ರಾಯಚೂರು: ಖಾಸಗಿ ಬಸ್ ಕುರಿಗಳಿಗೆ ಡಿಕ್ಕಿ ಹೊಡೆದ ಪರಿಣಾಮ 150 ಕುರಿಗಳು ಮೃತಪಟ್ಟಿದ್ದು, 18 ಕುರಿಗಳು ಗಾಯಗೊಂಡಿರುವ ಘಟನೆ ನಗರದ ಹೊರವಲಯದ ಯರಮರಸ್ ಬೈಪಾಸ್ ರಸ್ತೆಯ ರೈಲ್ವೆ ಬ್ರಿಡ್ಜ್ ಹತ್ತಿರ ಇಂದು ಬೆಳಗಿನ ಜಾವ ನಡೆದಿದೆ.
ರಾಯಚೂರು: ಕುರಿಗಳ ಮೇಲೆ ಹರಿದ ಖಾಸಗಿ ಬಸ್ - 150 ಕುರಿಗಳು ಸಾವು - Private Bus hit Sheep - PRIVATE BUS HIT SHEEP
ಬಸ್ ಹರಿದ ಪರಿಣಾಮ 150 ಕುರಿಗಳು ಸಾವನ್ನಪ್ಪಿದ್ದು, ಒಂದು ಕುರಿಗೆ 15 ಸಾವಿರದಂತೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ರೈತ ಮಲ್ಲೇಶ ತಿಳಿಸಿದ್ದಾರೆ.
Published : Sep 20, 2024, 3:17 PM IST
|Updated : Sep 20, 2024, 4:24 PM IST
ತೆಲಂಗಾಣದ ಓಬಳ್ಳಾಪುರ ಗ್ರಾಮದ ಮಲ್ಲೇಶ ಅವರಿಗೆ ಸೇರಿದ ಕುರಿಗಳಿವಾಗಿವೆ. ಇಂದು ಬೆಳಗಿನ ಜಾವ 450 ಕುರಿಗಳ ಹಿಂಡು ಹೋಗುವಾಗ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ. ಒಂದು ಕುರಿ ಅಂದಾಜು 15 ಸಾವಿರ ರೂಪಾಯಿ ಬೆಲೆ ಬಾಳುತ್ತದೆ ಎಂದು ಆಂದಾಜಿಸಲಾಗಿದ್ದು, ರೈತನಿಗೆ ಲಕ್ಷಾಂತರ ರೂಪಾಯಿ ಹಾನಿ ಉಂಟಾಗಿದೆ. ಘಟನೆಯಿಂದ ರಸ್ತೆಯಲ್ಲಿ ಕುರಿಗಳು ಚೆಲ್ಲಾಪಿಲ್ಲಿಯಾಗಿದ್ದವು. ಘಟನಾ ಸ್ಥಳಕ್ಕೆ ರಾಯಚೂರು ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ರಾಯಚೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
ಇದನ್ನೂ ಓದಿ:ಮಹಾರಾಷ್ಟ್ರದ ಜಾಲ್ನಾದಲ್ಲಿ ಬಸ್-ಟ್ರಕ್ ಅಪಘಾತ: 8 ಸಾವು, 16 ಮಂದಿಗೆ ಗಾಯ - Maharashtra Bus Accident