ETV Bharat / state

ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡದೇ ಮುಂದುವರೆಯುತ್ತಿರುವುದು ಅಧರ್ಮ : ಪ್ರಲ್ಹಾದ್‌ ಜೋಶಿ - MUDA CASE

ಹೈಕೋರ್ಟ್‌ ಸಿದ್ದರಾಮಯ್ಯ ಅವರ ವಿರುದ್ಧ ಟಿಪ್ಪಣಿ ಮಾಡಿದ್ದು, ಸಿಎಂ ಆಗಿ ಮುಂದುವರೆಯುತ್ತಿರುವುದು ಅಧರ್ಮ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಹೇಳಿದರು.

PRALHAD JOSHI SLAMS CM
ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ (ETV Bharat)
author img

By ETV Bharat Karnataka Team

Published : Jan 27, 2025, 12:29 PM IST

Updated : Jan 27, 2025, 12:39 PM IST

ಮೈಸೂರು: ಸಿದ್ದರಾಮಯ್ಯ ವಿರುದ್ಧ ಹೈಕೋರ್ಟ್‌ ವ್ಯಾಖ್ಯಾನ ಮಾಡಿದರೂ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡದೇ ಮುಂದುವರೆಯುತ್ತಿರುವುದು ಅಧರ್ಮ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಹೇಳಿದರು.

ಮುಡಾ ಸೈಟ್‌ ಹಂಚಿಕೆ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಷಿಕ್ಯೂಷನ್​ಗೆ ಅನುಮತಿ ನೀಡಿ ಆದೇಶ ಹೊರಡಿಸಿದ್ದು, ರಾಜ್ಯಪಾಲರ ಆದೇಶದ ವಿರುದ್ಧ ಸಿಎಂ ಹೈಕೋರ್ಟ್‌ ಮೊರೆ ಹೋಗಿದ್ದಾರೆ. ನ್ಯಾಯಾಲಯವೂ ಸಿದ್ದರಾಮಯ್ಯ ವಿರುದ್ಧ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದು, ಈ ಟಿಪ್ಪಣಿಯನ್ನು ಯಾವ ಕೋರ್ಟ್‌ ತೆಗೆದುಹಾಕಿಲ್ಲ. ಹೈಕೋರ್ಟ್‌ ಕಮೆಂಟ್‌ ಮಾಡಿದ ನಂತರವೂ ಅವರು ಸಿಎಂ ಸ್ಥಾನದಲ್ಲಿ ಮುಂದುವರೆಯುತ್ತಿರುವುದೇ ಅಧರ್ಮ ಎಂದು ಟೀಕಿಸಿದರು.

ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ (ETV Bharat)

ಪೊಲೀಸ್ ಕುಮ್ಮಕ್ಕು ವಿರುದ್ಧ ಕ್ರಮ ಕೈಗೊಳ್ಳಿ : ಮೈಕ್ರೋ ಫೈನಾನ್ಸ್ ಮರುಪಾವತಿ ವಿಚಾರದಲ್ಲಿ ಕಂಪನಿಯ ಏಜೆಂಟರು ಕಾನೂನು ಕೈಗೆ ತೆಗೆದುಕೊಳ್ಳುತ್ತಿದ್ದಾರೆ. ಇದಕ್ಕೆ ಉನ್ನತ ಮಟ್ಟದ ಪೊಲೀಸ್​ ಅಧಿಕಾರಿಗಳನ್ನು ನೇಮಿಸಿ, ಪರಿಶೀಲನೆ ಮಾಡಬೇಕು. ಮೈಕ್ರೋ ಫೈನಾನ್ಸ್ ಆರ್​ಬಿಐ ಗೈಡ್​ಲೈನ್ಸ್​ಗೆ ಒಳಪಡುತ್ತದೆ. ಯಾವ ಕಂಪನಿಗಳು ಆರ್​ಬಿಐ ನೀತಿಗೆ ಒಳಪಡಲ್ಲವೋ ಅಂತ ಕಂಪನಿಗಳ ಬಗ್ಗೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು‌. ಗೈಡ್​ಲೈನ್ಸ್​ ನಿಯಮ ಪಾಲಿಸಿಲ್ಲ ಅನ್ನೋ ಕಂಪನಿಗಳ ಬಗ್ಗೆ ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ಪೊಲೀಸರ ಆಶ್ರಯವನ್ನು ಪಡೆದೇ ಕಿರುಕುಳ ನೀಡುತ್ತಿದ್ದಾರೆ ಎನ್ನುವ ಆರೋಪ ಇದ್ದು, ಇದನ್ನು‌ ರಾಜ್ಯ ಸರ್ಕಾರ ಸರಿಪಡಿಸಬೇಕು ಎಂದರು.

ಕುರ್ಚಿ ಜಗಳ ಜಾಸ್ತಿ : ಕಾಂಗ್ರೆಸ್ ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಆಗಿದೆ. 5 ವರ್ಷ ಈ ಸರ್ಕಾರ ಇರಲಿ ಅನ್ನೋದು ಜನರ ಆಶಯ. ಆದರೆ ಅವರು ಮಾತ್ರ ಕಚ್ಚಾಟದಲ್ಲೇ ಇದ್ದಾರೆ. ರಾಜ್ಯದಲ್ಲಿ ಏನೇ ಆದರೂ ಕೇಂದ್ರ ಸರ್ಕಾರ ಹಾಗೂ ಹಿಂದಿನ ಬಿಜೆಪಿ ಕಾರಣ ಅಂತಾರೆ. ಮಳೆ ಬಂದರೂ ಬಿಜೆಪಿ ಕಾರಣ, ಬಾರದೆ ಇದ್ದರೂ ಬಿಜೆಪಿ ಕಾರಣ ಅಂತಾರೆ. ಇದನ್ನು ಬಿಟ್ಟು ಜನರ ಹಿತದೃಷ್ಟಿ ಕಾಯಬೇಕು. ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದ್ದರಿಂದ ಅವರ ಕಂಟ್ರೋಲ್​ಗೆ ಏನು ಸಿಗ್ತಿಲ್ಲ ಎಂದು ಜೋಶಿ ಆರೋಪ ಮಾಡಿದರು.

ಇದನ್ನೂ ಓದಿ: ಮುಡಾ ಪ್ರಕರಣ: ಧಾರವಾಡ ಹೈಕೋರ್ಟ್​​​ಗೆ ತನಿಖಾ ವರದಿ ಸಲ್ಲಿಸಿದ ಲೋಕಾಯುಕ್ತ ಅಧಿಕಾರಿಗಳು! ಇಂದು ಸಿಎಂ ಭವಿಷ್ಯ ನಿರ್ಧಾರ? - MUDA SCAM CASE

Last Updated : Jan 27, 2025, 12:39 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.