿ ಯುವತಿಯ ಕೊಲೆಯಾಗಿದೆ. ನನ್ನ ಮಗಳ ಹತ್ಯೆ ಆದಗಲೇ ಎಚ್ಚೆತ್ತುಕೊಳ್ಳಿ ಎಂದು ಹೇಳಿದ್ದೆ. ಆದರೆ, ಪೊಲೀಸ್​ ಇಲಾಖೆ ಜವಾಬ್ದಾರಿ ತೆಗೆದುಕೊಳ್ಳಲಿಲ್ಲ. ಮುಖ್ಯಮಂತ್ರಿಗಳು ನಿಮಗೆ ನ್ಯಾಯ ಕೊಡಿಸುತ್ತೇವೆ ಎಂದು ಹೇಳಿ ಹೋದರು. ಆದರೆ, ಗೃಹ ಇಲಾಖೆ ಇಲ್ಲಿವರೆಗೂ ಒಂದು ಫೋನ್​ ಮಾಡಿಲ್ಲ. ಗೃಹ ಸಚಿವರು ಇದುವರೆಗೂ ನನ್ನ ಮನೆಗೆ ಬಂದಿಲ್ಲ, ಈ ಕೇಸ್​ ಹೇಗೆ ಬಂದಿತ್ತೋ ಹಾಗೆ ಮುಚ್ಚಿ ಹಾಕಿ ಬಿಟ್ಟರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾನು ಈಗಾಗಲೇ ಇಲ್ಲಿನ ಪೊಲೀಸ್​ ಆಯುಕ್ತರನ್ನು ವರ್ಗಾವಣೆ ಮಾಡಬೇಕು ಎಂದು ಗೃಹ ಸಚಿವರಿಗೆ ಮನವಿ ಮಾಡಿದ್ದೆ. ಆದರೂ ಕೇಳಲಿಲ್ಲ. ಈ ಘಟನೆಗೆ ಗೃಹ ಇಲಾಖೆ ಮತ್ತು ಪೊಲೀಸರ ನಿರ್ಲಕ್ಷ್ಯವೇ ಕಾರಣ. ಅಂಜಲಿ ಕೊಲೆಗೈದ ಆರೋಪಿ ಇನ್ನು ಸಿಕಿಲ್ಲ, ಆತನನ್ನು ಎನ್​ಕೌಂಟರ್​ ಮಾಡಬೇಕು. ಈಗಲಾದರೂ ಸರ್ಕಾರ ಉನ್ನತ ಮಟ್ಟದ ಸಭೆ ಸಡೆಸಿ, ಇಲ್ಲಿಯ ಪೊಲೀಸ್​​ ಆಯುಕ್ತರನ್ನು ವರ್ಗಾವಣೆ ಮಾಡಿ, ಗೃಹ ಸಚಿವರನ್ನು ಬದಲಾವಣೆ ಮಾಡಬೇಕು ಎಂದು ಆಗ್ರಹಿಸಿದರು.

ಮತ್ತೊಬ್ಬ ಯುವತಿ ಹತ್ಯೆಗೆ ಸರ್ಕಾರದ ಸಡಿಲ ನೀತಿಯೇ ಕಾರಣ - ಪ್ರಲ್ಹಾದ್​ ಜೋಶಿ: ಮತ್ತೊಂದೆಡೆ, ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಮಾತನಾಡಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬುದಕ್ಕೆ ಹುಬ್ಬಳ್ಳಿಯಲ್ಲಿ ನಡೆದ ಮತ್ತೊಂದು ಯುವತಿ ಹತ್ಯೆಯೇ ನಿದರ್ಶನ. ಯುವತಿ ಪ್ರೀತಿ ನಿರಾಕರಿಸಿದಳು ಎಂಬ ಕಾರಣಕ್ಕೆ ಯುವಕನೊಬ್ಬ ಆಕೆಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಸರ್ಕಾರದ ಸಡಿಲ ನಿಲುವುಗಳೇ ಇದಕ್ಕೆಲ್ಲ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ನೇಹಾ ಹತ್ಯೆ ನಡೆದು ಬಹಳ ದಿನಗಳು ಕಳೆದಿಲ್ಲ. ಮತ್ತೊಂದು ಇಂತಹ ಪ್ರಕರಣ ನಡೆದಿದೆ. ಇದರಲ್ಲಿ ಪೊಲೀಸ್ ಹಾಗೂ ಸರ್ಕಾರದ ವೈಫಲ್ಯ ಎದ್ದು ಕಾಣುತ್ತದೆ. ಗೃಹ ಇಲಾಖೆ ಕೇವಲ ವರ್ಗಾವಣೆ ವಿಚಾರದಲ್ಲಿ ಬ್ಯುಸಿಯಾಗಿದೆ. ಇಂತಹ ಘಟನೆಗಳತ್ತ ಸರ್ಕಾರ ಗಮನ ಹರಿಸುತ್ತಿಲ್ಲ. ನೇರವಾಗಿ ಈ ಹತ್ಯೆಗೆ ಸರ್ಕಾರದ ವೈಫಲ್ಯವೇ ಕಾರಣ ಎಂದು ದೂರಿದರು.

ಇದನ್ನೂ ಓದಿ:ನೇಹಾ ಹಿರೇಮಠ ಕೊಲೆ ಪ್ರಕರಣದ ತನಿಖೆ ತೀವ್ರ: ಸಿಐಡಿಯಿಂದ ಮತ್ತಿಬ್ಬರ ವಿಚಾರಣೆ - Neha Hiremath Murder Case

Last Updated : May 15, 2024, 8:24 PM IST

ABOUT THE AUTHOR

...view details