ಕರ್ನಾಟಕ

karnataka

ETV Bharat / state

ಸರ್ಕಾರದಿಂದ ಒಂದೇ ಒಂದು ನಿವೇಶನವನ್ನೂ ನಾನು, ನನ್ನ ಕುಟುಂಬ ಪಡೆದಿಲ್ಲ: ಸಚಿವ ಎಂ.ಬಿ. ಪಾಟೀಲ್ - Government Site - GOVERNMENT SITE

ಸರ್ಕಾರದಿಂದ ನಾನಾಗಲಿ, ನನ್ನ ಕುಟುಂಬವಾಗಲಿ ಒಂದೇ ಒಂದು ನಿವೇಶನ ಪಡೆದಿಲ್ಲ ಎಂದು ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.

ಸಚಿವ ಎಂ.ಬಿ.ಪಾಟೀಲ್
ಸಚಿವ ಎಂ.ಬಿ.ಪಾಟೀಲ್ (ETV Bharat)

By ETV Bharat Karnataka Team

Published : Sep 2, 2024, 6:04 PM IST

ಬೆಂಗಳೂರು:'ನಾನಾಗಲಿ, ನಮ್ಮ ಕುಟುಂಬದ ಇತರರಾಗಲಿ ಜಿ-ಕ್ಯಾಟಗರಿ, ಕೆಹೆಚ್​​ಬಿ ಅಥವಾ ಕೆಐಎಡಿಬಿಯ ನಿವೇಶನಗಳನ್ನು ಸರ್ಕಾರದಿಂದ ಪಡೆದುಕೊಂಡಿಲ್ಲ' ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಸ್ಪಷ್ಟಪಡಿಸಿದ್ದಾರೆ.

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ನಮ್ಮ ಕುಟುಂಬಕ್ಕೂ ಬಾಗ್ಮನೆ ಕುಟುಂಬಕ್ಕೂ 25-30 ವರ್ಷಗಳಿಂದಲೂ ಪರಸ್ಪರ ಒಡನಾಟವಿದೆ. ಬೆಂಗಳೂರಿನ ಅಭಿವೃದ್ಧಿಗೆ ಪ್ರೆಸ್ಟೀಜ್, ಬ್ರಿಗೇಡ್, ಎಂಬೆಸಿ, ಮಂತ್ರಿ, ಬಾಗ್ಮನೆ ಸಮೂಹ ಸೇರಿದಂತೆ ಹಲವು ಉದ್ಯಮ ಸಮೂಹಗಳು ಕೊಡುಗೆ ನೀಡಿವೆ. ಎಲ್ಲ ಪಕ್ಷಗಳ ಸರ್ಕಾರಗಳ ಆಡಳಿತಾವಧಿಯಲ್ಲೂ ಈ ಸಂಸ್ಥೆಗಳು ಈ ರೀತಿ‌ ನಿವೇಶನ ಪಡೆದು, ಬೆಂಗಳೂರಿನ ಅಭಿವೃದ್ಧಿಗೆ ಕೊಡುಗೆ ನೀಡಿರುವುದನ್ನು ನಾರಾಯಣಸ್ವಾಮಿ ಅರ್ಥ ಮಾಡಿಕೊಳ್ಳಬೇಕು ಎಂದು ತಿರುಗೇಟು ನೀಡಿದರು.

ಬಾಗ್ಮನೆಯೊಂದಿಗೆ ನಮ್ಮ ಕುಟುಂಬ ಮಟ್ಟದ ವ್ಯವಹಾರಕ್ಕೂ ಸರ್ಕಾರದ ಮಟ್ಟದಲ್ಲಿ ಆಗುವ ನಿರ್ಧಾರಗಳಿಗೂ ಸಂಬಂಧವಿಲ್ಲ. ಬಾಗ್ಮನೆ ಸಂಸ್ಥೆಯವರು ಬೆಂಗಳೂರಿನ ಏರೋಸ್ಪೇಸ್ ಪಾರ್ಕಿನಲ್ಲಿ ಕೈಗಾರಿಕಾ ನಿವೇಶನ ಕೋರಿ ಅರ್ಜಿ ಹಾಕಿದ್ದರು. ಇಂತಹ ಸಂದರ್ಭದಲ್ಲಿ ನಾವು ಸಂಸ್ಥೆಯ ಅರ್ಹತೆ, ಸಾಧನೆಗಳನ್ನು ಮಾತ್ರ ಪರಿಗಣಿಸುತ್ತೇವೆ ಅಷ್ಟೇ. ನಾರಾಯಣಸ್ವಾಮಿ ಅವರಿಗೆ ಇಂತಹ ಸರಳ ಸತ್ಯ ಗೊತ್ತಾಗದೇ ಇರುವುದು ಆಶ್ಚರ್ಯಕರ ಸಂಗತಿ ಎಂದು ವಿವರಿಸಿದ್ದಾರೆ.

ವೈಯಕ್ತಿಕ ಮತ್ತು ಸರ್ಕಾರದ ಕೆಲಸಗಳನ್ನು ಪರಸ್ಪರ ತಳುಕು ಹಾಕಬಾರದು. ನಾರಾಯಣಸ್ವಾಮಿ ಇಂತಹ ಪ್ರಬುದ್ಧತೆಯನ್ನು ಪ್ರದರ್ಶಿಸಬೇಕು. ಇವರ ಮಾತುಗಳ ಹಿಂದೆ ಯಾರ ಕುಮ್ಮಕ್ಕು ಇದೆ ಎನ್ನುವುದು ಯಾರಿಗಾದರೂ ಅರ್ಥವಾಗುತ್ತದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಸಿಎಂ ಕುರ್ಚಿ ಖಾಲಿಯಿಲ್ಲ, ದೇಶಪಾಂಡೆ ಸಿಎಂ ಸ್ಥಾನಕ್ಕೆ ಆಸೆ ಪಡುವುದು ತಪ್ಪಲ್ಲ: ಡಿ.ಕೆ.ಶಿವಕುಮಾರ್ - D K Shivakumar

ಇದನ್ನೂ ಓದಿ:ಸಿಎಂ ಆಗುವ ಹಗಲು ಕನಸು ಕಾಣಬೇಡಿ: ಸಚಿವ ಎಂ.ಬಿ.ಪಾಟೀಲ್ ಟಾಂಗ್ - M B Patil

ABOUT THE AUTHOR

...view details