ಚಿತ್ರದುರ್ಗ:'ರಾಷ್ಟ್ರನಾಯಕ ದಿ. ಎಸ್ ನಿಜಲಿಂಗಪ್ಪ ಮನೆ ಮಾರಾಟಕ್ಕಿದೆ' ಎಂದು ಮಾಜಿ ಸಿಎಂ ದಿ. ಎಸ್ ನಿಜಲಿಂಗಪ್ಪ ಅವರ ಪುತ್ರ ಕಿರಣ್ ಶಂಕರ್ ಅವರು ಪತ್ರಿಕೆಗೆ ಜಾಹೀರಾತು ನೀಡಿದ್ದಾರೆ.
ಸರ್ಕಾರಕ್ಕೆ ಮನೆ ಮಾರಾಟ ಮಾಡಲು ಪುತ್ರ ಕಿರಣ್ ಶಂಕರ್ ಹಿಂದೇಟು ಹಾಕಿದ್ದಾರೆ. ಚಿತ್ರದುರ್ಗ ನಗರದ ವಾರ್ಡ್ ನಂ. 32 ವಿಪಿ ಬಡಾವಣೆಯ ಡಿಸಿ ಬಂಗಲೆಯ ಹತ್ತಿರ ಇರುವ 117 X 130 ಅಡಿ ವಿಸ್ತೀರ್ಣದ 'ವಿನಯ ನಿವಾಸ' ವನ್ನು ಖಾಸಗಿಯವರಿಗೆ ಮಾರಾಟ ಮಾಡಲು ಕಿರಣ್ ಶಂಕರ್ ಮುಂದಾಗಿದ್ದಾರೆ.
ನಿಜಲಿಂಗಪ್ಪ ಮನೆ ಖರೀದಿ ಬಗ್ಗೆ ಚಿಂತನೆ ನಡೆಸಿದ್ದ ಕಾಂಗ್ರೆಸ್ : ರಾಷ್ಟ್ರನಾಯಕ ದಿ. ಎಸ್ ನಿಜಲಿಂಗಪ್ಪ ಮನೆ ಮಾರಾಟಕ್ಕಿದೆ ಎಂದು ಜಾಹೀರಾತು ಕೊಡುವ ಮುನ್ನ ಆ ನಿವಾಸವನ್ನು ಕೆಪಿಸಿಸಿ ಖರೀದಿ ಮಾಡಲು ಮುಂದಾಗಿತ್ತು. ಇದೇ ವಿಚಾರವಾಗಿ ಸೆಪ್ಟೆಂಬರ್ 2 ರಂದು ನಿಜಲಿಂಗಪ್ಪ ನಿವಾಸಕ್ಕೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಭೇಟಿ ನೀಡಿದ್ದರು. ಪುತ್ರ ಕಿರಣ್ ಶಂಕರ್ ಜೊತೆ ಕೆಲಹೊತ್ತು ಚರ್ಚೆ ನಡೆಸಿ ತೆರಳಿದ್ದರು.
ಖಾಸಗಿಯವರಿಗೆ ಮಾರಾಟ ಮಾಡಲು ಮುಂದಾಗಿ ಪತ್ರಿಕಾ ಪ್ರಕಟಣೆ : ಅಲ್ಲದೆ ದಿ. ಎಸ್. ನಿಜಲಿಂಗಪ್ಪ ಅವರ ನಿವಾಸ ಖರೀದಿಸಿ ಕಾಂಗ್ರೆಸ್ ಕಚೇರಿ ತೆರೆಯುವ ಪ್ಲಾನ್ ಅನ್ನು ಕೆಪಿಸಿಸಿ ಮಾಡಿತ್ತು. ಕಾಂಗ್ರೆಸ್ ನಾಯಕರಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆ ಭಾನುವಾರ ಪುತ್ರ 'ವಿನಯ ನಿವಾಸ' ವನ್ನು ಖಾಸಗಿಯವರಿಗೆ ಮಾರಾಟ ಮಾಡಲು ಮುಂದಾಗಿ ಪತ್ರಿಕಾ ಪ್ರಕಟಣೆ ಕೊಟ್ಟಿದ್ದಾರೆ.
ಇದನ್ನೂ ಓದಿ :ವೆಂಕಟಪ್ಪ ಆರ್ಟ್ ಗ್ಯಾಲರಿ ನವೀಕರಣ: ಮುಂದಿನ ತಿಂಗಳು ಹೊಸ ರೂಪದಲ್ಲಿ ಕಾರ್ಯಾರಂಭ