ಕರ್ನಾಟಕ

karnataka

ETV Bharat / state

ಹಾವೇರಿ ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಬಿಜೆಪಿ‌ ಪಾಲು: ಕಾಂಗ್ರೆಸ್​​ಗೆ ಮುಖಭಂಗ - BJP WIN IN HAVERI NAGARASABHE - BJP WIN IN HAVERI NAGARASABHE

ಹಾವೇರಿ ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಬಿಜೆಪಿ ಗೆದ್ದುಕೊಂಡಿದೆ. ಈ ಮೂಲಕ ಕಾಂಗ್ರೆಸ್​ ಹಿನ್ನಡೆ ಅನುಭವಿಸಿದೆ.

nagarasabhe-election-bjp-win
ಹಾವೇರಿ ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಬಿಜೆಪಿ‌ ಪಾಲು: ಕಾಂಗ್ರೆಸ್​​ಗೆ ಮುಖಭಂಗ (ETV Bharat)

By ETV Bharat Karnataka Team

Published : Sep 4, 2024, 8:54 PM IST

ಹಾವೇರಿ: ಹಾವೇರಿ ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಬಿಜೆಪಿ‌ ಪಾಲಾಗಿದ್ದು ಕಾಂಗ್ರೆಸ್ ತೀವ್ರ ಮುಖಭಂಗ ಅನುಭವಿಸಿದೆ. ನಗರಸಭೆಯಲ್ಲಿ
ಬಹುಮತ ಇದ್ದರೂ ಸಹ ಅಧ್ಯಕ್ಷ & ಉಪಾಧ್ಯಕ್ಷ ಸ್ಥಾನದ ಗದ್ದಿಗೆ ಕಾಂಗ್ರೆಸ್ ಕೈ ತಪ್ಪಿದೆ. ಬಿಜೆಪಿ ಅಭ್ಯರ್ಥಿ ಶಶಿಕಲಾ ರಾಮು ಮಾಳಗಿ 17 ಮತ ಪಡೆದು ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಸಂಸದ ಬೊಮ್ಮಾಯಿ ಸೇರಿದಂತೆ ವಿವಿಧ ಜನಪ್ರತಿನಿಧಿಗಳು ಅಭಿನಂದನೆ ಸಲ್ಲಿಸಿದ್ದಾರೆ.

ಕಾಂಗ್ರೆಸ್​ ಸೋಲಿಗೆ ಕಾರಣಗಳೇನು?:ಕಾಂಗ್ರೆಸ್ ಅಭ್ಯರ್ಥಿ ರೇಣುಕಾ 11 ಮತ ಪಡೆದು ಪರಾಜಿತರಾಗಿದ್ದಾರೆ. ಮತದಾನ ಪ್ರಕ್ರಿಯಲ್ಲಿ ಕಾಂಗ್ರೆಸ್​ನ 6 ಸದಸ್ಯರು ಗೈರಾಗುವ ಮೂಲಕ ಹಾವೇರಿ ನಗರಸಭೆ ಬಿಜೆಪಿಗೆ ತೆಕ್ಕೆಗೆ ಸೇರಲು ಪರೋಕ್ಷವಾಗಿ ನೆರವಾದರು. 34 ಸದಸ್ಯರ ಸಂಖ್ಯೆ ಹೊಂದಿರುವ ಹಾವೇರಿ ನಗರಸಭೆಯಲ್ಲಿ 15 ಸದಸ್ಯರು ಕಾಂಗ್ರೆಸನವರಿದ್ದಾರೆ. 19 ಜನ ಬಿಜೆಪಿಯವರಿದ್ದು 7 ಪಕ್ಷೇತರರಿದ್ದರು. ಇದಲ್ಲದೇ ಸ್ಥಳೀಯ ಶಾಸಕ, ವಿಧಾನಪರಿಷತ್ ಸದಸ್ಯ ಮತ್ತು ಸಂಸದರನ್ನು ಹಿಡಿದು 34 ಸಂಖ್ಯಾಬಲವನ್ನು ಹಾವೇರಿ ನಗರಸಭೆ ಹೊಂದಿದೆ.

ಬುಧವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ನ 15 ಸದಸ್ಯರಲ್ಲಿ ಆರು ಮೆಂಬರ್ಸ್​ ಗೈರಾಗಿದ್ದು, ಬಿಜೆಪಿಯವರಿಗೆ ವರದಾನವಾಗಿ ಪರಿಣಮಿಸಿದೆ. ಗೈರಾದ ಕಾಂಗ್ರೆಸ್ ಸದಸ್ಯರ ವಿರುದ್ದ ಶಿಸ್ತುಕ್ರಮ ಕೈಗೊಳ್ಳುವಂತೆ ಪಕ್ಷದ ನಾಯಕರಿಗೆ ಪತ್ರ ಬರೆದಿರುವದಾಗಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ ತಿಳಿಸಿದ್ದಾರೆ.

ಇದನ್ನು ಓದಿ:ಪಿಂಚಣಿದಾರರಿಗೆ ಗುಡ್​ ನ್ಯೂಸ್​; ಯಾವುದೇ ಬ್ಯಾಂಕಿನ ಯಾವುದೇ ಶಾಖೆಯಿಂದ ಪಿಂಚಣಿ ಪಡೆಯುವ ವ್ಯವಸ್ಥೆ 2025ರ ಜ.1 ರಿಂದ ಜಾರಿ - CENTRALIZED PENSION SYSTEM

ABOUT THE AUTHOR

...view details