ಕರ್ನಾಟಕ

karnataka

ETV Bharat / state

ಬೆಂಗಳೂರು: ಮಹಿಳಾ ಟಾಯ್ಲೆಟ್‌ ಡಸ್ಟ್‌ಬಿನ್​ನಲ್ಲಿ ಕಿಂಡಿ ಸೃಷ್ಟಿಸಿ ಕ್ಯಾಮರಾ ಇರಿಸಿದ್ದವ ಅರೆಸ್ಟ್​ - CAMERA IN TOILET - CAMERA IN TOILET

ಆಘಾತಕಾರಿ ಘಟನೆಯೊಂದರಲ್ಲಿ, ಬೆಂಗಳೂರಿನ ಕಾಫಿ ಶಾಪ್‌ನ ಟಾಯ್ಲೆಟ್‌ನಲ್ಲಿ ವಿಡಿಯೋ ರೆಕಾರ್ಡ್​ ಮಾಡಲು ಗೌಪ್ಯವಾಗಿ ಮೊಬೈಲ್​ ಇರಿಸಿದ್ದ ಪ್ರಕರಣ ಬೆಳಕಿಗೆ ಬಂದಿದೆ.

BENGALURU CAFE HIDDEN PHONE  HIDDEN CAMERA IN WASHROOM  THIRD WAVE COFFEE  BENGALURU
ಆರೋಪಿ (ETV Bharat)

By ETV Bharat Karnataka Team

Published : Aug 11, 2024, 1:34 PM IST

ಬೆಂಗಳೂರು : ಮಹಿಳಾ ವಾಶ್ ರೂಮ್‌ನಲ್ಲಿ ಮೊಬೈಲ್ ಇರಿಸಿ, ಗೌಪ್ಯವಾಗಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಆರೋಪಿಯನ್ನು ಸದಾಶಿವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗ ಮೂಲದ ಮನೋಜ್ (23) ಬಂಧಿತ ಆರೋಪಿ. ಬಿಇಎಲ್ ರಸ್ತೆಯಲ್ಲಿರುವ ಥರ್ಡ್ ವೇವ್ ಕಾಫಿ ಶಾಫ್‌ನ ವಾಶ್ ರೂಮ್‌ನಲ್ಲಿ ಮೊಬೈಲ್ ಇಟ್ಟಿದ್ದ ಆರೋಪಿ, ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಎಂಬ ಆರೋಪ ಕೇಳಿಬಂದಿದೆ.

ಆರೋಪಿ ಮನೋಜ್ ಶಾಫ್‌ನಲ್ಲಿ ಕಾಫಿ ಮೇಕರ್ ಆಗಿ ಕೆಲಸ ಮಾಡುತ್ತಿದ್ದ. ವಾಶ್ ರೂಮ್‌ನ ಶೌಚಾಲಯದ ಡಸ್ಟ್ ಬಿನ್‌ನಲ್ಲಿ ಕಿಂಡಿ ಸೃಷ್ಟಿಸಿದ್ದ ಆರೋಪಿ, ಮೊಬೈಲ್ ಫೋನ್‌ನ ಕ್ಯಾಮರಾವನ್ನ ಶೌಚಾಲಯದ ಸೀಟ್‌ನತ್ತ ರೆಕಾರ್ಡಿಂಗ್ ಆನ್ ಮಾಡಿ ಇರಿಸಿದ್ದ. ಶಬ್ಧವಾದರೆ ಗೊತ್ತಾಗಬಹುದು ಎಂಬ ಕಾರಣಕ್ಕೆ ಫೋನ್​ನ್ನು ಫ್ಲೈಟ್ ​ಮೋಡ್​ನಲ್ಲಿರಿಸಿದ್ದ. ಮಹಿಳೆಯೊಬ್ಬರು ವಾಶ್ ರೂಮ್‌ಗೆ ಹೋದಾಗ ಶೌಚಾಲಯದಲ್ಲಿ ಮೊಬೈಲ್ ಇರಿಸಿರುವುದು ಹಾಗೂ ಸುಮಾರು 2 ಗಂಟೆಗಳಷ್ಟು ವಿಡಿಯೋ ರೆಕಾರ್ಡಿಂಗ್ ಆಗಿರುವುದು ಪತ್ತೆಯಾಗಿತ್ತು. ತಕ್ಷಣವೇ ಆ ಮಹಿಳೆ ಕೆಫೆ ಸಿಬ್ಬಂದಿ ಹಾಗೂ ಪೊಲೀಸರಿಗೆ ವಿಚಾರ ತಿಳಿಸಿದ್ದರು. ಸ್ಥಳಕ್ಕೆ ಬಂದ ಪೊಲೀಸರು ವಿಚಾರಣೆ ನಡೆಸಿದಾಗ ಕೆಫೆಯ ಸಿಬ್ಬಂದಿಯೇ ಮೊಬೈಲ್ ಇರಿಸಿರುವುದು ಪತ್ತೆಯಾಗಿದೆ. ತಕ್ಷಣವೇ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಘಟನೆಯ ಕುರಿತು ಕ್ಷಮೆಯಾಚಿಸಿರುವ ಥರ್ಡ್ ವೇವ್ ಕಾಫಿ ಕೆಫೆಯ ಆಡಳಿತ ಮಂಡಳಿ, ಗ್ರಾಹಕರ ಸುರಕ್ಷತೆ ಮತ್ತು ಕ್ಷೇಮ ನಮ್ಮ ಆದ್ಯತೆಯಾಗಿದೆ. ಆರೋಪಿತ ಸಿಬ್ಬಂದಿಯನ್ನು ತಕ್ಷಣವೇ ಕೆಲಸದಿಂದ ವಜಾಗೊಳಿಸಲಾಗಿದೆ. ಆರೋಪಿ ವಿರುದ್ಧ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಎಕ್ಸ್ ಪೋಸ್ಟ್​ನಲ್ಲಿ ಸ್ಪಷ್ಟಪಡಿಸಿದೆ.

ಓದಿ:ಪ್ರೇಮ ವಿವಾಹಕ್ಕೆ ಯುವತಿಯ ಪೋಷಕರಿಂದ ಬೆದರಿಕೆ: ಠಾಣೆ‌ ಮೆಟ್ಟಿಲೇರಿದ ನವದಂಪತಿ - Couple Seeks Police Protection

ABOUT THE AUTHOR

...view details