ಕರ್ನಾಟಕ

karnataka

ETV Bharat / state

ಎಚ್ಎಂಪಿವಿ ಸೋಂಕಿನ ಬಗ್ಗೆ ಭಯ ಬೇಡ, ಮುಂಜಾಗ್ರತೆ ಇರಲಿ: ಸಿಎಂ ಸಿದ್ದರಾಮಯ್ಯ - HMPV IN KARNATAKA

ಎಚ್ಎಂಪಿವಿ ಸೋಂಕಿನ ಬಗ್ಗೆ ಸಾರ್ವಜನಿಕರು ಭಯಪಡುವ ಅವಶ್ಯಕತೆ ಇಲ್ಲ. ಇದು ಆತಂಕಕಾರಿ ವೈರಸ್ ಅಲ್ಲ. ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ (ETV Bharat)

By ETV Bharat Karnataka Team

Published : Jan 8, 2025, 7:35 AM IST

ಬೆಂಗಳೂರು: ಎಚ್‌ಎಂಪಿವಿ ವೈರಾಣುವಿನ ಬಗ್ಗೆ ಸಾರ್ವಜನಿಕರು ಭಯಪಡಬೇಕಾದ ಅಗತ್ಯವಿಲ್ಲ. ಜಾಗರೂಕರಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಿ. ಈಗಾಗಲೇ ಆರೋಗ್ಯ ಇಲಾಖೆಯವರು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

'ಇದು ಆತಂಕಾರಿಯಾದ ವೈರಸ್ ಅಲ್ಲ':ಗಾಂಧಿಭವನದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಚ್‌ಎಂಪಿವಿ ಬಗ್ಗೆ ಇಂದು ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಚರ್ಚಿಸಲಾಗಿದೆ. ಇದು ಆತಂಕಾರಿಯಾದ ವೈರಸ್ ಅಲ್ಲ. ಅದು ಚೀನಾದಿಂದ ಬಂದಿಲ್ಲ. 2001ರಿಂದಲೇ ಈ ವೈರಾಣು ಪತ್ತೆಯಾಗಿದೆ. ಎಚ್‌ಎಂಪಿ ವೈರಸ್ ಮಕ್ಕಳಿಗೆ, ವಯಸ್ಸಾದವರಿಗೆ ಹಾಗೂ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಹೆಚ್ಚಾಗಿ ತಗಲುತ್ತದೆ. ಆದರೆ ಅದು ಅಪಾಯಕಾರಿಯಲ್ಲ ಎಂದು ತಜ್ಞರು ತಿಳಿಸಿದ್ದಾರೆ. ಆದರೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವುದು ಉತ್ತಮ ಎಂದು ತಿಳಿಸಿದರು.

ಇದನ್ನೂ ಓದಿ:ಎಚ್​ಎಂಪಿವಿ ಸೋಂಕು: ರಾಜ್ಯ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ

'ಔತಣಕೂಟದ ಬಗ್ಗೆ ಗೊತ್ತಿಲ್ಲ':ಇದೇ ವೇಳೆ, ಗೃಹ ಸಚಿವ ಜಿ.ಪರಮೇಶ್ವರ ಏರ್ಪಡಿಸಿದ್ದ ಔತಣಕೂಟ ರದ್ದಾಗಿರುವ ಕುರಿತ ಪ್ರಶ್ನೆಗೆ ಉತ್ತರಿಸಿ, ಈ ಬಗ್ಗೆ ಗೊತ್ತಿಲ್ಲ. ಔತಣಕೂಟ ಕರೆದಿರುವುದಾಗಲಿ ಅಥವಾ ರದ್ದಾಗಿರುವುದಾಗಲಿ ನನಗೆ ತಿಳಿದಿಲ್ಲ. ಅವರೊಂದಿಗೆ ಮಾತನಾಡುತ್ತೇನೆ ಎಂದರು.

ಇದನ್ನೂ ಓದಿ:HMP ವೈರಸ್​ನಿಂದ ಮಕ್ಕಳ ಮೇಲೆ ಹೆಚ್ಚು ಪರಿಣಾಮ, ಈ ಲಕ್ಷಣಗಳು ಕಂಡುಬಂದರೆ ಜಾಗರೂಕರಾಗಿರಿ: ವೈದ್ಯರ ಸಲಹೆ

ABOUT THE AUTHOR

...view details