ಕರ್ನಾಟಕ

karnataka

ETV Bharat / state

ದ್ವಿತೀಯ ಪಿಯುಸಿ ಪರೀಕ್ಷೆ-3ಕ್ಕೆ ಸಿದ್ಧತೆ: ಫಲಿತಾಂಶ ಹೆಚ್ಚಳಕ್ಕೆ ಶಿಕ್ಷಣ ಇಲಾಖೆ ಚಿಂತನೆ - Second PUC Exam 3 - SECOND PUC EXAM 3

ದ್ವಿತೀಯ ಪಿಯುಸಿ ಪರೀಕ್ಷೆ-3ಕ್ಕೆ ಶಿಕ್ಷಣ ಇಲಾಖೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಈ ಬಾರಿ ಫಲಿತಾಂಶ ಹೆಚ್ಚಿಸಲು ಕಸರತ್ತು ನಡೆಯುತ್ತಿದೆ.

PREPARATION FOR SECONDARY PUC EXAM  EDUCATION DEPARTMENT  INCREASE RESULTS  BENGALURU
ದ್ವಿತೀಯ ಪಿಯುಸಿ ಪರೀಕ್ಷೆ 3 (ETV Bharat)

By ETV Bharat Karnataka Team

Published : May 22, 2024, 2:09 PM IST

ಬೆಂಗಳೂರು:ಮೂರು ವಾರ್ಷಿಕ ಪರೀಕ್ಷಾ ಪದ್ಧತಿ ಅಳವಡಿಸಿಕೊಂಡ ನಂತರ ನಡೆಯುತ್ತಿರುವ ದ್ವಿತೀಯ ಪಿಯುಸಿ ಪರೀಕ್ಷೆಯ ಮೊದಲನೇ ಹಾಗು ಎರಡನೇ ಪರೀಕ್ಷೆ ಮುಗಿದು ಫಲಿತಾಂಶ ಹೊರಬಿದ್ದಿದೆ. ಇದರ ಬೆನ್ನಲ್ಲೇ ಮೂರನೇ ಪರೀಕ್ಷೆಗೂ ವೇಳಾಪಟ್ಟಿ ಪ್ರಕಟಗೊಂಡಿದೆ. ಜೂನ್ 24ರಿಂದ ಜುಲೈ 5ರವರೆಗೆ ಪರೀಕ್ಷೆಗಳು ನಡೆಯಲಿದ್ದು, ಉತ್ತೀರ್ಣರಾಗಲು ಮತ್ತು ಫಲಿತಾಂಶ ಉತ್ತಮಪಡಿಸಿಕೊಳ್ಳಲು ವಿದ್ಯಾರ್ಥಿಗಳಗೆ ಮತ್ತೊಂದು ಅವಕಾಶ ಸಿಗುತ್ತಿದೆ.

ನಿನ್ನೆಯಷ್ಟೇ ದ್ವಿತೀಯ ಪಿಯುಸಿ ಪರೀಕ್ಷೆ-2ರ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಪರೀಕ್ಷೆ-3ಕ್ಕೆ ಅಂತಿಮ ವೇಳಾಪಟ್ಟಿ ಪ್ರಕಟವಾಗಿದೆ. ಜೂನ್ ಕಡೆಯ ವಾರದಲ್ಲಿ ಆರಂಭವಾಗಲಿರುವ ಪರೀಕ್ಷೆಗೆ ಹೆಸರು ನೋಂದಾಯಿಸಿಕೊಳ್ಳಲು ಮೇ 23ರಿಂದ 28ರವರೆಗೆ ಅವಕಾಶ ನೀಡಿದ್ದು, ದಂಡದೊಂದಿಗೆ ಶುಲ್ಕ ಪಾವತಿಗೆ ಮೇ 29ರಿಂದ ಮೇ 30ರವರೆಗೆ ಅವಕಾಶವಿದೆ. ಪರೀಕ್ಷೆ-3ಕ್ಕೆ ಅರ್ಜಿ ಸಲ್ಲಿಕೆ ಮಾಡಲು ಮರು ಮೌಲ್ಯಮಾಪನದ ಫಲಿತಾಂಶಕ್ಕೆ ಕಾಯದೇ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷೆ ಮಂಜುಶ್ರೀ ತಿಳಿಸಿದ್ದಾರೆ.

ಪರೀಕ್ಷೆ-3ಕ್ಕೆ ಹೆಸರು ನೋಂದಾಯಿಸಿಕೊಳ್ಳುವ ಎಸ್ಸಿ-ಎಸ್ಟಿ, ಪ್ರವರ್ಗ-1ರ ವಿದ್ಯಾರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ, ಇತರ ವಿದ್ಯಾರ್ಥಿಗಳಿಗೆ ಒಂದು ವಿಷಯಕ್ಕೆ 140 ರೂ., ಎರಡು ವಿಷಯಕ್ಕೆ 270 ರೂ., ಮೂರು ಅಥವಾ ಅದಕ್ಕಿಂತ ಹೆಚ್ಚಿನ ವಿಷಯಗಳ ಪರೀಕ್ಷೆಗೆ 400 ರೂ.ಗಳ ಶುಲ್ಕವನ್ನು ಪಾವತಿ ಮಾಡಬೇಕಿದೆ.

