ಕರ್ನಾಟಕ

karnataka

By ETV Bharat Karnataka Team

Published : Jan 31, 2024, 8:51 AM IST

Updated : Jan 31, 2024, 2:09 PM IST

ETV Bharat / state

'ಪಂಚವಟಿಕೆ ವೃಕ್ಷದ ಗಾಳಿ ಸೇವನೆಯಿಂದ ಬಿಪಿ, ಶುಗರ್ ಸೇರಿ ಹಲವು ಸಮಸ್ಯೆಗಳು ದೂರ'

ಶ್ವಾಸಕೋಶ ಸಂಬಂಧಿ ರೋಗಗಳು, ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಸೇರಿದಂತೆ ಸಂತಾನ ಸಮಸ್ಯೆಗಳೂ ಕೂಡ ಪಂಚವಟಿಕೆ ವೃಕ್ಷಗಳ ಗಾಳಿ ಸೇವಿಸುವುದರಿಂದ ದೂರವಾಗುತ್ತವೆ ಎನ್ನುತ್ತಾರೆ ಸುರೇಖಾ.

ಪ್ರಜಾಪೀತ ಬ್ರಹ್ಮಕುಮಾರಿ
ಪ್ರಜಾಪೀತ ಬ್ರಹ್ಮಕುಮಾರಿ

ಪಂಚವಟಿಕೆ ವೃಕ್ಷದ ಬಗ್ಗೆ ಮಾಹಿತಿ ನೀಡುತ್ತಿರುವುದು

ಹಾವೇರಿ: ಬ್ಯಾಡಗಿ ಪಟ್ಟಣದಲ್ಲಿ ಪ್ರಜಾಪೀತ ಬ್ರಹ್ಮಕುಮಾರಿ ಸಂಸ್ಥೆ ಬನ್ನಿಪತ್ರಿ, ಬಿಲ್ವಪತ್ರಿ, ಬೇವು, ಆಲ ಮತ್ತು ಅಶ್ವತ್ಥ ಮರಗಳ ಸಸಿಗಳನ್ನು ನೆಡುವ 'ಪಂಚವಟಿಕೆ ಯೋಜನೆ' ಜಾರಿಗೆ ತಂದಿದೆ. ಈ ಮೂಲಕ ಪರಿಸರ ಹಾಗೂ ವಾಯು ಮಾಲಿನ್ಯ ತಡೆಗಟ್ಟಲು ವಿನೂತನ ಪ್ರಯತ್ನ ಮಾಡುತ್ತಿದೆ. ಪಟ್ಟಣದ ಪ್ರಮುಖ ಉದ್ಯಾನವನಗಳಲ್ಲಿ ಪಂಚವಟಿ ವೃಕ್ಷಗಳನ್ನು ನಡೆಲಾಗುತ್ತಿದೆ.

ಪಂಚವಟಿಕೆ ವೃಕ್ಷ

"ಈ ರೀತಿ ನೆಟ್ಟ ಮರಗಳು 25 ವರ್ಷಗಳ ನಂತರ ಪಟ್ಟಣಕ್ಕೆ ಬೇಕಾಗುವ ಆಮ್ಲಜನಕದ ಬೇಡಿಕೆಯನ್ನು ಈಡೇರಿಸುತ್ತದೆ" ಎನ್ನುತ್ತಾರೆ ಪ್ರಜಾಪೀತ ಬ್ರಹ್ಮಕುಮಾರಿ ಬ್ಯಾಡಗಿ ಸೇವಾಕೇಂದ್ರ ಶಾಖೆಯ ಸುರೇಖಾ. "ಈಗಾಗಲೇ ನಗರದ ಪ್ರಮುಖ ಸ್ಥಳಗಳಲ್ಲಿ ಈ ರೀತಿಯ ಐದು ತರಹದ ಮರಗಳ ಸಸಿಗಳನ್ನು ನೆಡಲಾಗಿದೆ. ಸದ್ಯ ಪಟ್ಟಣದ 15 ಸ್ಥಳಗಳಲ್ಲಿ ಸಸಿಗಳನ್ನು ನೆಟ್ಟು ಪೋಷಿಸಲಾಗುತ್ತದೆ. ಪ್ರತಿ ಉದ್ಯಾನವದಲ್ಲಿ ಸಸಿ ನೆಡುವ ಮೂಲಕ ಪರಿಸರದಲ್ಲಿ ಉಂಟಾಗುವ ಮಾಲಿನ್ಯ ಹಾಗೂ ವೇಗವಾಗಿ ಹರಡುತ್ತಿರುವ ವಿಷಕಾರಿ ಗಾಳಿಯನ್ನು ನಿಯಂತ್ರಿಸಬಹುದು" ಎಂದು ಅವರು ತಿಳಿಸಿದರು.

