ಕರ್ನಾಟಕ

karnataka

ETV Bharat / state

ಕೊಡಗಿನಲ್ಲಿ ಚುನಾವಣಾ ಪ್ರಚಾರ ಸಭೆ ವೇಳೆ ಪಿಕ್ ಪಾಕೆಟ್: 13 ಆರೋಪಿಗಳ ಬಂಧನ - 13 pick pocketers arrested - 13 PICK POCKETERS ARRESTED

ಒಟ್ಟು 13 ಪಿಕ್ ಪಾಕೆಟರ್​ಗಳನ್ನು ಬಂಧಿಸಿರುವ ಪೊಲೀಸರು ಅವರಿಂದ 65,960 ರೂ. ನಗದು ಹಾಗೂ ಮೊಬೈಲ್​ ಫೋನ್​ ಹಾಗೂ ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.

arrested accused
ಬಂಧಿತ ಆರೋಪಿಗಳು

By ETV Bharat Karnataka Team

Published : Apr 4, 2024, 12:50 PM IST

ಕೊಡಗು: ಕುಶಾಲನಗರ ಮತ್ತು ಮಡಿಕೇರಿಯಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಮಾಜಿ ಶಾಸಕರ ಸಹಿತ ಇತರರ ಜೇಬಿನಿಂದ ಪಿಕ್ ಪಾಕೆಟ್ ಮಾಡಿದ್ದ 13 ಮಂದಿ ಆರೋಪಿಗಳನ್ನು ಕೊಡಗು ಜಿಲ್ಲಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರಿಂದ ಹಣ, ಮೊಬೈಲ್, ಹಾಗೂ ಕಾರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಶಿವಮೊಗ್ಗ ಮೂಲದ 11 ಮತ್ತು ಬೆಂಗಳೂರು ಮೂಲದ ಇಬ್ಬರು ಆರೋಪಿಗಳನ್ನು ಸೇರಿ ಒಟ್ಟು 13 ಜನ ಪಿಕ್ ಪಾಕೆಟ್ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳು ಪಿಕ್ ಪಾಕೆಟ್ ಮಾಡಿದ್ದ 1,96,300 ರೂ.ಗಳ ಪೈಕಿ 65,960 ರೂ.ಗಳನ್ನು ವಶಕ್ಕೆ ಪಡೆಯಲಾಗಿದೆ. ಕೃತ್ಯಕ್ಕೆ ಬಳಸಿದ್ದ 12 ಮೊಬೈಲ್ ಫೋನ್‌ಗಳು, 2 ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ.

ಬಂಧಿತ ಆರೋಪಿಗಳು

ಆರೋಪಿಗಳು ಯಾರು?:ಶಿವಮೊಗ್ಗ ಭದ್ರಾವತಿಯ ಜಯಣ್ಣ ಅಲಿಯಾಸ್ ಕಿರಿಕ್ ಜಯ (38), ಪುಟ್ಟರಾಜು ಅಲಿಯಾಸ್ ಪುಟ್ಟ (39), ಸಿ.ನಾಗರಾಜ ಅಲಿಯಾಸ್ ಕೋತಿ ಕಿಚ್ಚ (43), ರಾಮು ಅಲಿಯಾಸ್ ಕುಳ್ಳರಾಮು (43), ಕೆ.ಉಮೇಶ್ (36), ಜಯಣ್ಣ ಅಲಿಯಾಸ್ ದೊಡ್ಡ ಜಯಣ್ಣ (53), ಬೋಜಪ್ಪ ಅಲಿಯಾಸ್ ಬೋಜ (50), ಮೆಹಬೂಬ್ ಸುಭಾನ್ (48), ಡಿ.ಗಿರೀಶ (31), ಬಾಲು (35), ಬೆಂಗಳೂರು ಹೆಬ್ಬುಗೋಡಿಯ ಹರೀಶ (35), ನೆಲಮಂಗಲದ ರಂಗಣ್ಣ ಅಲಿಯಾಸ್ ರಂಗ (50) ಎಂಬವರು ಬಂಧಿತ ಪಿಕ್ ಪಾಕೆಟ್ ಆರೋಪಿಗಳಾಗಿದ್ದಾರೆ.