ಪರೀಕ್ಷೆ-1ರಲ್ಲಿ ಎಲ್ಲ ವಿಷಯಗಳನ್ನು ಪಾಸ್ ಮಾಡಿಕೊಳ್ಳಲಾಗದೇ ಉಳಿದಿದ್ದ ವಿದ್ಯಾರ್ಥಿಗಳಲ್ಲಿ ಶೇ.25 ರಷ್ಟು ವಿದ್ಯಾರ್ಥಿಗಳು ಎರಡನೇ ಪರೀಕ್ಷೆಯಲ್ಲಿ ಪಾಸ್ ಆಗಿದ್ದು ಒಟ್ಟಾರೆ ಫಲಿತಾಂಶ ಉತ್ತಮಗೊಂಡಂತಾಗಿದೆ. ಇದೀಗ ಮೂರನೇ ಪರೀಕ್ಷೆ ನಿಗದಿಯಾಗಿದ್ದು ಇಲ್ಲಿಯೂ ಎರಡನೇ ಪರೀಕ್ಷೆ ಮತ್ತೊ ಮೊದಲನೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿಫಲರಾಗಿದ್ದವರು ಉತ್ತೀರ್ಣಗೊಂಡು ಫಲಿತಾಂಶ ಮತ್ತಷ್ಟು ಉತ್ತಮಗೊಳ್ಳುವ ಸಾಧ್ಯತೆ ಇದೆ.

ವಿಶೇಷ ತರಗತಿ: ಆಯಾ ಕಾಲೇಜುಗಳಲ್ಲಿ ವಿಶೇಷ ತರಗತಿಗಳಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಕಡಿಮೆ ವಿದ್ಯಾರ್ಥಿಗಳಿದ್ದಲ್ಲಿ ಪಕ್ಕದ ಕಾಲೇಜುಗಳಲ್ಲಿ ವಿಶೇಷ ತರಗತಿಗಳ ನಡೆಸಲಿದ್ದು, ಅಲ್ಲಿಗೆ ವಿದ್ಯಾರ್ಥಿಗಳು ಹೋಗಬಹುದಾಗಿದೆ. ಕಾಲೇಜು ಹಂತದಲ್ಲಿಯೇ ತರಗತಿಗಳು ನಡೆಯಲಿದ್ದು, ಪರೀಕ್ಷೆ ಪಾಸ್ ಮಾಡಿಕೊಳ್ಳಲು ಉತ್ತಮ ಅವಕಾಶ ನೀಡಲಾಗಿದೆ.

ದ್ವಿತೀಯ ಪಿಯುಸಿ ಪರೀಕ್ಷೆ 3ರ ಅಂತಿಮ ವೇಳಾಪಟ್ಟಿ:

  • 24-06-2024 ಪ್ರಥಮ ಭಾಷೆ ಕನ್ನಡ
  • 25-06-2024 ದ್ವಿತೀಯ ಭಾಷೆ ಇಂಗ್ಲಿಷ್
  • 26-06-2024 ಸಮಾಜಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗಣಕ ವಿಜ್ಞಾನ, ಭೂಗರ್ಭಶಾಸ್ತ್ರ, ಜೀವಶಾಸ್ತ್ರ
  • 27-06-2024 ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ
  • 28-06-2024 ಅರ್ಥಶಾಸ್ತ್ರ, ರಸಾಯನಶಾಸ್ತ್ರ
  • 29-06-2024 ಇತಿಹಾಸ/ಭೌತಶಾಸ್ತ್ರ
  • 01-07-2024 ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ, ಗೃಹ ವಿಜ್ಞಾನ
  • 02-07-2024 ಗಣಿತ, ಶಿಕ್ಷಣಶಾಸ್ತ್ರ, ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ
  • 03-07-2024 ಮೂಲಗಣಿತ, ಮನಃಶಾಸ್ತ್ರ, ಭೂಗೋಳಶಾಸ್ತ್ರ
  • 04-07-2024 ಹಿಂದಿ
  • 05-07-2024 ಮಾಹಿತಿ ತಂತ್ರಜ್ಞಾನ, ಹೆಲ್ತ್ ಕೇರ್

ಇದನ್ನೂ ಓದಿ:ಹೆಚ್ಚಿನ ಪರಿಹಾರ ಪಡೆಯಲೆಂದು ಕೆಐಎಡಿಬಿ ಜಾಗದಲ್ಲಿ ಗಿಡ-ಮರ ನೆಟ್ಟ ಜನರು: ತನಿಖೆಗೆ ಆದೇಶ - KIADB Order For Investigation

ABOUT THE AUTHOR

...view details