ಮೈಸೂರು:ಲೋಕಸಭಾ ಸಾರ್ವತ್ರಿಕ ಚುನಾವಣೆಗೆ 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕ ಮತದಾರರು ಹಾಗೂ ಶೇ.40ಕ್ಕಿಂತ ಹೆಚ್ಚು ಅಂಗವಿಕಲತೆ ಇರುವ ವಿಶೇಷಚೇತನ ಮತದಾರರ ಮಾಹಿತಿ ಸಂಗ್ರಹಿಸಿ ಅವರಿಗೆ ಮನೆಯಲ್ಲೇ ಮತದಾನ ಮಾಡುವ ವ್ಯವಸ್ಥೆಯನ್ನು ಏ.13ರಿಂದ 17ರವರೆಗೆ ಮಾಡಲಾಗಿದೆ.
ಮೈಸೂರು-ಕೊಡಗು ಕ್ಷೇತ್ರ: ಏ.13ರಿಂದ 17ರವರೆಗೆ ಹಿರಿಯ ನಾಗರಿಕರಿಗೆ ಮನೆಯಲ್ಲೇ ಮತದಾನ ಅವಕಾಶ - Mysuru Kodagu Constituency
85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕ ಮತದಾರರು ಹಾಗೂ ಶೇ.40ಕ್ಕಿಂತ ಹೆಚ್ಚು ವಿಶೇಷಚೇತನ ಮತದಾರರಿಗೆ ಮನೆಯಲ್ಲಿ ಮತದಾನ ಮಾಡುವ ಅವಕಾಶ ಕಲ್ಪಿಸಲಾಗಿದೆ ಎಂದು ಚುನಾವಣಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Published : Apr 12, 2024, 10:10 PM IST
ವಿಧಾನಸಭಾ ಕ್ಷೇತ್ರವಾರು ಹೋಂ ವೋಟಿಂಗ್ ನಡೆಯುವ ದಿನಾಂಕಗಳು: ಮಡಿಕೇರಿಯಲ್ಲಿ(208) ಏ.15 ರಿಂದ 17 ರವರೆಗೆ, ವಿರಾಜಪೇಟೆ(209) ಏ.15 ರಿಂದ 17ರ ವರೆಗೆ, ಪಿರಿಯಾಪಟ್ಟಣ(210) ಏ.14 ರಿಂದ 15ರ ವರೆಗೆ, ಹುಣಸೂರು(212) ಏ.15 ರಿಂದ 16ರ ವರೆಗೆ, ಚಾಮುಂಡೇಶ್ವರಿ(215) ಏ.13 ರಿಂದ 14ರ ವರೆಗೆ, ಕೃಷ್ಣರಾಜ(216) ಏ.13 ರಿಂದ 14ರ ವರೆಗೆ, ಚಾಮರಾಜ(217) ಏ.14 ರಿಂದ 15 ಹಾಗೂ ನರಸಿಂಹರಾಜ(218)ದಲ್ಲಿ ಏ.13 ರಿಂದ 14 ರ ವರೆಗೆ ಮನೆಯಲ್ಲಿ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಮೈಸೂರು ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂಓದಿ:ದಿಂಗಾಲೇಶ್ವರ ಶ್ರೀ ಚುನಾವಣೆಯಲ್ಲಿ ಸ್ಪರ್ಧಿಸುವುದು ಬೇಡ: ಶಿರಹಟ್ಟಿ ಭಕ್ತ ವೃಂದ - Dingaleshwar Swamiji