ಘಟನೆ ಹಿನ್ನೆಲೆ?:ಮಡಿಕೇರಿ ನಗರ ಪೊಲೀಸ್ ಠಾಣೆ ಮತ್ತು ಕುಶಾಲನಗರ ಠಾಣಾ ವ್ಯಾಪ್ತಿಯಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾ.27ರಂದು ಬಿಜೆಪಿ ಪಕ್ಷದ ಕಾರ್ಯಕರ್ತರ ಸಭೆ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕೃತಕವಾಗಿ ನೂಕುನುಗ್ಗಲು ಸೃಷ್ಟಿಸಿ ಕುಶಾಲನಗರ ಇಂದಿರಾ ಬಡಾವಣೆಯ ಚರಣ್ ಅವರ 32 ಸಾವಿರ, ಚಂದ್ರಶೇಖರ್ ಬಳಿಯಿದ್ದ 50 ಸಾವಿರ, ಮಣಿ ಎಂಬವರ ಜೇಬಿನಿಂದ 15 ಸಾವಿರ ಪಿಕ್​ ಪಾಕೆಟ್​ ಮಾಡಲಾಗಿತ್ತು.

ಮಡಿಕೇರಿಯ ಖಾಸಗಿ ಹೋಟೆಲ್​ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಂಗಸಮುದ್ರ ನಿವಾಸಿ ನಿತಿನ್ ಅವರ ಜೇಬಿನಿಂದ 50 ಸಾವಿರ, ವಿರಾಜಪೇಟೆ ನಿವಾಸಿ ಯೋಗೇಶ್ ಅವರ ಬಳಿಯಿದ್ದ 32 ಸಾವಿರ, ಶಾಸಕ ರಂಜನ್ ಅವರ ದಾಖಲೆಗಳ ಪರ್ಸ್, ಮಾಜಿ ಸ್ಪೀಕರ್ ಕೆ. ಜಿ. ಬೋಪಯ್ಯ ಅವರ ಜೇಬಿನಲ್ಲಿದ್ದ 17 ಸಾವಿರ ರೂ. ಸೇರಿದಂತೆ ಒಟ್ಟು 1,96,300 ರೂ.ಗಳನ್ನು ಪಿಕ್ ಪಾಕೆಟ್ ಮಾಡಲಾಗಿತ್ತು.

ಈ ಕುರಿತು ಪ್ರತ್ಯೇಕ 3 ದೂರುಗಳನ್ನು ದಾಖಲು ಮಾಡಿಕೊಳ್ಳಲಾಗಿತ್ತು. ಪ್ರಕರಣ ಬೆಳಕಿಗೆ ಬಂದ ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಸಭಾಂಗಣದಲ್ಲಿ ಅಳವಡಿಸಲಾಗಿದ್ದ ಸಿ.ಸಿ ಕ್ಯಾಮರಾ ದೃಶ್ಯಾವಳಿಗಳ ಸಹಿತ ತಾಂತ್ರಿಕ ಮಾಹಿತಿಗಳನ್ನು ಕಲೆಹಾಕಿ ಆರೋಪಿಗಳನ್ನು ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಲಾಗಿದ್ದ ಇನ್ನೋವಾ ಕಾರು ಹಾಗೂ ಇಟಿಯೋಸ್ ಕಾರು ಸಹಿತ 12 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ:ಬೆಂಗಳೂರು: ವಿಮಾನದಲ್ಲಿ ಬಂದು ಪಿಜಿಗಳಲ್ಲಿ ಲ್ಯಾಪ್​ಟಾಪ್ ಎಗರಿಸುತ್ತಿದ್ದ ಬಿ.ಟೆಕ್ ಪದವೀಧರೆ ಸೆರೆ - B Tech graduate arrested

ABOUT THE AUTHOR

...view details