ಕರ್ನಾಟಕ

karnataka

ETV Bharat / state

ಅಂಜಲಿ ಕೊಲೆ ಪ್ರಕರಣದ ಆರೋಪಿ ಪತ್ತೆಗೆ ಎರಡು ವಿಶೇಷ ತಂಡ ರಚನೆ: ರೇಣುಕಾ ಸುಕುಮಾರ್ - Anjali murder case - ANJALI MURDER CASE

ಅಂಜಲಿ ಕೊಲೆ ಪ್ರಕರಣ ಕುರಿತು ಹು - ಧಾ ಪೊಲೀಸ್ ‌ಕಮಿಷನರ್ ರೇಣುಕಾ ಸುಕುಮಾರ್ ಅವರು ಮಾತನಾಡಿದರು.

renuka-sukumar
ರೇಣುಕಾ ಸುಕುಮಾರ್ (ETV Bharat)

By ETV Bharat Karnataka Team

Published : May 15, 2024, 8:59 PM IST

Updated : May 15, 2024, 11:03 PM IST

ಹು - ಧಾ ಪೊಲೀಸ್ ‌ಕಮೀಷನರ್ ರೇಣುಕಾ ಸುಕುಮಾರ್ (ETV Bharat)

ಹುಬ್ಬಳ್ಳಿ:ಅಂಜಲಿ ಪ್ರೀತಿ ನಿರಾಕರಣೆ ಮಾಡಿರುವ ಕಾರಣಕ್ಕೆ ಕೊಲೆ ಮಾಡಿರುವ ಶಂಕೆ ಇದೆ. ಕೊಲೆ ಆರೋಪಿ ಪತ್ತೆಗಾಗಿ ಎರಡು ವಿಶೇಷ ತಂಡ ರಚನೆ ಮಾಡಲಾಗಿದೆ ಎಂದು ಹು - ಧಾ ಪೊಲೀಸ್ ‌ಕಮಿಷನರ್ ರೇಣುಕಾ ಸುಕುಮಾರ್ ಹೇಳಿದರು. ನಗರದಲ್ಲಿಂದು ಮಾತನಾಡಿದ ಅವರು, ಅಂಜಲಿಗೆ ನಾಲ್ಕು ಬಾರಿ ಚಾಕು ಇರಿದು‌ ಕೊಲೆ ಮಾಡಿದ್ದಾನೆ. ಅಂಜಲಿ ಕೊಲೆ ಮಾಡಿದ ವಿಶ್ವ ಅಲಿಯಾಸ್ ಗಿರಿ ಪರಿಚಯಸ್ಥ ಹುಡುಗನಾಗಿದ್ದು, ಇಂದು ಮುಂಜಾನೆ ಅಂಜಲಿ ಕೊಲೆ ಮಾಡಿ ಪರಾರಿಯಾಗಿದ್ದಾನೆ ಎಂದರು.

ಮಲಗಿದ ವೇಳೆ ಬಾಗಿಲು ತೆರೆಯುತ್ತಲೇ ಚಾಕು ಇರಿದು ಕೊಲೆ ಮಾಡಿದ್ದಾನೆ. ಅವರ ಮನೆಯವರು ದೂರು ಕೊಟ್ಟಿರೋ ಪ್ರಕಾರ, ವಿಶ್ವ ಅಂಜಲಿ ಪ್ರೀತಿ ಮಾಡುವಂತೆ ಪಟ್ಟು ಹಿಡಿದಿದ್ದ. ಅಂಜಲಿ ಪ್ರೀತಿ ನಿರಾಕರಣೆ ಮಾಡಿರೋ ಕಾರಣಕ್ಕೆ ಕೊಲೆ ಮಾಡಿರುವ ಶಂಕೆ ಇದೆ. ಕೊಲೆ ಆರೋಪಿ ಪತ್ತೆಗಾಗಿ ಎರಡು ವಿಶೇಷ ತಂಡ ರಚನೆ ಮಾಡಲಾಗಿದೆ ಎಂದು ತಿಳಿಸಿದರು.

ಆರೋಪಿ ವಿಶ್ವ ಅಲಿಯಾಸ್ ಗಿರಿ ವಿರುದ್ದ ಹಲವು ಪ್ರಕರಣಗಳಿವೆ. ಆತ ಕಳ್ಳತನದ ಆಸಾಮಿಯಾಗಿದ್ದು, ಆತನ ವಿರುದ್ದ ಹಲವು ಪ್ರಕರಣ ಇವೆ. ಈ ಎಲ್ಲ ಆಯಾಮದಲ್ಲಿ‌ ತನಿಖೆ ನಡೆಸಲಾಗ್ತಿದೆ. ಕೊಲೆ ಬೆದರಿಕೆಗೆ ಸಂಬಂಧಿಸಿದಂತೆ ಅಂಜಲಿ ಕುಟುಂಬ ಬೆಂಡಿಗೇರಿ‌ ಪೊಲೀಸ್ ಠಾಣೆಗೆ ಬಂದಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಠಾಣೆಗೆ ಬಂದಿದ್ದು ನಿಜ. ಈ ಕುರಿತು ಠಾಣೆಯಲ್ಲಿ ಸಿಸಿ ಕ್ಯಾಮೆರಾ ದೃಶ್ಯಗಳಿವೆ. ಆದರೆ ಯಾವ ಕಾರಣಕ್ಕೆ ಬಂದಿದ್ದಾರೆ ಅನ್ನೋ ಸ್ಪಷ್ಟತೆ ಇಲ್ಲ. ಹೀಗಾಗಿ ಡಿಸಿಪಿ ಕ್ರೈಂ ಅವರ ನೇತೃತ್ವದಲ್ಲಿ ತನಿಖೆಗೆ ಸೂಚನೆ ನೀಡಲಾಗಿದೆ. ಆದರೆ, ಈ ಬಗ್ಗೆಯೂ ತನಿಖೆ ಆರಂಭಿಸಿದ್ದೇವೆ. ಅಕಸ್ಮಾತ್ ಬೆಂಡಿಗೇರಿ ಪೊಲೀಸ್ ಠಾಣೆಯ ಸಿಬ್ಬಂದಿ ಲೋಪದೋಷ ಇದ್ರೆ ಕ್ರಮ ಕೈಗೊಳ್ತೀವಿ ಎಂದರು.

ಅಂಜಲಿ ಕೊಲೆಗಾರನ ಓಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ : ಆರೋಪಿ ವಿಶ್ವ ಕೊಲೆ ಮಾಡಿ ಪರಾರಿಯಾಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೆಳಗ್ಗೆ ಐದು ಗಂಟೆ ಸುಮಾರಿಗೆ ಅಂಜಲಿ ಮನೆಗೆ ತೆರಳಿದ ವಿಶ್ವ ಚಾಕುವಿನಿಂದ ಕೊಲೆ ಮಾಡಿ ಬಳಿಕ ಓಡಿ ಹೋಗುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಇದನ್ನೂ ಓದಿ :ಅಂಜಲಿ ಹತ್ಯೆಗೆ ಖಂಡನೆ: ಹುಬ್ಬಳ್ಳಿಯ ಚೆನ್ನಮ್ಮ ಸರ್ಕಲ್​ನಲ್ಲಿ ಪ್ರತಿಭಟನೆ - Protest In Hubballi

Last Updated : May 15, 2024, 11:03 PM IST

ABOUT THE AUTHOR

...view details