ಪ್ರಜಾಪೀತ ಬ್ರಹ್ಮಕುಮಾರಿ ವಿಶ್ವವಿದ್ಯಾಲಯ

"ಕೇವಲ ಸಸಿ ನೆಡುವುದಷ್ಟೇ ಅಲ್ಲ, ಈ ರೀತಿ ನೆಟ್ಟ ಸಸಿಗಳ ಸಂರಕ್ಷಣೆಯನ್ನೂ ಸಹ ಸಂಸ್ಥೆ ಮಾಡುತ್ತಿದೆ. ಪ್ರತಿ ಉದ್ಯಾನವನಕ್ಕೆ ಒಬ್ಬ ಸೇವಾಕಾಂಕ್ಷಿಯನ್ನು ನೇಮಿಸಲಾಗಿದೆ. ಇವರು ಪ್ರತಿನಿತ್ಯ ಉದ್ಯಾನವನಕ್ಕೆ ಭೇಟಿ ನೀಡಿ ಸಸಿಗಳ ಪರಿಸ್ಥಿತಿ ಹೇಗಿದೆ, ಅದಕ್ಕೆ ಬೇಕಾದ ನೀರು, ಬೆಳಕು ಮತ್ತು ಗೊಬ್ಬರ ನೀಡುತ್ತಾರೆ. ಪ್ರತಿ ಸಸಿಯನ್ನೂ ಮಗುವಿನಂತೆ ಸಂಸ್ಥೆ ಪೋಷಿಸುತ್ತಿದೆ. ಪ್ರಸ್ತುತ ಜಗತ್ತು ಹಲವು ರೋಗಗಳ ಭಾದೆಯಿಂದ ಬಳಲುತ್ತಿದೆ. ಇದಕ್ಕೆಲ್ಲ ಪ್ರಮುಖ ಕಾರಣ ವಾಯು ಮಾಲಿನ್ಯ. ಹೀಗೇ ಬಿಟ್ಟರೆ ಭವಿಷ್ಯದಲ್ಲಿ ಅನೇಕ ಗಂಡಾಂತರಗಳನ್ನು ಎದುರಿಸಬೇಕಾಗಬಹುದು. ಅದಕ್ಕಾಗಿ ಈ ಪಂಚವಟಿಕೆ ಯೋಜನೆ ಜಾರಿಗೆ ತರಲಾಗಿದೆ. ಶ್ವಾಸಕೋಶ ಸಂಬಂಧಿ ರೋಗಗಳು, ಮದುಮೇಹ ಮತ್ತು ಅಧಿಕ ರಕ್ತದೊತ್ತಡ ಸೇರಿದಂತೆ ಸಂತಾನ ಸಮಸ್ಯೆಗಳೂ ಕೂಡ ಪಂಚವಟಿಕೆ ವೃಕ್ಷಗಳ ಗಾಳಿಯನ್ನು ಸೇವಿಸುವುದರಿಂದ ದೂರ ಮಾಡಬಹುದು" ಎಂದು ಅವರು ತಿಳಿಸಿದರು.

