ಕರ್ನಾಟಕ

karnataka

ETV Bharat / state

ಗೆಳೆಯನ ಜೊತೆ ವಿಡಿಯೋ ಕಾಲ್​: ಅಕ್ಕನಿಂದಲೇ ತಂಗಿಗೆ ಬ್ಲ್ಯಾಕ್​ಮೇಲ್, ಪ್ರಕರಣ ದಾಖಲು

ತಂಗಿ ನೀಡಿದ ದೂರಿನನ್ವಯ ಆಕೆಯ ಬಾಯ್​ಫ್ರೆಂಡ್​ ಸೇರಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Bengaluru
ಕೆಂಗೇರಿ ಪೊಲೀಸ್​ ಠಾಣೆ (ETV Bharat)

By ETV Bharat Karnataka Team

Published : 4 hours ago

Updated : 4 hours ago

ಬೆಂಗಳೂರು: ಅಕ್ಕನೇ ತನ್ನ ಬಾಯ್ ಫ್ರೆಂಡ್ ಜೊತೆ ಸೇರಿ ತಂಗಿಯನ್ನು ಬ್ಲ್ಯಾಕ್​ಮೇಲ್ ಮಾಡಿದ ಆರೋಪದಡಿ ಪ್ರಕರಣ ದಾಖಲಾಗಿದೆ. 37 ವರ್ಷದ ಮಹಿಳೆಯೊಬ್ಬರು ನೀಡಿದ ದೂರಿನ ಅನ್ವಯ ಆಕೆಯ ಬಾಯ್ ಫ್ರೆಂಡ್, ಅಕ್ಕ ಹಾಗೂ ಅಕ್ಕನ ಬಾಯ್ ಫ್ರೆಂಡ್ ವಿರುದ್ಧ ಕೆಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರುದಾರ ಮಹಿಳೆ ವಿವಾಹಿತಳಾಗಿದ್ದು, ತನ್ನ ಬಾಲ್ಯ ಸ್ನೇಹಿತನ ಜೊತೆ ಪ್ರೀತಿ ಮುಂದುವರೆಸಿದ್ದಳು. 2022 - 23ರವರೆಗಿನ ಅವಧಿಯಲ್ಲಿ ಕೆಂಗೇರಿಯಲ್ಲಿರುವ ತನ್ನ ಅಕ್ಕ‌ನ ಮನೆಗೆ ಹೋಗುತ್ತಿದ್ದ ದೂರುದಾರೆ, ತನ್ನ ಬಾಯ್ ಫ್ರೆಂಡ್ ಜೊತೆ ಮಾತನಾಡುತ್ತಿದ್ದಳು. ಆ ವೇಳೆ ತನ್ನ ಬಾಯ್ ಫ್ರೆಂಡ್ ಜೊತೆ ವಿಡಿಯೋ ಕಾಲ್ ಮಾಡಿ ಮಾತನಾಡಿದ್ದಳು.

ಆದರೆ, ಕಾಲ್ ರೆಕಾರ್ಡ್ ಮಾಡಿಕೊಂಡಿದ್ದ ಆತ ಅದನ್ನು ದೂರುದಾರೆಯ ಅಕ್ಕ ಹಾಗೂ ಆಕೆಯ ಬಾಯ್ ಫ್ರೆಂಡ್​ಗೆ ತೋರಿಸಿದ್ದಾನೆ. ನಂತರ ಅಕ್ಕ ಆಕೆಯ ಗೆಳೆಯ ಹಾಗೂ ತಂಗಿಯ ಗೆಳೆಯನ ಜೊತೆ ಸೇರಿ ದೂರುದಾರ ಮಹಿಳೆಯನ್ನು ಬೆದರಿಸಲಾರಂಭಿಸಿದ್ದಾರೆ. 80 ಸಾವಿರ ಹಣ ನೀಡದಿದ್ದರೆ ವಿಡಿಯೋಗಳನ್ನು ದೂರುದಾರಳ ಗಂಡನಿಗೆ ತೋರಿಸುವುದಾಗಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಬೆದರಿಸುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ದೂರಿನನ್ವಯ ಮೂವರ ವಿರುದ್ಧ ಕೆಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ನಕಲಿ ಕೋರ್ಟ್ ನಡೆಸಿ 5 ವರ್ಷದಿಂದ ತೀರ್ಪು ನೀಡುತ್ತಿದ್ದ ಖೊಟ್ಟಿ ಜಡ್ಜ್​!

Last Updated : 4 hours ago

ABOUT THE AUTHOR

...view details