ಕರ್ನಾಟಕ

karnataka

ETV Bharat / state

ತುಳು, ಬ್ಯಾರಿ, ಕೊಂಕಣಿ ಅಕಾಡೆಮಿಗಳಿಗೆ ಅಧ್ಯಕ್ಷ, ಸದಸ್ಯರ ನೇಮಕ - Konkani academy

ತುಳು, ಬ್ಯಾರಿ, ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ - ಸದಸ್ಯರ ನೇಮಕವಾಗಿದೆ.

President and Members appointed for Tulu, Bari, Konkani Academies
ತುಳು, ಬ್ಯಾರಿ, ಕೊಂಕಣಿ ಅಕಾಡೆಮಿಗಳಿಗೆ ಅಧ್ಯಕ್ಷ, ಸದಸ್ಯರ ನೇಮಕ

By ETV Bharat Karnataka Team

Published : Mar 16, 2024, 6:40 PM IST

ಮಂಗಳೂರು(ದಕ್ಷಿಣ ಕನ್ನಡ): ತುಳು, ಬ್ಯಾರಿ, ಕೊಂಕಣಿ ಅಕಾಡೆಮಿಗಳಿಗೆ ಅಧ್ಯಕ್ಷ ಮತ್ತು ಸದಸ್ಯರನ್ನು ನೇಮಕಗೊಳಿಸಿ ಇಂದು ಸರ್ಕಾರ ಆದೇಶ ಹೊರಡಿಸಿದೆ. ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಪತ್ರಕರ್ತ ತಾರಾನಾಥ್ ಗಟ್ಟಿ ಕಾಪಿಕಾಡ್, ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಉಮರ್ ಯು.ಹೆಚ್ ಹಾಗೂ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಜೋಕಿಂ ಸ್ನಾನಿ ಅಲ್ವಾರಿಸ್ ಅವರನ್ನು ನೇಮಕ ಮಾಡಲಾಗಿದೆ.

ತುಳು ಅಕಾಡೆಮಿ ಸದಸ್ಯರಾಗಿ ಪೃಥ್ವಿರಾಜ್, ಕುಂಬ್ರ ದುರ್ಗಪ್ರಸಾದ್ ರೈ, ಮೋಹನ್ ದಾಸ್ ಕೊಟ್ಟಾರಿ, ಅಕ್ಷಯ್ ಆ‌ರ್. ಶೆಟ್ಟಿ, ಶೈಲೇಶ್‌ ಬಿನ್ ಭೋಜ ಸುವರ್ಣ, ಕಿಶೋ‌ರ್ ಬಿನ್ ಗುಡ್ಡಪ್ಪ ಗೌಡ, ಬೂಬ ಪೂಜಾರಿ, ರೋಹಿತಾಶ್ವ ಯು. ಕಾಪಿಕಾಡ್, ನಾಗೇಶ್ ಕುಮಾರ್ ಉದ್ಯಾವರ, ಸಂತೋಷ್‌ ಶೆಟ್ಟಿ ನೇಮಕಗೊಂಡಿದ್ದಾರೆ.

ಬ್ಯಾರಿ ಅಕಾಡೆಮಿ ಸದಸ್ಯರಾಗಿ ಬಿ.ಎಸ್. ಮುಹಮ್ಮದ್ ಚಿಕ್ಕಮಗಳೂರು, ಹಫ್ತಾ ಬಾನು ಬೆಂಗಳೂರು, ಸಾರಾ ಅಲಿ ಪರ್ಲಡ್ಕ ಶಮೀರಾ ಜಹಾನ್, ಯು.ಹೆಚ್. ಖಾಲಿದ್ ಉಜಿರೆ, ತಾಜುದ್ದೀನ್, ಅಬೂಬಕರ್ ಅನಿಲಕಟ್ಟೆ, ಅಬ್ದುಲ್ ಶರೀಫ್, ಹಮೀದ್ ಹಸನ್ ಮಾಡೂರು, ಸಮೀರ್ ಮುಲ್ಕಿ ಅವರನ್ನು ನೇಮಕ ಮಾಡಲಾಗಿದೆ.

ಇದನ್ನೂ ಓದಿ:ರಾಮ್​​ ಚರಣ್ ಮುಂದಿನ​ ಸಿನಿಮಾದ ಟೈಟಲ್​​ 'ಪೆದ್ದಿ'?: ಪ್ರಮುಖ ಪಾತ್ರದಲ್ಲಿ ಶಿವಣ್ಣ

ಕೊಂಕಣಿ ಅಕಾಡೆಮಿಯ ಸದಸ್ಯರಾಗಿ ಪ್ರಕಾಶ್‌ ಮಾಡ್ತಾ ರೊನಾಲ್ಡ್ ಕ್ರಾಸ್ತಾ, ಡಾ. ವಿಜಯಲಕ್ಷ್ಮಿ ನಾಯಕ್, ನವೀನ್ ಲೋಬೋ, ಸಪ್ನಾಮೇ ಕ್ರಾಸ್ತಾ, ಸಮರ್ಥ್ ಭಟ್, ಸುನಿಲ್ ಸಿದ್ವಿ, ಜೇಮ್ಸ್ ಲೋಪಿಸ್, ದಯಾನಂದ ಮುಡೈಕರ್, ಪ್ರಮೋದ್ ಪಿಂಟೋ ನೇಮಕಗೊಂಡಿದ್ದಾರೆ.

ಇದನ್ನೂ ಓದಿ:'RCB'ಗಾಗಿ ಲಾಂಗ್​ ಹಿಡಿದ ಶಿವಣ್ಣ: ಜಬರ್​ದಸ್ತ್​ ವಿಡಿಯೋ 'ಅರ್ಥ ಆಯ್ತಾ'?

ABOUT THE AUTHOR

...view details