ಕರ್ನಾಟಕ

karnataka

ETV Bharat / state

ಮೆಜೆಸ್ಟಿಕ್ ನಿಲ್ದಾಣದಲ್ಲಿ ದಟ್ಟಣೆ ತಪ್ಪಿಸಲು ಮತ್ತೊಂದು ಪ್ರವೇಶ ದ್ವಾರ ತೆರೆದ ನಮ್ಮ ಮೆಟ್ರೋ - Namma Metro - NAMMA METRO

ಮೆಜೆಸ್ಟಿಕ್ ನಿಲ್ದಾಣದಲ್ಲಿ ದಟ್ಟಣೆ ತಡೆಯಲು ಬೆಂಗಳೂರು ಮೆಟ್ರೋ ರೈಲು ಸಂಸ್ಥೆ ಮತ್ತೊಂದು ಪ್ರವೇಶ ದ್ವಾರ ತೆರೆದಿದೆ.

NAMMA BENGALURU METRO
ನೂತನ ಪ್ರವೇಶ ದ್ವಾರ (ETV Bharat)

By ETV Bharat Karnataka Team

Published : Sep 3, 2024, 7:56 AM IST

ಬೆಂಗಳೂರು: ಬೆಂಗಳೂರು ಮೆಟ್ರೋ ರೈಲು ಪ್ರಯಾಣಿಕರ ಅನುಕೂಲಕ್ಕಾಗಿ ನಾಡಪ್ರಭು ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್‌ನಲ್ಲಿ ಹಸಿರು ಮಾರ್ಗದಿಂದ ನೇರಳೆ ಮಾರ್ಗಕ್ಕೆ ಬದಲಾಯಿಸುವ ಮತ್ತೊಂದು ಪ್ರವೇಶ ದ್ವಾರವನ್ನು ಸೋಮವಾರ ತೆರೆಯಲಾಗಿದೆ.

ಬೆಂಗಳೂರಿನ ನಮ್ಮ ಮೆಟ್ರೋ 73 ಕಿ.ಮೀ. ಜಾಲ ಹೊಂದಿದ್ದು, ದೇಶದ ಎರಡನೇ ಅತೀ ದೊಡ್ಡ ಮೆಟ್ರೋ ನಗರಗಳ ಸಾಲಿಗೆ ಸೇರಿದೆ. ದಿನೇ ದಿನೇ ಹೆಚ್ಚಾಗುತ್ತಿರುವ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಮೆಟ್ರೋ ಹೊಸ ಉಪಕ್ರಮ ತರುತ್ತಿದ್ದು, ಇದೀಗ ಮೆಜೆಸ್ಟಿಕ್ ಇಂಟರ್ ಚೇಂಜ್ ನಿಲ್ದಾಣದಲ್ಲಿ ಹೊಸ ಸೌಲಭ್ಯ ಕಲ್ಪಿಸಲಾಗಿದೆ.

ಮೇ 21ರಂದು ಮೊದಲ ಮೆಜೆಸ್ಟಿಕ್ ನಿಲ್ದಾಣದಲ್ಲಿ ಪ್ರವೇಶ ದ್ವಾರ ತೆರೆಯಲಾಗಿತ್ತು. ಇದೀಗ ಮತ್ತೊಂದು ಪ್ರವೇಶ ದ್ವಾರ ತೆರೆಯುವ ಮೂಲಕ ನಿಲ್ದಾಣದಲ್ಲಿ ದಟ್ಟಣೆ ತಪ್ಪಿಸಲು ಮತ್ತಷ್ಟು ಕ್ರಮ ಕೈಗೊಳ್ಳಲಾಗುತ್ತಿದೆ.

56 ರೈಲುಗಳು, 7 ಲಕ್ಷಕ್ಕೂ ಅಧಿಕ ಪ್ರಯಾಣಿಕರು:ನಮ್ಮಮೆಟ್ರೋದ ಹಸಿರು ಮಾರ್ಗ ಹಾಗೂ ನೇರಳೆ ಮಾರ್ಗದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚು. ಈ ಮಾರ್ಗದಲ್ಲಿ 56 ರೈಲುಗಳು ನಿತ್ಯ ಓಡಾಡುತ್ತಿವೆ. 7 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಪ್ರತಿನಿತ್ಯ ಮೆಟ್ರೋ ಅವಲಂಬಿಸಿದ್ದಾರೆ.

ಇದನ್ನೂ ಓದಿ:12 ವರ್ಷಗಳಲ್ಲೇ ನಮ್ಮ ಮೆಟ್ರೋದಲ್ಲಿ ದಾಖಲೆ ಪ್ರಯಾಣಿಕರ ಸಂಚಾರ - Namma Metro Record

ABOUT THE AUTHOR

...view details