ETV Bharat / state

'ಚನ್ನಪಟ್ಟಣ ನನ್ನ ಕ್ಷೇತ್ರ ಎಂಬ ಪ್ರತಿಷ್ಠೆ ಬಿಟ್ಟು ಕಾಂಗ್ರೆಸ್ ಎದುರಿಸಬೇಕು': ಹೆಚ್​ಡಿಕೆಗೆ ಪ್ರೀತಂ ಗೌಡ ಟಕ್ಕರ್​

ಎನ್‌ಡಿಎಯಿಂದ ಸಿ.ಪಿ. ಯೋಗೇಶ್ವರ್​ ಅವರಿಗೆ ಟಿಕೆಟ್ ಸಿಕ್ಕಿದ್ದಿದ್ರೆ ಗೆಲ್ತಿದ್ರು. ಗೆಲ್ಲುವಂಥ ಅಭ್ಯರ್ಥಿಯನ್ನು ಯಾಕೆ ಕಳ್ಕೊಂಡೆವು ಅಂತ ಪರಾಮರ್ಶೆ ಮಾಡ್ತೇವೆ ಎಂದು ಬಿಜೆಪಿ ನಾಯಕ ಪ್ರೀತಂ ಗೌಡ ಹೇಳಿದ್ದಾರೆ.

ಬಿಜೆಪಿ ನಾಯಕ ಪ್ರೀತಂ ಗೌಡ
ಬಿಜೆಪಿ ನಾಯಕ ಪ್ರೀತಂ ಗೌಡ (ETV Bharat)
author img

By ETV Bharat Karnataka Team

Published : Oct 23, 2024, 4:48 PM IST

ಬೆಂಗಳೂರು: ಮೈತ್ರಿಯಾಗಿಯೂ ಲೋಕಸಭಾ ಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರದಲ್ಲಿ ಮತ ಗಳಿಕೆ ಕಡಿಮೆಯಾಗಿತ್ತು. ಹಿಂದಿನ ಚುನಾವಣೆಗೂ, ಉಪ ಚುನಾವಣೆಯ ಕಾಲಘಟ್ಟದ ಇವತ್ತಿನ ಪರಿಸ್ಥಿತಿ ಬೇರೆ ಇದೆ. ಇದನ್ನು ಅವಲೋಕನ ಮಾಬೇಕಾಗುತ್ತದೆ. ಅದನ್ನು ಬಿಟ್ಟು ಇದು ನನ್ನ ಕ್ಷೇತ್ರ, ನನ್ನ ಹಿಡಿತದಲ್ಲಿದೆ ಅನ್ನೋ ವೈಯಕ್ತಿಕ ಪ್ರತಿಷ್ಠೆಗಳನ್ನ ನಾವೆಲ್ಲ ಬಿಟ್ಟು ಕಾಂಗ್ರೆಸ್ ಅನ್ನು ಎದುರಿಸಬೇಕಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ಪರೋಕ್ಷವಾಗಿ ಹೆಚ್​ಡಿಕೆಗೆ ಟಕ್ಕರ್​ ಕೊಟ್ಟಿದ್ದಾರೆ.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಹಜವಾಗಿ ಸಿ.ಪಿ. ಯೋಗೇಶ್ವರ್​ ಅವರಿಗೆ ಶಾಸಕ ಆಗುವ ಆಸೆ ಇತ್ತು. ಎನ್‌ಡಿಎಯಿಂದ ಸಿ.ಪಿ. ಯೋಗೇಶ್ವರ್​ ಅವರಿಗೆ ಟಿಕೆಟ್ ಸಿಕ್ಕಿದ್ದಿದ್ರೆ ಗೆಲ್ತಿದ್ರು. ಗೆಲ್ಲುವಂಥ ಅಭ್ಯರ್ಥಿಯನ್ನು ಯಾಕೆ ಕಳ್ಕೊಂಡೆವು ಅಂತ ಪರಾಮರ್ಶೆ ಮಾಡ್ತೇವೆ. ನಮ್ಮ ಎನ್‌ಡಿಎ ಮಿತ್ರ ಪಕ್ಷ(ಜೆಡಿಎಸ್) ಸಿಪಿವೈ ಅವರನ್ನು ಬಿಜೆಪಿ ಅಭ್ಯರ್ಥಿ ಮಾಡಲು ಒಪ್ಪಬಹುದಿತ್ತು ಎಂದು ಅಭಿಪ್ರಾಯಪಟ್ಟರು.

