ಮೈಸೂರು:ವಿಶ್ವ ಪ್ರಸಿದ್ಧ ಅಂಬಾವಿಲಾಸಅರಮನೆಯ ಆವರಣದಲ್ಲಿ ಮಾಗಿ ಉತ್ಸವದ ಪ್ರಯುಕ್ತ ಡಿಸೆಂಬರ್ 21ರಿಂದ 31ರವರೆಗೆ ಆಯೋಜಿಸಲಾದ ಪುಷ್ಪ ಪ್ರದರ್ಶನಕ್ಕೆ ಒಟ್ಟು 1,34,944 ಜನ ಭೇಟಿ ನೀಡಿರುವುದಾಗಿ ಕಾರ್ಯಕ್ರಮದ ಆಯೋಜಕರು ಮಾಹಿತಿ ನೀಡಿದ್ದಾರೆ.
ವರ್ಷಾಂತ್ಯದಲ್ಲಿ ಅರಮನೆ ಅಡಳಿತ ಮಂಡಳಿ ವತಿಯಿಂದ ಆಯೋಜಿಸಲಾದ ಪುಷ್ಪ ಪ್ರದರ್ಶನದಲ್ಲಿ ಬಗೆಬಗೆ ಹೂಗಳ ಸೌಂದರ್ಯವನ್ನು ಜನರು ಕಣ್ತುಂಬಿಕೊಂಡಿದ್ದಾರೆ.
ದೆಹಲಿಯ ಅಕ್ಷರಧಾಮ ದೇಗುಲ (ETV Bharat) ಗೊಂಬೆ ಮನೆ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿತ್ತು. ಪುಷ್ಪಗಳಲ್ಲಿ ಅರಳಿ ನಿಂತ ಹಲವು ಬಗೆಯ ಆಕೃತಿಗಳು, ದೆಹಲಿಯ ಅಕ್ಷರಧಾಮ ದೇಗುಲ, ಚಾಮುಂಡಿ ಬೆಟ್ಟದ ನಂದಿ ವಿಗ್ರಹ, ನೃತ್ಯ ಕಲಾವಿದರ ಗೊಂಬೆಗಳು, ಕೈಲಾಸ ಪರ್ವತ, ಪಕ್ಷಿಗಳು, ಕಾರ್ಗಿಲ್ ವಿಜಯಸ್ತಂಭ, ದಕ್ಷಿಣ ಕಾಶಿಯ ನಂಜುಂಡೇಶ್ವರ, ಗಂಡಭೇರುಂಡ, ಮುಮ್ಮಡಿ ಕೃಷ್ಣರಾಜ ಒಡೆಯರ್ ಸೇರಿದಂತೆ ಹಲವು ಪ್ರತಿಕೃತಿಗಳು ಜನರ ಗಮನ ಸೆಳೆದವು.
ರಾಷ್ಟ್ರಪಕ್ಷಿ ನವಿಲು (ETV Bharat) ಡಿ.21ರಂದು ಸಂಜೆ ಪುಷ್ಪ ಪ್ರದರ್ಶನ ಉದ್ಘಾಟನೆಗೊಂಡಿದ್ದು, ಡಿ.31ರವರೆಗೆ ಒಟ್ಟು 10 ದಿನಗಳ ಕಾಲ ಪ್ರದರ್ಶನ ನಡೆದಿದೆ. ಪ್ರತಿದಿನ ಬೆಳಗ್ಗೆ 10ರಿಂದ ರಾತ್ರಿ 9ರವರೆಗೆ ಸಾರ್ವಜನಿಕ ವೀಕ್ಷಣೆಗೆ ಅವಕಾಶ ನೀಡಲಾಗಿತ್ತು. ವಯಸ್ಕರು ಮತ್ತು ವಿದೇಶಿಯರಿಗೆ 30 ರೂ. ಮತ್ತು 10ರಿಂದ 18 ವರ್ಷದ ಒಳಗಿನ ಮಕ್ಕಳಿಗೆ 20 ರೂ. ಪ್ರವೇಶ ಶುಲ್ಕ ನಿಗದಿ ಮಾಡಲಾಗಿತ್ತು. 10 ವರ್ಷದೊಳಗಿನ ಮಕ್ಕಳಿಗೆ ಉಚಿತ ಪ್ರವೇಶ ಕಲ್ಪಸಲಾಗಿತ್ತು. ಹಿರಿಯರು, ಕಿರಿಯರು, ಯುವಕರು ಸೇರಿದಂತೆ ದೇಶ-ವಿದೇಶದ ಪ್ರವಾಸಿಗರು ಭೇಟಿ ನೀಡಿ ಹೂಗಳ ಸೌಂದರ್ಯ ಸವಿದರು ಎಂದು ಅರಮನೆ ಅಡಳಿತ ಮಂಡಳಿ ಮಾಹಿತಿ ನೀಡಿದೆ.
ಕಾರ್ಗಿಲ್ ವಿಜಯಸ್ತಂಭ (ETV Bharat) ಇದನ್ನೂ ಓದಿ: ಅರಮನೆ ಫಲಪುಷ್ಪ ಪ್ರದರ್ಶನಕ್ಕೆ ಸಚಿವ ಡಾ. ಹೆಚ್ ಸಿ ಮಹದೇವಪ್ಪ ಚಾಲನೆ - DR H C MAHADEVAPPA