ಕರ್ನಾಟಕ

karnataka

ETV Bharat / state

ಟಿಕೆಟ್ ವಿಚಾರಕ್ಕೆ ಫೈಟ್: ಕೈ-ಕೈ ಮಿಲಾಯಿಸಿದ ಕಾನ್ಸ್‌ಟೇಬಲ್, ಕಂಡಕ್ಟರ್ - Fight Over Bus Ticket - FIGHT OVER BUS TICKET

ಪೊಲೀಸ್​​​​​ ಕಾನ್ಸ್‌ಟೇಬಲ್ ಕುಟುಂಬಕ್ಕೆ ಎರಡು ಬಾರಿ ಕಂಡಕ್ಟರ್​ ಟಿಕೆಟ್ ನೀಡಿದ್ದಕ್ಕೆ​ ಕಾನ್ಸ್‌ಟೇಬಲ್ ಮತ್ತು ಕಂಡಕ್ಟರ್ ನಡುವೆ ಗುಂಡ್ಲುಪೇಟೆಯಲ್ಲಿ ಜಗಳ ನಡೆಯಿತು.

ಕಾನ್ಸ್‌ಟೇಬಲ್, ಕಂಡಕ್ಟರ್ ಜಗಳ
ಟಿಕೆಟ್ ವಿಚಾರವಾಗಿ ಬಸ್ ಕಾನ್ಸ್‌ಟೇಬಲ್ ಹಾಗು ಪೊಲೀಸ್ ಕಂಡಕ್ಟರ್ ಗಲಾಟೆ (ETV Bharat)

By ETV Bharat Karnataka Team

Published : May 31, 2024, 8:25 AM IST

ಪೊಲೀಸ್​​​​​ ಕಾನ್ಸ್‌ಟೇಬಲ್, ಬಸ್​ ಕಂಡಕ್ಟರ್ ಫೈಟ್​ ವಿಡಿಯೋ (ETV Bharat)

ಚಾಮರಾಜನಗರ:ಟಿಕೆಟ್​​​​​​ ವಿಚಾರಕ್ಕೆ ಸಾರ್ವಜನಿಕವಾಗಿ ಪೊಲೀಸ್​​​​​ ಕಾನ್ಸ್‌ಟೇಬಲ್​​​ ಹಾಗೂ ಬಸ್​​​ ಕಂಡಕ್ಟರ್ ಪರಸ್ಪರ​ ಹೊಡೆದಾಡಿಕೊಂಡಿರುವ ಘಟನೆ ಗುಂಡ್ಲುಪೇಟೆ ಬಸ್ ನಿಲ್ದಾಣದಲ್ಲಿ ಗುರುವಾರ ನಡೆದಿದೆ.

ಗುಂಡ್ಲುಪೇಟೆ ಡಿಪೋ ಕಂಡಕ್ಟರ್ ಲೋಕೇಶ್ ಹಾಗೂ ಮೈಸೂರು ಸಶಸ್ತ್ರ ಮೀಸಲು ಪಡೆ ಕಾನ್ಸ್‌ಟೇಬಲ್ ಕೊಟ್ರೇಶ್ ಹೊಡೆದಾಡಿಕೊಂಡಿದ್ದಾರೆ. ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿದೆ.

ಘಟನೆಯ ವಿವರ: ಕೊಟ್ರೇಶ್​ ಕುಟುಂಬ ಗುಂಡ್ಲುಪೇಟೆ ತಾಲೂಕಿನ‌ ಹಿಮವದ್​​ ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳಿ ಬೆಟ್ಟದಿಂದ ಬಸ್ ಮೂಲಕ ಗುಂಡ್ಲುಪೇಟೆಗೆ ವಾಪಸ್ ಆಗುತ್ತಿದ್ದರು. ಕೊಟ್ರೇಶ್ ಚಿಕ್ಕಮ್ಮ ಬಸ್‌ ಮುಂದಿನ ಸೀಟ್‌ನಲ್ಲಿ ಕುಳಿತಿದ್ದರೆ ಕೊಟ್ರೇಶ್ ಹಿಂದೆ ಇದ್ದರು. ಕೊಟ್ರೇಶ್ ಅವರ ಟಿಕೆಟ್ ಅ​ನ್ನು ಚಿಕ್ಕಮ್ಮ ತೆಗೆದುಕೊಂಡಿದ್ದರು. ಈ ವಿಚಾರ ತಿಳಿಯದೇ ಕೊಟ್ರೇಶ್ ಕೂಡಾ ಟಿಕೆಟ್ ಪಡೆದುಕೊಂಡಿದ್ದಾರೆ. ಬಸ್‌ನಿಂದ ಇಳಿದ ಬಳಿಕ ಎರಡು ಬಾರಿ ಟಿಕೆಟ್ ಪಡೆದ ವಿಚಾರಕ್ಕೆ ಕಂಡಕ್ಟರ್ ಲೋಕೇಶ್ ಹಾಗೂ ಕಾನ್ಸ್‌ಟೇಬಲ್ ನಡುವೆ ಮಾತಿನ ಚಕಮಕಿ ನಡೆದಿದೆ. ಬಳಿಕ, ಇಬ್ಬರೂ ಹಲ್ಲೆ ಮಾಡಿಕೊಂಡಿದ್ದಾರೆ.

ಕಾನ್ಸ್‌ಟೇಬಲ್ ಸಿವಿಲ್ ಡ್ರೆಸ್​ನಲ್ಲಿದ್ದ ಕಾರಣ ಸಾರಿಗೆ ಸಂಸ್ಥೆಯ ಇತರೆ ಚಾಲಕರು, ಕಂಡಕ್ಟರ್​ಗಳು ಕೂಡ ಕೊಟ್ರೇಶ್​ ಮೇಲೆ ಹಲ್ಲೆ ಮಾಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಘಟನೆಯ ಬಳಿಕ ಗುಂಡ್ಲುಪೇಟೆ ಠಾಣೆಯಲ್ಲಿ ಇಬ್ಬರೂ ದೂರು-ಪ್ರತಿದೂರು ನೀಡಿದ್ದಾರೆ.

ಇದನ್ನೂ ಓದಿ:ಮಂಗಳೂರು: ರಸ್ತೆಯಲ್ಲಿ ನಮಾಜ್ ಪ್ರಕರಣ, ಪೊಲೀಸರಿಂದ ಬಿ ರಿಪೋರ್ಟ್ - Namaz On Streets Case

ABOUT THE AUTHOR

...view details