ಪಂಚವಟಿಕೆ ವೃಕ್ಷ

"ಸಂಸ್ಥೆಯ ಈ ಕಾರ್ಯ ಪರಿಸರ ಪ್ರೇಮಿಗಳಿಗೆ ಸಂತಸ ತಂದಿದೆ. ಪ್ರಜಾಪೀತ ಬ್ರಹ್ಮಕುಮಾರಿ ಬ್ಯಾಡಗಿ ಶಾಖೆಯ ಕಾರ್ಯ ಪ್ರಶಂಸನೀಯ" ಎಂದು ಬ್ಯಾಡಗಿ ಪರಿಸರಪ್ರೇಮಿ ಮುರಿಗೆಪ್ಪ ಶೆಟ್ಟರ್ ತಿಳಿಸಿದರು. "ಬ್ಯಾಡಗಿ ವಿಶ್ವದಲ್ಲಿಯೇ ಮೆಣಸಿನಕಾಯಿ ಮಾರುಕಟ್ಟೆಗೆ ಪ್ರಸಿದ್ಧಿ ಪಡೆದಿದೆ. ಇಲ್ಲಿ ರಾಜ್ಯವಷ್ಟೇ ಅಲ್ಲದೆ ಹೊರರಾಜ್ಯಗಳಿಂದಲೂ ಸಾವಿರಾರು ರೈತರು ಮೆಣಸಿನಕಾಯಿ ಮಾರಾಟ ಮಾಡಲು ಬರುತ್ತಾರೆ. ಅದೇ ರೀತಿ ವರ್ತಕರು, ದಲ್ಲಾಳಿಗಳು ಬೇರೆ ಬೇರೆ ರಾಜ್ಯಗಳಿಂದ ಮಾರುಕಟ್ಟೆಗೆ ಬರುತ್ತಾರೆ. ಇದರಿಂದ ಪಟ್ಟಣಕ್ಕೆ ಹೆಚ್ಚಿನ ಆಮ್ಲಜನಕದ ಅವಶ್ಯಕತೆ ಇದೆ. ಮುಂದೊಂದು ದಿನ ಈ ರೀತಿ ರೈತರು ವರ್ತಕರು ಸಹ ಅಧಿಕವಾಗುವ ಸಾಧ್ಯತೆ ಇದೆ. ಇದಲ್ಲದೆ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಿಂದಾಗಿ ಇಲ್ಲಿಯೇ ಈ ಸಂಬಂಧಿತ ಕೈಗಾರಿಕೆಗಳು ಸ್ಥಾಪನೆಯಾದರೂ ಆಶ್ಚರ್ಯಪಡಬೇಕಾಗಿಲ್ಲ. ಈ ರೀತಿ ಮುಂದೆ ಪರಿಸ್ಥಿತಿ ಬರಬಹುದು ಎಂದು ಬ್ಯಾಡಗಿ ಪ್ರಜಾಪೀತ ಬ್ರಹ್ಮಕುಮಾರಿ ಶಾಖೆ ಪಂಚವಟಿಕೆ ಸಸಿಗಳನ್ನು ನೆಡುತ್ತಿದೆ. ಇದು ನಿಜಕ್ಕೂ ಶ್ಲಾಘನೀಯ. ಕೇವಲ ಪ್ರಜಾಪೀತ ಬ್ರಹ್ಮಕುಮಾರಿ ಬ್ಯಾಡಗಿ ಶಾಖೆಯಷ್ಟೇ ಅಲ್ಲದೆ ವಿವಿಧ ಸಂಘ-ಸಂಸ್ಥೆಗಳೂ ಸಹ ಈ ಕಾರ್ಯಕ್ಕೆ ಮುಂದಾದರೆ ಬರುವ ದಿನಗಳಲ್ಲಿ ವಾಯು ಮಾಲಿನ್ಯದಂತಹ ಸಮಸ್ಯೆಗಳೇ ಇರುವುದಿಲ್ಲ" ಎಂದು ಮುರಿಗೆಪ್ಪ ಶೆಟ್ಟರ್ ಹೇಳಿದರು.

ಇದನ್ನೂ ಓದಿ: ಕಿವಿ ಹಣ್ಣು ಸೇವನೆ ಮಾನಸಿಕ ಆರೋಗ್ಯಕ್ಕೆ ಪೂರಕ: ಸಂಶೋಧನಾ ವರದಿ

Last Updated : Jan 31, 2024, 2:09 PM IST

ABOUT THE AUTHOR

...view details