ಬಿಜೆಪಿ ನಾಯಕ ಪ್ರೀತಂ ಗೌಡ (ETV Bharat)

ಯೋಗೇಶ್ವರ್ ಅನಿವಾರ್ಯ ಕಾರಣ, ವೈಯಕ್ತಿಕ ಕಾರಣದಿಂದ ಪಕ್ಷ ತೊರೆದಿದ್ದಾರೆ, ಅವರು ನಮ್ಮ ಪಕ್ಷದ ನಿರೀಕ್ಷೆ ಹುಸಿ ಮಾಡಿ ಪಕ್ಷ ತೊರೆದು ಹೋಗಿದ್ದಾರೆ. ಚನ್ನಪಟ್ಟಣದಲ್ಲಿ ಶಾಸಕರಾಗಬೇಕೆಂಬ ಅಪೇಕ್ಷೆ ಅವರಿಗಿತ್ತು. ಯಾವ ಕಾರಣಕ್ಕೆ ಬಿಜೆಪಿಯಿಂದ ಸ್ಪರ್ಧಿಸಲು ಸಿಪಿವೈ ಅವರಿಗೆ ಕುಮಾರಸ್ವಾಮಿ ಅವಕಾಶ‌ ಕೊಡಲಿಲ್ವೋ ಗೊತ್ತಿಲ್ಲ, ಇದರ ಬಗ್ಗೆ ನಾನು ಮಾತಾಡಲ್ಲ. ಆದರೆ ಚನ್ನಪಟ್ಟಣದಲ್ಲಿ ಗೆಲ್ಲುವಂತಹ ಅಭ್ಯರ್ಥಿ ಯೋಗೇಶ್ವರ್ ಆಗಿದ್ದರು ಎಂದು ಹೇಳಿದರು.

ಯೋಗೇಶ್ವರ್ ಅವರು ಬಿಜೆಪಿಯ ಹಿರಿಯ ನಾಯಕ ಆಗಿದ್ದರು. ಅವರದ್ದೇ ಆದ ಸಾಮರ್ಥ್ಯ, ಪ್ರಭಾವ ಇತ್ತು. ಅವರು ಪಕ್ಷ ಬಿಟ್ಟಿದ್ದು ನನಗೆ ವೈಯಕ್ತಿಕವಾಗಿ ಬೇಸರ ಆಗಿದೆ. ಅನಿವಾರ್ಯ ಕಾರಣಗಳಿಂದ ಅವರು ಪಕ್ಷ ಬಿಟ್ಟು ಅನ್ಯ ಪಕ್ಷಕ್ಕೆ ಹೋಗಿದ್ದಾರೆ. ನಮ್ಮ ಕಾರ್ಯಕರ್ತರಿಗೂ ಇದರಿಂದ ಬೇಸರ ಆಗಿದೆ ಎಂದರು.

ಕುಮಾರಸ್ವಾಮಿ ಅವರು ಬಿಜೆಪಿಯಲ್ಲಿನ ಒಕ್ಕಲಿಗ ನಾಯಕರನ್ನು ರಾಜಕೀಯವಾಗಿ ಮುಗಿಸುತ್ತಿದ್ದಾರೆ ಎಂಬ ಯೋಗೇಶ್ವರ್ ಆರೋಪ ಕುರಿತು ಪ್ರತಿಕ್ರಿಯಿಸಿ, ಅದು ಅವರ ವೈಯಕ್ತಿಕ ವಿಚಾರ. ಆ ಬಗ್ಗೆ ನಾನು ಮಾತಾಡಲ್ಲ. ಆದರೆ ಪ್ರೀತಂ ಗೌಡ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ, ನನ್ನನ್ನು ನಮ್ಮ ನಾಯಕರು ಬೆಳೆಸಿದ್ದಾರೆ. ಮೈತ್ರಿಯಲ್ಲಿ ಸಂಘರ್ಷ ಮಾಡಿಕೊಂಡು ಬಿಟ್ಟು ಹೋಗದಂತೆ ಇನ್ಮುಂದೆ ನಾವೆಲ್ಲ ಎಚ್ಚರಿಕೆ ವಹಿಸುತ್ತೇವೆ. ನಾವೆಲ್ಲ ಗ್ರೌಂಡ್ ಲೆವೆಲ್​ನಲ್ಲಿ ಸಕ್ರಿಯರಾಗುತ್ತೇವೆ ಎಂದು ಹೇಳಿದರು.

ರಾಜಕೀಯದಲ್ಲಿ ಯಾವಾಗಲೂ 1+1 ಎಂದರೆ ಅದು 2 ಆಗಲ್ಲ, ಕೆಲವೊಮ್ಮೆ 11 ಆಗುತ್ತೆ. ಮತ್ತೆ ಕೆಲವೊಮ್ಮೆ ಮೈನಸ್ ಆಗಿ ಝೀರೋನೂ ಆಗುತ್ತೆ. ಯಾರೇ ಎನ್‌ಡಿಎ ಅಭ್ಯರ್ಥಿ ಆದರೂ ನಾವೆಲ್ಲ ಹೋಗಿ ಪ್ರಚಾರ ಮಾಡ್ತೇವೆ, ಎನ್‌ಡಿಎ ಅಭ್ಯರ್ಥಿ ಗೆಲ್ಲಿಸ್ತೇವೆ ಎಂದರು.

ಇದನ್ನೂ ಓದಿ: ಚನ್ನಪಟ್ಟಣದಲ್ಲಿ ನಾಳೆ ನಾಮಪತ್ರ ಸಲ್ಲಿಕೆ, ಮಲ್ಲಿಕಾರ್ಜುನ ಖರ್ಗೆಯಿಂದ ಅಭ್ಯರ್ಥಿಗಳ ಪಟ್ಟಿ ಅಂತಿಮ: ಡಿ.ಕೆ.ಶಿವಕುಮಾರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.